ನ್ಯೂಸ್

ಪತ್ನಿಗೆ ಸುಖನೀಡಲು ಆಗುತ್ತಿಲ್ಲ- ಆಕೆಗೆ ನನ್ನ ಮೇಲೆ ಜುಗುಪ್ಸೆ ಬಂದುಬಿಟ್ಟಿದೆ; ಪರಿಹಾರ ಹೇಳಿ ಪ್ಲೀಸ್​..

ವಯಸ್ಸು 24. ತುಂಬಾ ಆರೋಗ್ಯದಿಂದ ಇದ್ದೇನೆ. ಆದರೆ ಮೊದಲಿನಿಂದಲೂ ನನ್ನದೊಂದು ಕೆಟ್ಟಚಟವಿತ್ತು. ಅದು ಹಸ್ತಮೈಥುನ ಮಾಡಿಕೊಳ್ಳುವುದು. ನನಗೆ ಬಿ.ಪಿ., ಶುಗರ್ ಯಾವುದೇ ಇಲ್ಲ. ಆದರೆ ನಾನು ಹಸ್ತಮೈಥುನ ಮಾಡಿಕೊಳ್ಳುತ್ತಿದ್ದರಿಂದಲೋ ಏನೋ. ನಾನು ಸಂಭೋಗ ಮಾಡಲು ಸಾಧ್ಯವಾಗುತ್ತಿಲ್ಲ. ಸಂಗಾತಿಯನ್ನು ಮುಟ್ಟುತ್ತಿರುವಾಗಲೇ ವೀರ್ಯ ಹೊರಹೋಗುತ್ತದೆ. ಇದರಿಂದ ನನ್ನ ಸಂಗಾತಿಗೆ ನನ್ನ ಮೇಲೆ ಜಿಗುಪ್ಸೆ ಬಂದುಬಿಟ್ಟಿದೆ. ದಯವಿಟ್ಟು ಇದಕ್ಕೆ ಪರಿಹಾರ ಹೇಳಿ.

ಉತ್ತರ: ಹಸ್ತ ಮೈಥುನದಿಂದ ಯಾವುದೇ ತೊಂದರೆಯಾಗುವುದಿಲ್ಲ. ಅದರ ಬಗ್ಗೆ ಚಿಂತೆ ಬೇಡ. ನಿಮಗೆ ಶೀಘ್ರ ಸ್ಖಲನದ ಸಮಸ್ಯೆ ಇದೆ ಎನಿಸುತ್ತದೆ. ನೀವು ಆತಂಕ ಮಾಡಿಕೊಂಡಿದ್ದೀರೇನೋ ಅನಿಸುತ್ತದೆ. ಮನಸ್ಸಿನಲ್ಲಿಯೇ ಮಾರ್ಗದಶ್ರನ ಮಾಡಿಕೊಳ್ಳಿ.

ಲೈಂಗಿಕ ಕ್ರಿಯೆಯ ಹೊರತಾದ ಸಮಯದಲ್ಲಿ ಬೇಗ ಸ್ಖಲನವಾಗಬಾರದು ಎಂದು ಪದೇಪದೆ ಹೇಳಿಕೊಳ್ಳಿ. ಹೆಚ್ಚು ಹೊತ್ತು ನಿಯಂತ್ರಿಸುವಂತೆ ದೇಹಕ್ಕೆ ಆದೇಶ ನೀಡಿ. ದೇಹ, ಮನಸ್ಸುಗಳೆರಡೂ ಒಂದಕ್ಕೊಂದು ಪೂರಕವಾಗಿ ದೇಹದ ರಸದೂತಗಳ ಸ್ರವಿಸುವಿಕೆ ಹೆಚ್ಚಾಗಿ ಮಿದಳು ಲೈಂಗಿಕ ಆಸಕ್ತಿಗೆ ಆದೇಶ ನೀಡುತ್ತದೆ. ನೀವು ಸಂತೋಷವಾಗಿದ್ದಷ್ಟೂ ಖುಷಿಯ ಅಂಶ ಹೊರಹಾಕುವ ಎಂಡಾರ್ಫಿನ್ ಬಿಡುಗಡೆಯಾಗುತ್ತದೆ.

ಅಶ್ವಗಂಧಾರಿಷ್ಟವನ್ನು ದಿನಕ್ಕೆರಡು ಬಾರಿ ಮೂರು ಚಮಚದಷ್ಟನ್ನು ನೀರಿನೊಂದಿಗೆ ಬೆರೆಸಿ ಕುಡಿಯಿರಿ. ಆಹಾರದಲ್ಲಿ ಬಾದಾಮಿ, ಅಂಜೂರ, ದ್ರಾಕ್ಷಿ ಸೇವಿಸಿ. ಹಾಲು, ಮೊಸರು, ತುಪ್ಪವನ್ನೂ ಸೇವಿಸಿ. ಇವೆಲ್ಲವುಗಳನ್ನು ಮಾಡಿದಾಗಲೂ ಸರಿಯಾಗದಿದ್ದಲ್ಲಿ ಲೈಂಗಿಕ ತಜ್ಞರನ್ನು ಭೇಟಿಯಾಗಿ ಸಲಹೆ ಪಡೆಯಿರಿ.