ಮುಂಬೈ: ಕೆಲ ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದ ಬಾಲಿವುಡ್ ತಾರೆಯರಾದ ರಾಜ್‌ಕುಮಾರ್ ರಾವ್ ಮತ್ತು ಪತ್ರಲೇಖಾ ಶೀಘ್ರದಲ್ಲಿಯೇ ಹಸೆಮಣೆ ಏರಲಿದ್ದಾರೆ. ಇವರಿಬ್ಬರ ಡೇಟಿಂಗ್ ಫೋಟೋ ನೋಡಿದ ಅಭಿಮಾನಿಗಳು ಇಲ್ಲಿಯವರೆಗೆ ಗುಸುಗುಸು ಎನ್ನುತ್ತಿದ್ದು, ಅವರ ಕುತೂಹಲಕ್ಕೆ ಇದೀಗ ತೆರೆ ಬಿದ್ದಿದೆ.
ಇವರಿಬ್ಬರ ನಿಶ್ಚಿತಾರ್ಥ ಕೆಲ ದಿನಗಳ ಹಿಂದೆ ನಡೆದಿದ್ದು, ಅದರ ಫೋಟೋ ಇದೀಗ ಭಾರಿ ವೈರಲ್ ಆಗಿದೆ. ಅಂದಹಾಗೆ ಈ ಜೋಡಿ ಕಳೆದ 10 ವರ್ಷಗಳಿಂದ ಪರಸ್ಪರ ಡೇಟಿಂಗ್ ಮಾಡುತ್ತಿದ್ದರು. ನಿಮ್ಮ ಮದುವೆ ಯಾವಾಗ ಎಂದು ಕೇಳಿದ ಪ್ರಶ್ನೆಗಳಿಗೆ ಇವರು ಜಾಣಾಕ್ಷತನದ ಉತ್ತರ ಹೇಳಿ ತಪ್ಪಿಸಿಕೊಳ್ಳುತ್ತಿದ್ದರು. ಆದ್ದರಿಂದ ಇವರ ವಿವಾಹದ ಬಗ್ಗೆ ಸಾಕಷ್ಟು ಊಹಾಪೋಹಗಳು ಎದ್ದಿದ್ದವು.
ಒಟ್ಟಿನಲ್ಲಿ ನಿಶ್ಚಿತಾರ್ಥ ಮಾಡಿಕೊಂಡು ಅಭಿಮಾನಿಗಳ ಕುತೂಹಲಕ್ಕೆ ತೆರೆ ಎಳೆದಿರುವ ಈ ತಾರಾ ಜೋಡಿ, ಬಾಲಿವುಡ್ನ ತಾರಾ ಜೋಡಿ ಪಟ್ಟಿಗೆ ಸೇರಲು ಇನ್ನು ಕೆಲವೇ ದಿನಗಳು ಇವೆ. ಆದರೆ ಮದುವೆಯ ಬಗ್ಗೆ ಇನ್ನೂ ಈ ಜೋಡಿ ಬಾಯಿಬಿಟ್ಟಿಲ್ಲ.