ನ್ಯೂಸ್

VIDEO: ‘ಪವರ್‌ ಸ್ಟಾರ್‌... ಯೇ... ಪವರ್‌ಸ್ಟಾರ್‌’ ಎಂದು ಕರೆದ ಪುಟಾಣಿ: ಪುನೀತ್‌ ರಿಯಾಕ್ಷನ್‌ಗೆ ಅಭಿಮಾನಿಗಳು ಫಿದಾ...

suchetana

ಬೆಂಗಳೂರು: ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಅವರು ಅಗಲಿ ವಾರಗಳೇ ಕಳೆದು ಹೋದರೂ ಅವರು ಬದುಕಿದ್ದಾಗ ಮಾಡಿರುವ ಮಹಾತ್ಕಾರ್ಯಗಳು ಹಾಗೂ ಅವರ ಕೆಲವೊಂದು ಘಟನೆಗಳ ವಿಡಿಯೋಗಳು ವೈರಲ್‌ ಆಗುತ್ತಲೇ ಇವೆ.

ಸದಾ ನಗುನಗುತ್ತಾ ಎಲ್ಲರೊಡನೆ ಒಂದಾಗ ಯಾವುದೇ ಅಹಂ ಇಲ್ಲದೇ ಸರಳ ಜೀವನ ನಡೆಸುತ್ತಿದ್ದ ಪುನೀತ್‌ ಅವರನ್ನು ಕಂಡರೆ ಪುಟಾಣಿಗಳಿಗೂ ಅಷ್ಟೇ ಅಚ್ಚುಮೆಚ್ಚು. ಅವರು ಪುನೀತ್‌ ಎನ್ನುವುದಕ್ಕಿಂತ ಹೆಚ್ಚಾಗಿ ಪವರ್‌ಸ್ಟಾರ್‌, ಅಪ್ಪು ಎಂದೇ ಪರಿಚಯ ಹೆಚ್ಚು.

ಹೀಗೆಯೇ ಒಂದು ವಿಡಿಯೋ ಇದೀಗ ವೈರಲ್‌ ಆಗಿದೆ. ಕಾರ್ಯಕ್ರಮವೊಂದರಲ್ಲಿ ಪುನೀತ್‌ ಅವರು ಭಾಗವಹಿಸಿದ್ದ ಸಂದರ್ಭದಲ್ಲಿ ಹಿಂಬಂದಿಯಿಂದ ಪುಟಾಣಿಯೊಬ್ಬಳು ಹೇ ಪವರ್‌ ಸ್ಟಾರ್‌... ಎಂದು ಮುದ್ದಾದ ದನಿಯಲ್ಲಿ ಹೇಳುತ್ತಾಳೆ. ಆಗ ಗಡಿಬಿಡಿಯಲ್ಲಿದ್ದ ಪುನೀತ್‌ ಹಿಂದಕ್ಕೆ ತಿರುಗಿ ಸ್ಮೈಲ್‌ ಕೊಟ್ಟು ವಾಪಸ್‌ ಹೋಗುತ್ತಾರೆ. ಆದರೆ ವಾಪಸ್‌ ಬರುವಾಗ ಆ ಮಗುವನ್ನು ನೋಡಿದ ಪುನೀತ್‌ ಅವರು, ಶೇಖ್‌ಹ್ಯಾಂಡ್‌ ಮಾಡಿ... 'ಹೇ! ನೀನೇನಾ ಮಾತನಾಡಿದ್ದು. ಚಿಕ್ಕ ವಯಸ್ಸಿಗೆ ಚೆನ್ನಾಗಿ ಮಾತನಾಡುತ್ತೀಯ. ಸೂಪರ್' ಎಂದು ಹೊಗಳಿದ್ದಾರೆ.

ಇದು ಪುನೀತ್‌ ಅವರಿಗೆ ವಯಸ್ಸಿನ ಭೇದವಿಲ್ಲದೇ ತಮ್ಮ ಅಭಿಮಾನಿಗಳನ್ನು ಹೇಗೆಲ್ಲಾ ನಡೆಸಿಕೊಳ್ಳುತ್ತಿದ್ದರು, ಪ್ರತಿಯೊಬ್ಬರ ಬಗ್ಗೆ ಎಷ್ಟೊಂದು ಕಾಳಜಿ ತೋರುತ್ತಿದ್ದರು ಎಂದು ಜಾಲತಾಣದಲ್ಲಿ ಅವರ ಅಭಿಮಾನಿಗಳು ಕೊಂಡಾಡಿ ಈ ವಿಡಿಯೋ ಹಂಚಿಕೊಂಡಿದ್ದಾರೆ.

ಇಲ್ಲಿದೆ ನೋಡಿ ವಿಡಿಯೋ: