ಮೂತ್ರ ವಿಸರ್ಜಿಸುವಾಗಲೂ ಬಹಳ ಉರಿಯುತ್ತದೆ. ನನಗೆ ಬಿಳಿ ಸೆರಗು ಹೋಗುತ್ತದೆ. ಒಳ ಉಡುಪುಗಳನ್ನು ಚೆನ್ನಾಗಿ ತೊಳೆದು, ಬಿಸಿಲಿನಲ್ಲೇ ಒಣಗಿಸಿ ಉಪಯೋಗಿಸಿದರೂ ಕಡಿಮೆಯಾಗುತ್ತಿಲ್ಲ. ಏನು ಮಾಡಲಿ?
ಉತ್ತರ: ನೀವು ಪ್ರತಿದಿನ ಒಂದು ಲೀಟರ್ ನೀರಿಗೆ 4 ಚಮಚ ಬೇವಿನ ತೊಗಟೆ ಮತ್ತು ಅರಿಶಿನ ಹಾಕಿ ಕುದಿಸಿ. ಕಷಾಯ ತಯಾರಿಸಿ. ಇದರಿಂದ ದಿನಕ್ಕೆರಡು ಬಾರಿ ಜನನಾಂಗವನ್ನು ಸ್ವಚ್ಛಗೊಳಿಸಿ. ಅಲ್ಲದೆ, ಬೆಳಗ್ಗೆ ಹಾಗೂ ರಾತ್ರಿ ಊಟಕ್ಕೆ ಮುಂಚೆ ಅರ್ಧ ಲೋಡ ಬಿಸಿ ಹಾಲಿಗೆ ಅರ್ಧ ಚಮಮ ಅರಿಶಿಣ, ಅರ್ಧ ಚಮಚ ನೆಲ್ಲಿಕಾಯಿ ಪುಡಿ ಬೆರೆಸಿ ಕುಡಿಯಿರಿ.
ಆಯುರ್ವೇದಕ್ಕೆ ಸಂಬಂಧಿಸಿದಂತೆ ಡಾ.ವಸುಂಧರಾ ಭೂಪತಿ ಅವರು ಬರೆದಿರುವ ವಿವಿಧ ರೀತಿಯ ಪರಿಹಾರಕ್ಕಾಗಿ https://www.vijayavani.net/ ಕ್ಲಿಕ್ಕಿಸಿ ಆರೋಗ್ಯ ವಿಭಾಗ ನೋಡಿ…