ರಾಯಚೂರು: ಕರ್ನಾಟಕ ಮತ್ತು ಆಂಧ್ರಪ್ರದೇಶ ಗಡಿಯ ಸಮೀಪ ಆಂಧ್ರಪ್ರದೇಶದ ಯುವಕರು ಕರ್ನಾಟಕದ ಪೋಲೀಸರ ಮೇಲೆ ಹಲ್ಲೆ ಮಾಡಿರುವ ಘಟನೆ ನಡೆದಿದೆ.
ಅಂತರ್‌ರಾಜ್ಯ ಚೆಕ್ ಪೋಸ್ಟ್ ಬಳಿ ಮೂರು ದಿನಗಳ ಹಿಂದೆ ನಡೆದಿರುವ ಈ ಘಟನೆ ಇದೀಗ ಬೆಳಕಿಗೆ ಬಂದಿದೆ. ಆಂಧ್ರ ಹಾಗೂ ಕರ್ನಾಟಕ ಗಡಿ ಭಾಗದ ಚೆಕ್ ಪೋಸ್ಟ್ ಮಂತ್ರಾಲಯದ ಬ್ರಿಜ್ ಸಮೀಪ ಇದು ನಡೆದಿದೆ.
ತಪಾಸಣೆಗೆ ಮುಂದಾದ ಪೋಲೀಸರ ಮೇಲೆ ಹಲ್ಲೆ ಮಾಡಿದ ಯುವಕರು ಹಲ್ಲೆ ಮಾಡಿದ್ದಾರೆ. ರಾಯಚೂರು ಜಿಲ್ಲೆಯ ಇಡಪನೂರು ಪೋಲೀಸ್ ಠಾಣೆಯ ಕಾನ್ಸ್‌ಟೆಬಲ್‌ಗಳ ಮೇಲೆ ಹಲ್ಲೆ ಮಾಡಿದವರನ್ನು ಆಂಧ್ರಪ್ರದೇಶದ ಮಾಧಾವರಂ ಮೂಲದ ಯುವಕರು ಎಂದು ಗುರುತಿಸಲಾಗಿದೆ.
ಸ್ಥಳಿಯರು ಯುವಕನನ್ನ ತಡೆದರೂ ಮತ್ತೇ ಹಲ್ಲೆ ಮಾಡಿದ್ದು, ಇಡಪನೂರು ಠಾಣೆಯ ಈರಪ್ಪ ಹಾಗೂ ಬಾಲಪ್ಪ ಕಾನ್ಸ್‌ಟೆಬಲ್ ಅವರಿಗೆ ಗಾಯಗಳಾಗಿವೆ. ಇಬ್ಬರೇ ಪೋಲೀಸರು ಸ್ಥಳದಲ್ಲಿ ಇದ್ದುದರಿಂದ ಅವರು ಅಸಹಾಯಕರಾಗಬೇಕಾಗಿ ಬಂತು ಎನ್ನಲಾಗಿದೆ. ಹಲ್ಲೆ ಮಾಡಿದ ಯುವಕರನ್ನು ಸ್ಥಳೀಯರ ಸಹಾಯದಿಂದ ಜೈಲಿಗೆ ಕಳುಹಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.