ನ್ಯೂಸ್

ಬೇಬಿ ಬಂಪ್‌ ಷೋ ಮಾಡಿದ ಬರ್ತ್‌ಡೇ ಗರ್ಲ್‌: ಗರ್ಭಿಣಿ ಸೋನಮ್‌ ಕಪೂರ್‌ ಫೋಟೋಗಳು ವೈರಲ್‌

ಮುಂಬೈ: ಬಾಲಿವುಡ್‌ನ ಹಾಟೆಸ್ಟ್‌ ತಾರೆಯರಲ್ಲಿ ಒಬ್ಬರು ಎನಿಸಿರುವ 37 ವರ್ಷದ ಸೋನಮ್ ಕಪೂರ್ ಗರ್ಭಿಯಾಗಿದ್ದಾರೆ. 2018ರಲ್ಲಿ ಉದ್ಯಮಿ ಆನಂದ್ ಅಹುಜಾ ಅವರನ್ನು ಮದುವೆಯಾಗಿರುವ ಸೋನಮ್‌ ಇನ್ನು ಕೆಲವೇ ತಿಂಗಳುಗಳಲ್ಲಿ ತಾಯಿಯಾಗಲಿದ್ದಾರೆ.

ಈ ಹಿನ್ನೆಲೆಯಲ್ಲಿ ಬೇಬಿ ಬಂಪ್‌ ಫೋಟೋಶೂಟ್‌ ಮಾಡಿಸಿಕೊಂಡಿರುವ ಅವರು, ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅಷ್ಟಕ್ಕೂ ಅವರು ಇಂದು (ಜೂನ್‌ 9) ಫೋಟೋಶೂಟ್‌ ಮಾಡಿಸಿಕೊಳ್ಳಲು ಕಾರಣ ಇವತ್ತು ಅವರ ಹುಟ್ಟಿದ ಹಬ್ಬ.

`ಸಾವರಿಯಾ’ ಚಿತ್ರದ ಮೂಲಕ ಹಿರಿತೆರೆ ಪ್ರವೇಶಿಸಿರುವ ಸೋನಮ್‌, ಮದುವೆಯ ನಂತರವೂ ಬಿಜಿ ನಾಯಕಿಯೆಂದೇ ಗರುತಿಸಿಕೊಂಡವರು. ಗರ್ಭಿಣಿಯಾದ ತಕ್ಷಣ ತುಸು ಚಿತ್ರರಂಗದಿಂದ ದೂರ ಸರಿದಿರುವ ಅವರು, ಇದೀಗ ಬೇಬಿ ಬಂಪ್‌ ಷೋ ಮಾಡಿದ್ದಾರೆ. ತಂದೆ ಅನಿಲ್ ಕಪೂರ್ ಬಾಲಿವುಡ್​ ಕಂಡ ಅಪ್ರತಿಮ ನಾಯಕ. ಇಂದಿಗೂ ಸಿನಿರಂಗದಲ್ಲಿ ಬ್ಯುಸಿ ಇರುವ ಸ್ಟಾರ್ ನಾಯಕನ ಮಗಳು ಸೋನಮ್ ಕೂಡ ಬಾಲಿವುಡ್​ನಲ್ಲಿ ಫೇಮಸ್​.

ಮೊದಲ ಚಿತ್ರದಲ್ಲಿಯೇ ಫಿಲ್ಮ್​ಫೇರ್​ ಪ್ರಶಸ್ತಿ ಪಡೆದ ನಟಿ, ಕೆಲ ಚಿತ್ರಗಳಲ್ಲಿ ಸೋಲನುಭವಿಸಿದರು. ಆದರೆ ಮೂರು ವರ್ಷಗಳ ನಂತರ ಮತ್ತೆ ಸೂಪರ್ ಹಿಟ್​ ಚಿತ್ರಕೊಟ್ಟು ಉತ್ತಮ ನಟಿ ಎನಿಸಿಕೊಂಡಿದ್ದಾರೆ. ಇದೀಗ ಬಿಳಿ ಬಣ್ಣದ ಕಲರ್ ಡ್ರೆಸ್‌ನಲ್ಲಿ ತುಂಬಾ ಮುದ್ದಾಗಿ ಕ್ಯಾಮೆರಾ ಕಣ್ಣಿಗೆ ಪೋಸ್ ಕೊಟ್ಟಿದ್ದಾರೆ. ಅವರ ಅಭಿಮಾನಿಗಳು ಈ ಫೋಟೋಗೆ ಬಾರಿ ಮೆಚ್ಚಿಕೊಂಡಿದ್ದಾರೆ.