ನ್ಯೂಸ್

ಇಂದು ಸಿಬಿಎಸ್​ಇ 12ನೇ ತರಗತಿ ಫಲಿತಾಂಶ: ಇದರ ಸಂಪೂರ್ಣ ಡಿಟೇಲ್ಸ್​ ಇಲ್ಲಿದೆ ನೋಡಿ...

suchetana

ನವದೆಹಲಿ: ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಷನ್ (ಸಿಬಿಎಸ್​ಇ) 12ನೇ ತರಗತಿಯ ಫಲಿತಾಂಶವು ಇಂದು ಬಿಡುಗಡೆಯಾಗಲಿದೆ. ಮಧ್ಯಾಹ್ನ 2 ಗಂಟೆಗೆ ಫಲಿತಾಂಶ ಪ್ರಕಟಗೊಳ್ಳಲಿದೆ.

ಈ ಬಾರಿ ಕೋವಿಡ್​ ಹಿನ್ನೆಲೆಯಲ್ಲಿ ಪರೀಕ್ಷೆಯನ್ನು ಮಾಡಿರಲಿಲ್ಲ. ಆದ್ದರಿಂದ ಫಲಿತಾಂಶಕ್ಕೆ ಸಂಬಂಧಿಸಿದಂತೆ ಪರ್ಯಾಯ ರೀತಿಯಲ್ಲಿ ವ್ಯವಸ್ಥೆ ಮಾಡಲಾಗಿದೆ. ಫಲಿತಾಂಶವನ್ನು ಅಂತಿಮಗೊಳಿಸಲು ಮಂಡಳಿಯು ಪರ್ಯಾಯ ಮೌಲ್ಯಮಾಪನ ಯೋಜನೆಯನ್ನು ಅಳವಡಿಸಿಕೊಂಡಿದೆ.

ಪರೀಕ್ಷೆ ಪರಿಶೀಲಿಸುವುದು ಹೇಗೆ?

* ಸಿಬಿಎಸ್‌ಇ ಬೋರ್ಡ್​ ವೆಬ್​ಸೈಟ್​ cbse.nic.in ಗೆ ಲಾಗ್ ಇನ್ ಮಾಡಿ.

* ಮುಖಪುಟದಲ್ಲಿ, ಫಲಿತಾಂಶ ಲಿಂಕ್ ಮೇಲೆ .

* ರೋಲ್  ನಂಬರ್​, ನೋಂದಣಿ ಸಂಖ್ಯೆ, ಅಥವಾ ಇತರ ಅಗತ್ಯ ವಿವರಗಳೊಂದಿಗೆ ಲಾಗಿನ್ ಮಾಡಿ.

* ಫಲಿತಾಂಶವನ್ನು ಮುಂದಿನ ಪುಟದಲ್ಲಿ ಪ್ರದರ್ಶಿಸಲಾಗುತ್ತದೆ.

* ಪ್ರಿಂಟ್​ಔಟ್​ ಬೇಕಿದ್ದರೆ ತೆಗೆದುಕೊಳ್ಳಬಹುದು.

ಫಲಿತಾಂಶ ನೋಡಲು http://cbseresults.nic.in/ ಕ್ಲಿಕ್ಕಿಸಿ

DigiLocker ಆ್ಯಪ್​ ಇನ್​ಸ್ಟಾಲ್​ ಮಾಡಿಕೊಳ್ಳುವ ಮೂಲಕವೂ ಫಲಿತಾಂಶ ನೋಡಬಹುದು.