ಗುವಾಹಟಿ (ಅಸ್ಸಾಂ): ಅಸ್ಸಾಂ ಭೀಕರ ಪ್ರವಾಹದಿಂದ ತತ್ತರಿಸಿ ಹೋಗಿದ್ದು, ಹಲವಾರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಸಾವಿರಾರು ಮಂದಿ ನಿರಾಶ್ರಿತರಾಗಿದ್ದಾರೆ. ಅಸ್ಸಾಂನ 12 ಗ್ರಾಮಗಳಲ್ಲಿ ಭೂಕುಸಿತ ಕೂಡ ಉಂಟಾಗಿದ್ದು, 26 ಜಿಲ್ಲೆಗಳಲ್ಲಿ 1,089 ಕ್ಕೂ ಹೆಚ್ಚು ಹಳ್ಳಿಗಳು ಇನ್ನೂ ಮುಳುಗಡೆಯಾಗಿವೆ.
ಇಂಥ ಸಮಯದಲ್ಲಿ ಜನರ ಕಷ್ಟ ಆಲಿಸಬೇಕಾದುದು, ಅವರಿಗೆ ಧೈರ್ಯ ತುಂಬಬೇಕಾದುದು ಜನಪ್ರತಿನಿಧಿಗಳ ಕರ್ತವ್ಯ. ಆದರೆ ಇಲ್ಲೊಬ್ಬ ಶಾಸಕರು ಅದಕ್ಕೆ ವಿರುದ್ಧವಾಗಿ ನಡೆದುಕೊಂಡು ಈಗ ಭಾರಿ ಟ್ರೋಲ್‌ಗೆ ಒಳಗಾಗಿದ್ದಾರೆ.
ಇದಕ್ಕೆ ಕಾರಣ, ನೀರಿನಲ್ಲಿ ಕೆಲವೇ ದೂರ ಹೋಗಿ ನಂತರ ಪ್ರವಾಹ ಪೀಡಿತ ಪ್ರದೇಶ ನೋಡಲು ವ್ಯಕ್ತಿಯೊಬ್ಬರ ಹೆಗಲ ಮೇಲೆ ಏರಿ ಬಂದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಇದು ಭಾರಿ ವೈರಲ್ ಆಗಿದ್ದು, ಶಾಸಕರ ಈ ಕೆಲಸಕ್ಕೆ ಜನರು ಕಿಡಿ ಕಾರಿದ್ದಾರೆ.
ಈ ರೀತಿ ವೈರಲ್ ಆಗುತ್ತಿರುವವರು ಬಿಜೆಪಿ ಶಾಸಕ ಶಿಬು ಮಿಶ್ರಾ. ಲಂಬ್ಡಿಂಗ್ ಪ್ರದೇಶದ ಶಾಸಕರಾಗಿರುವ ಅವರು, ಪ್ರವಾಹದ ಪ್ರದೇಶ ನೋಡಲು ಬಂದ ಶಾಸಕ ಶಿಬು ಅವರು ನೀರಿನಲ್ಲಿ ನಡೆದುಕೊಂಡು ಹೋಗಲು ಆಗದೇ ವ್ಯಕ್ತಿಯೊಬ್ಬರ ಬೆನ್ನೇರಿದ್ದಾರೆ. ಶಾಸಕರನ್ನು ಬೆನ್ನಮೇಲೆ ಹೊತ್ತುಕೊಂಡು ಹೋಗಿರುವ ಆ ವ್ಯಕ್ತಿ ಈ ಜನಪ್ರತಿನಿಧಿಗೆ ಸ್ವಲ್ಪವೂ ನೀರು ತಾಗದಂತೆ ಕರೆದುಕೊಂಡು ಹೋಗುತ್ತಿದ್ದಾರೆ.
ಅಸ್ಸಾಂ ಕಾಂಗ್ರೆಸ್ ಶೇರ್ ಮಾಡಿಕೊಂಡಿರುವ ವಿಡಿಯೋ ಇಲ್ಲಿದೆ ನೋಡಿ: