ನ್ಯೂಸ್

ಜಾಮೀನಿನ ಮೇಲೆ ಹೊರಬರುತ್ತಿದ್ದಂತೆಯೇ ವರಸೆ ಬದಲಿಸಿದ ಆರ್ಯನ್‌: ವಿಚಾರಣೆಗೆ ಹಾಜರಾಗದೇ ಕೊಟ್ಟನೊಂದು ಕಾರಣ...

suchetana

ಮುಂಬೈ: ಡ್ರಗ್ಸ್‌ ಕೇಸ್‌ನಲ್ಲಿ ಸಿಕ್ಕಿಬಿದ್ದು ಹಲವಾರು ದಿನಗಳವರೆಗೆ ಜೈಲಿನಲ್ಲಿ ಕೈದಿಯಾಗಿದ್ದು, ಅಂತೂ ಜಾಮೀನಿನ ಮೇಲೆ ಹೊರಕ್ಕೆ ಬಂದಿರುವ ಶಾರುಖ್‌ ಖಾನ್‌ ಪುತ್ರ ಆರ್ಯನ್‌ ಖಾನ್‌ ಹೊರಕ್ಕೆ ಬರುತ್ತಿದ್ದಂತೆಯೇ ವರಸೆ ಬದಲಿಸಿದ್ದಾರೆ.

ಜಾಮೀನು ನೀಡುವ ಸಂದರ್ಭದಲ್ಲಿ ವಿಧಿಸಲಾಗಿದ್ದ ಷರತ್ತುಗಳ ಪೈಕಿ ಒಂದು ಎಂದರೆ, ತನಿಖಾಧಿಕಾರಿಗಳು ತನಿಖೆಗೆ ಕರೆದಾಗ ಬರಬೇಕು, ಇದರಿಂದ ತಪ್ಪಿಸಿಕೊಳ್ಳಬಾರದು ಎಂದು. ಆ ಹೂಂಗುಟ್ಟಿದ್ದ ಆರ್ಯನ್‌ ಈಗ ಹೊರಕ್ಕೆ ಬರುತ್ತಿದ್ದಂತೆಯೇ ವಿಚಾರಣೆಗೆ ಹಾಜರು ಆಗಲೇ ಇಲ್ಲ!

ನಿನ್ನೆ ಆರ್ಯನ್‌ ವಿಚಾರಣೆಗೆ ಹಾಜರಾಗಬೇಕಿತ್ತು. ಈ ಹಿನ್ನೆಲೆಯಲ್ಲಿ ಆತನಿಗೆ ನೋಟಿಸ್‌ ಜಾರಿಯಾಗಿತ್ತು. ಡಿಡಿಜಿ ಎನ್‍ಸಿಬಿ ಸಂಜಯ್ ಸಿಂಗ್ ಅವರು ಆರ್ಯನ್‍ ಖಾನ್‍ಗೆ ಬುಲಾವ್ ನೀಡಿದ್ದರು. ಆದರೆ ಹಾಜರು ಆಗದೇ ಅದಕ್ಕೊಂದು ಕಾರಣವನ್ನೂ ನೀಡಲಾಗಿದೆ. ಅದೇನೆಂದರೆ ಈತನಿಗೆ ಕರೊನಾ ಲಕ್ಷಣಗಳು ಕಾಣಿಸಿಕೊಂಡಿವೆಯಂತೆ! ಹೀಗೆಂದು ಅವರ ಪರ ವಕೀಲರು ತನಿಖಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

.ಕರೊನಾ ಎಂದ ಮೇಲೆ ಸಹಜವಾಗಿ ವಿಚಾರಣೆಗೆ ಹಾಜರಾಗುವುದರಿಂದ ವಿನಾಯಿತಿ ನೀಡಲಾಗುತ್ತದೆ. ಇದೇ ಕಾರಣದಿಂದ ಆರ್ಯನ್‌ನ ಈ ಕರೊನಾ ಕಾರಣವನ್ನೂ ಅಧಿಕಾರಿಗಳು ಮಾನ್ಯ ಮಾಡಿದ್ದಾರೆ. ವಿಚಾರಣೆಗೆ ಬೇರೊಂದು ದಿನಾಂಕ ನೀಡುವಂತೆ ವಕೀಲರು ಕೋರಿದ್ದ ಹಿನ್ನೆಲೆಯಲ್ಲಿ ಇದಕ್ಕೆ ಅಧಿಕಾರಿಗಳು ಸಮ್ಮಿತಿಸಿದ್ದಾರೆ. ಮುಂದಿನ ವಿಚಾರಣೆ ವೇಳೆ ಕರೊನಾ ಲಕ್ಷಣದಿಂದ ಆರ್ಯನ್‌ ಗುಣಮುಖರಾಗುತ್ತಾರೋ ಎಂದು ಕಾದುನೋಡಬೇಕಿದೆ!