ಬೆಂಗಳೂರು: ಕರೊನಾ ಕ್ಷಣದಿಂದ ಕ್ಷಣಕ್ಕೆ ಹೆಚ್ಚುತ್ತಲೇ ಇರುವ ಭೀತಿಯ ನಡುವೆಯೂ ರಾಜ್ಯದ ಮಟ್ಟಿಗೆ ಸಮಾಧಾನ ತರುವ ಸಂಗತಿ ಇದು. ಕರ್ನಾಟಕದಲ್ಲಿ ಇದುವರೆಗೆ ಸೋಂಕಿತರಾದವರನ್ನು ಗಣನೆಗೆ ತೆಗೆದುಕೊಂಡರೆ ಶೇ.50ಕ್ಕಿಂತ ಹೆಚ್ಚು ಮಂದಿ ಗುಣಮುಖರಾಗಿದ್ದಾರೆ.
ಹೌದು. ಕರೊನಾ ಸೋಂಕು ಕರ್ನಾಟಕಕ್ಕೆ ಕಾಲಿಟ್ಟ ದಿನದಿಂದ ಇಂದಿನವರೆಗೆ ಒಟ್ಟು 16 ಲಕ್ಷದ ನಾಲ್ಕು ಸಾವಿರದ 924 ಮಂದಿ ಸೋಂಕಿಗೆ ಒಳಗಾಗಿದ್ದಾರೆ. ಈ ಪೈಕಿ 84 ಸಾವಿರದ 232 ಮಂದಿ ಗುಣಮುಖರಾಗಿ ಮನೆಗೆ ತೆರಳಿದ್ದಾರೆ.
ನಿನ್ನೆ ಸಂಜೆ 5 ಗಂಟೆಯಿಂದ ಇಂದು ಸಂಜೆ 5 ಗಂಟೆಯವರೆಗೆ 6,670 ಮಂದಿಗೆ ರಾಜ್ಯದಲ್ಲಿ ಹೊಸದಾಗಿ ಸೋಂಕು ತಗುಲಿದೆ. ಈ ಅವಧಿಯಲ್ಲಿ 3,951 ಮಂದಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.
ಇದಾಗಲೇ ಸೋಂಜು 2998 ಮಂದಿಯನ್ನು ಬಲಿ ಪಡೆದಿದ್ದು, ನಿನ್ನೆ ಸಂಜೆಯಿಂದ ಇಲ್ಲಿಯವರೆಗೆ ಒಂದೇ ದಿನ 101 ಮಂದಿ ಮೃತಪಟ್ಟಿದ್ದಾರೆ. 678 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಯಾವ್ಯಾವ ಜಿಲ್ಲೆಯಲ್ಲಿ ಎಷ್ಟೆಷ್ಟು ಮಂದಿ ಸೋಂಕಿಗೆ ಗುರಿಯಾಗಿದ್ದಾರೆ ಎಂಬ ಡಿಟೇಲ್ಸ್ ಇಲ್ಲಿದೆ ನೋಡಿ: