ರಾಜ್ಯದ ಪ್ರಮುಖ ಬ್ಯಾಂಕ್ ಆಗಿದ್ದ ವಿಜಯಾ ಬ್ಯಾಂಕ್ಅನ್ನು ತನ್ನೊಡಲಿಗೆ ಸೇರಿಸಿಕೊಂಡಿರುವ ಬ್ಯಾಂಕ್ ಆಫ್ ಬರೋಡಾದ ವಿವಿಧ ಶಾಖೆಗಳಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲು ಅಧಿಸೂಚನೆ ಹೊರಡಿಸಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ನೇಮಕ ಮಾಡಿಕೊಳ್ಳಲಾಗುತ್ತಿರುವ ಹುದ್ದೆಗಳು 5 ವರ್ಷದ ಒಪ್ಪಂದಕ್ಕೆ ಒಳಪಟ್ಟಿದ್ದು, ಬ್ಯಾಂಕ್ನ ಅವಶ್ಯಕತೆಗೆ ಅನುಗುಣವಾಗಿ ಅವಧಿ ವಿಸ್ತರಿಸಬಹುದಾಗಿದೆ. ಅಭ್ಯರ್ಥಿಗಳ ಶೈಕ್ಷಣಿಕ ಅರ್ಹತೆ, ವೃತ್ತಿ ಅನುಭವ, ಪಡೆಯುತ್ತಿರುವ/ ಪಡೆಯುತ್ತಿದ್ದ ವೇತನ, ಕೌಶಲ ಆಧರಿಸಿ ಹುದ್ದೆಗಳಿಗೆ ಅನುಗುಣವಾಗಿ ಮಾಸಿಕ ವೇತನ ನಿರ್ಧರಿಸಲಾಗುವುದು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಹುದ್ದೆ ವಿವರ
* ಸೀನಿಯರ್ ರಿಲೇಷನ್ಶಿಪ್ ಮ್ಯಾನೇಜರ್ - 326
* ಇ-ವೆಲ್ತ್ ರಿಲೇಷನ್ಶಿಪ್ ಮ್ಯಾನೇಜರ್ - 50
ಶೈಕ್ಷಣಿಕ ಅರ್ಹತೆ: ಯಾವುದೇ ಸ್ನಾತಕೋತ್ತರ ಪದವಿ ಅಥವಾ ಮ್ಯಾನೇಜ್ವೆುಂಟ್ನಲ್ಲಿ ಡಿಪ್ಲೊಮಾ ಮಾಡಿರಬೇಕು. ಎನ್ಐಎಸ್ಎಂ/ಐಆರ್ಡಿಎಯಿಂದ ರೆಗ್ಯುಲೇಟರಿ ಪ್ರಮಾಣಪತ್ರ ಪಡೆದಿರಬೇಕು. ಕನಿಷ್ಠ ಒಂದೂವರೆ ವರ್ಷದಿಂದ ಎರಡು ವರ್ಷಗಳ ವೃತ್ತಿ ಅನುಭವ ಅವಶ್ಯ.
ವಯೋಮಿತಿ: 1.11.2021ಕ್ಕೆ ಅನ್ವಯವಾಗುವಂತೆ ಸೀನಿಯರ್ ರಿಲೇಷನ್ಶಿಪ್ ಮ್ಯಾನೇಜರ್ಗೆ ಕನಿಷ್ಠ 24, ಗರಿಷ್ಠ 35 ವರ್ಷ, ಇ-ವೆಲ್ತ್ ಮ್ಯಾನೇಜರ್ಗೆ ಕನಿಷ್ಠ 23, ಗರಿಷ್ಠ 35 ವರ್ಷ ವಯೋಮಿತಿ ನಿಗದಿಪಡಿಸಿದ್ದು, ಮೀಸಲಾತಿ ಅಭ್ಯರ್ಥಿಗಳಿಗೆ ವಯೋಸಡಿಲಿಕೆ ಇದೆ.
ಎಲ್ಲೆಲ್ಲಿ ನೇಮಕಾತಿ: ಬೆಂಗಳೂರು-32, ಅಹಮದಾಬಾದ್-25, ಗಾಜಿಯಾಬಾದ್-8, ಕಾನ್ಪುರ್-5, ದೆಹಲಿ-43, ವಾರಣಾಸಿ-3, ಅಲಹಾಬಾದ್-5, ಗುರುಗಾಂವ್- 4, ಕೋಲ್ಕತ್ತ-4, ನೋಯ್ಡಾ-4, ವಡೋದರಾ-18, ಹೈದರಾಬಾದ್-12, ಲಖನೌ-6, ಪುಣೆ-10, ಚೆನ್ನೈ-12, ಇಂದೋರ್-2, ಲುಧಿಯಾನಾ-2, ರಾಜ್ಕೋಟ್-7, ಕೊಯಮತ್ತೂರು-4, ಜೈಪುರ-5, ಮುಂಬೈ-141, ಸೂರತ್-11, ಫರೀದಾಬಾದ್-4, ಜೋಧಪುರ್-3, ನಾಗ್ಪುರ-4, ಉದಯಪುರ್-2 ಸ್ಥಾನಕ್ಕೆ ನೇಮಕ ಮಾಡಿಕೊಳ್ಳಲಾಗುತ್ತಿದೆ.
ಮೀಸಲಾತಿ: ಸಾಮಾನ್ಯವರ್ಗದ ಅಭ್ಯರ್ಥಿಗಳಿಗೆ 111 ಸ್ಥಾನ, ಎಸ್ಸಿಗೆ 52, ಎಸ್ಟಿಗೆ 46, ಇತರ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 115, ಆರ್ಥಿಕವಾಗಿ ದುರ್ಬಲವಾಗಿರುವ ಅಭ್ಯರ್ಥಿಗಳಿಗೆ 52 ಸ್ಥಾನಗಳನ್ನು ಮೀಸಲಿರಿಸಲಾಗಿದೆ. ಇದರಲ್ಲಿ ಅಂಗವಿಕಲ ಅಭ್ಯರ್ಥಿಗಳಿಗೆ 27 ಸ್ಥಾನ ಕಾಯ್ದಿರಿಸಲಾಗಿದೆ.
ಆಯ್ಕೆ ಪ್ರಕ್ರಿಯೆ: ಅಭ್ಯರ್ಥಿಗಳ ಶೈಕ್ಷಣಿಕ ಅರ್ಹತೆ, ವೃತ್ತಿ ಅನುಭವ ಆಧರಿಸಿ ಶಾರ್ಟ್ಲಿಸ್ಟ್ ಮಾಡಲಾದ ಅಭ್ಯರ್ಥಿಗಳನ್ನು ವೈಯಕ್ತಿಕ ಸಂದರ್ಶನ ಅಥವಾ ಗುಂಪುಚರ್ಚೆ ಅಥವಾ ಇತರ ಆಯ್ಕೆ ಪ್ರಕ್ರಿಯೆಗೆ ಒಳಪಡಿಸಲಾಗುವುದು. ಅಂತಿಮ ಆಯ್ಕೆಪಟ್ಟಿಯನ್ನು ವೆಬ್ಸೈಟ್ನಲ್ಲಿ ಪ್ರಕಟಿಸಲಾಗುವುದು.
ಅರ್ಜಿ ಶುಲ್ಕ: ಎಸ್ಸಿ, ಎಸ್ಟಿ, ಅಂಗವಿಕಲ, ಮಹಿಳಾ ಅಭ್ಯರ್ಥಿಗಳಿಗೆ 100 ರೂ., ಉಳಿದ ಅಭ್ಯರ್ಥಿಗಳಿಗೆ 600 ರೂ. ಶುಲ್ಕ ನಿಗದಿಪಡಿಸಲಾಗಿದೆ.
ಅರ್ಜಿ ಸಲ್ಲಿಸಲು ಕೊನೇ ದಿನ: 9.12.2021
ಅಧಿಸೂಚನೆಗೆ: https://bit.ly/3nOn5Ys
ಮಾಹಿತಿಗೆ: http://www.bankofbaroda.in