ರಕ್ಷಣಾ ಸಚಿವಾಲಯದ ಅಧೀನದಲ್ಲಿ ಕಾರ್ಯ ನಿರ್ವಹಿಸುವ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (ಬಿಇಎಲ್) ನವರತ್ನ ಸಂಸ್ಥೆಗಳಲ್ಲಿ ಒಂದಾಗಿದೆ. ಜಿಯಾಬಾದ್ ಹಾಗೂ ಕೋಟ್ದ್ವಾರ ಟಕದಲ್ಲಿ ಡೆಪ್ಯುಟಿ ಇಂಜಿನಿಯರ್ಸ್ ಇ-2 ಗ್ರೇಡ್ ಹುದ್ದೆಗಳಿಗೆ ಪರ್ಮನೆಂಟ್ ಆಧಾರದಲ್ಲಿ ನೇಮಕ ಮಾಡಿಕೊಳ್ಳಲಾಗುತ್ತಿದೆ. ಕರ್ನಾಟಕ, ಗುಜರಾತ್, ದೆಹಲಿ, ರಾಜಸ್ಥಾನ, ಉತ್ತರಪ್ರದೇಶ, ಹರಿಯಾಣ, ಪಂಜಾಬ್, ಮಹಾರಾಷ್ಟ್ರ ಅಥವಾ ದೇಶದ ಯಾವುದೇ ಭಾಗಕ್ಕಾದರೂ ನೇಮಕ ಮಾಡಬಹುದಾಗಿದೆ.
ಹುದ್ದೆ ವಿವರ
* ಡೆಪ್ಯುಟಿ ಇಂಜಿನಿಯರ್ (ಎಲೆಕ್ಟ್ರಾನಿಕ್ಸ್, ಎಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯುನಿಕೇಷನ್, ಎಲೆಕ್ಟ್ರಾನಿಕ್ಸ್ ಆ್ಯಂಡ್ ಟೆಲಿಕಮ್ಯುನಿಕೇಷನ್, ಕಮ್ಯುನಿಕೇಷನ್, ಟೆಲಿಕಮ್ಯುನಿಕೇಷನ್ ವಿಭಾಗ) - 24
(ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 12 ಸ್ಥಾನ, ಇತರ ಹಿಂದುಳಿದ ಅಭ್ಯರ್ಥಿಗಳಿಗೆ 6, ಎಸ್ಸಿಗೆ 3, ಎಸ್ಟಿಗೆ 3ಸ್ಥಾನ ಮೀಸಲಿರಿಸಲಾಗಿದೆ)
ಶೈಕ್ಷಣಿಕ ಅರ್ಹತೆ: ಇಲೆಕ್ಟ್ರಾನಿಕ್ಸ್/ ಇಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯುನಿಕೇಷನ್/ ಇಲೆಕ್ಟ್ರಾನಿಕ್ಸ್ ಆ್ಯಂಡ್ ಟೆಲಿ ಕಮ್ಯುನಿಕೇಷನ್ನಲ್ಲಿ ಪೂರ್ಣಾವಧಿಯ ಬಿಇ/ ಬಿ.ಟೆಕ್/ ಬಿಎಸ್ಸಿ ಪದವಿಯನ್ನು ಸಾಮಾನ್ಯವರ್ಗ, ಒಬಿಸಿ ಅಭ್ಯರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿರಬೇಕು, ಎಸ್ಸಿ, ಎಸ್ಟಿ ಅಭ್ಯರ್ಥಿಗಳು ಉತ್ತೀರ್ಣರಾಗಿದ್ದರೆ ಸಾಕು. ಕನಿಷ್ಠ ಒಂದು ವರ್ಷದ ವೃತ್ತಿ ಅನುಭವ ಕೇಳಲಾಗಿದೆ.
ವಯೋಮಿತಿ: 1.9.2022ಕ್ಕೆ ಅನ್ವಯವಾಗುವಂತೆ ಗರಿಷ್ಠ 25 ವರ್ಷ ವಯೋಮಿತಿ ನಿಗದಿಪಡಿಸಲಾಗಿದ್ದು, ಮೀಸಲಾತಿ ಅಭ್ಯರ್ಥಿಗಳಿಗೆ ಸರ್ಕಾರದ ನಿಯಮದನ್ವಯ 3 ರಿಂದ 10 ವರ್ಷ ವಯೋ ಸಡಿಲಿಕೆ ಇದೆ.
ವೇತನ: ಮಾಸಿಕ 40,000 ರೂ. ದಿಂದ 1,40,000 ರೂ. ವೇತನ ಜತೆ ಡಿಎ, ಮನೆ ಬಾಡಿಗೆ ಭತ್ಯೆ, ಗ್ರೂಪ್ ಇನ್ಶ್ಯುರೆನ್ಸ್, ಮೆಡಿಕಲ್ ಫೆಸಿಲಿಟೀಸ್, ಪ್ರಾವಿಡಂಟ್ ಫಂಡ್, ಪೆನ್ಷನ್, ಗ್ರಾಚುಟಿಯನ್ನು ಸಂಸ್ಥೆಯ ನಿಯಮಾನುಸಾರ ನೀಡಲಾಗುವುದು.
ಅರ್ಜಿ ಶುಲ್ಕ: ಎಸ್ಸಿ, ಎಸ್ಟಿ, ಅಂಗವಿಕಲ ಅಭ್ಯರ್ಥಿಗಳನ್ನು ಹೊರತುಪಡಿಸಿ ಉಳಿದ ಅಭ್ಯರ್ಥಿಗಳು 708 ರೂ. ಅನ್ನು ಪಾವತಿಸತಕ್ಕದ್ದು.
ಆಯ್ಕೆ ಪ್ರಕ್ರಿಯೆ: ಅಭ್ಯರ್ಥಿಗಳ ಶೈಕ್ಷಣಿಕ ಅಂಕ, ವೃತ್ತಿ ಅನುಭವ ಆಧರಿಸಿ ಶಾರ್ಟ್ಲಿಸ್ಟ್ ಮಾಡಿ 1:5ರ ಅನುಪಾತದಲ್ಲಿ ಸಂದರ್ಶನಕ್ಕೆ ಆಹ್ವಾನಿಸಲಾಗುವುದು. ಆಯ್ಕೆಪಟ್ಟಿಯನ್ನು ಬಿಇಎಲ್ ವೆಬ್ಸೈಟ್ನಲ್ಲಿ ಪ್ರಕಟಿಸಲಾಗುವುದು. ಆಭ್ಯರ್ಥಿಗಳು ತಮ್ಮ ಸಂದರ್ಶನದ ಆಹ್ವಾನಪತ್ರದ ಪ್ರತಿ ಪಡೆದು ಸಂದರ್ಶನದ ಸಮಯದಲ್ಲಿ ತರಲು ಸೂಚಿಸಲಾಗಿದೆ.
ಅರ್ಜಿ ಸಲ್ಲಿಸಲು ಕೊನೇ ದಿನ: 6.10.2022
ಅಧಿಸೂಚನೆಗೆ: https://bit.ly/3LlbzxU
ಮಾಹಿತಿಗೆ: http://www.bel-india.in