ನ್ಯೂಸ್

VIDEO: ಮಗಳ ಮದುವೆಯಲ್ಲಿ ಯುವಕನಂತೆ ಡಾನ್ಸ್​ ಮಾಡಿದ ಅನಿಲ್​ ಕಪೂರ್​: ಅಭಿಮಾನಿಗಳು ಫಿದಾ

ಮುಂಬೈ: ಮಕ್ಕಳಿಗೆ ಮದುವೆಯಾದರೂ ಸದಾ ಯುವಕನಂತೆಯೇ ಗೆಟಪ್​ನಲ್ಲಿ ಹಾಗೂ ಚುರುಕಾಗಿರುವ ನಟರ ಪೈಕಿ ಬಾಲಿವುಡ್ ನಟ ಅನಿಲ್ ಕಪೂರ್ ಕೂಡ ಒಬ್ಬರು. ಕೂಲೆಸ್ಟ್ ಡ್ಯಾಡಿ ಎಂದೇ ಪ್ರಸಿದ್ಧರಾಗಿರುವ ಅವರು ಈಚೆಗೆ ಮಗಳು ರಿಯಾ ಮದುವೆ ಮಾಡಿದ್ದಾರೆ.

ಮದುವೆಯ ಸಂದರ್ಭದಲ್ಲಿ ನಡೆದ ಆರತಕ್ಷತೆಯ ಸಮಾರಂಭದಲ್ಲಿ ಅನಿಲ್​ ಕಪೂರ್ ಮಗಳ ಜತೆ ಡಾನ್ಸ್​ಗೆ ಹೆಜ್ಜೆ ಹಾಕಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್​ ಆಗಿದೆ. ‘ಅಭಿ ತೋ ಪಾರ್ಟಿ ಶುರು ಹುಯಿ ಹೈ” ಹಿಟ್​ ಹಾಡಿಗೆ ಇವರು ಸ್ಟೆಪ್​ ಹಾಕಿದ್ದು, ಅಭಿಮಾನಿಗಳಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.

ಈ ಸಮಾರಂಭದಲ್ಲಿ ನೃತ್ಯ ನಿರ್ದೇಶಕಿ ಫರ್ಹಾಖಾನ್ ಉಪಸ್ಥಿತರಿದ್ದರು,. ಇದರ ವಿಡಿಯೋ ಅನ್ನು ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಅವರು ಹಂಚಿಕೊಂಡಿದ್ದು, ಅದೀಗ ವೈರಲ್​ ಆಗಿದೆ. 'ಈ ವ್ಯಕ್ತಿಯನ್ನು ನಾನು ತುಂಬಾ ಪ್ರೀತಿಸುತ್ತೇನೆ. ಬೆಸ್ಟ್ ತಂದೆ ಅನಿಲ್ ಕಪೂರ್ ಹಾಗೂ ಮಗಳು ರಿಯಾ ಕಪೂರ್ ನೃತ್ಯ. ಇಂತಹ ಸಮಾರಂಭಕ್ಕೆ ಆಹ್ವಾನಿಸಿದ್ದಕ್ಕೆ ಧನ್ಯವಾದ' ಎಂದು ಫರ್ಹಾಖಾನ್ ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ.

ಅಂದಹಾಗೆ ರಿಯಾ ಕಪೂರ್ ಹಾಗೂ ಕರಣ್ ಬುಲಾನಿ ಆಗಸ್ಟ್ 14 ರಂದು ಅನಿಲ್ ಕಪೂರ್ ಅವರ ಜುಹು ನಿವಾಸದಲ್ಲಿ ನಡೆದಿತ್ತು. 16ರಂದು ಆರತಕ್ಷತೆ ನಡೆದಿದೆ. ಸೋನಮ್ ಕಪೂರ್, ಆನಂದ್ ಅಹುಜಾ, ಅರ್ಜುನ್ ಕಪೂರ್, ಖುಷಿ ಕಪೂರ್, ಜಾನ್ವಿ ಕಪೂರ್, ಫರಾ ಖಾನ್, ಅಂಶುಲಾ ಕಪೂರ್, ಶನಾಯಾ ಕಪೂರ್, ಸಂಜಯ್ ಕಪೂರ್ ಮತ್ತು ಮಹೀಪ್ ಕಪೂರ್ ಮತ್ತಿತರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

ಇಲ್ಲಿದೆ ನೋಡಿ ಅನಿಲ್​ಕಪೂರ್​ ಡಾನ್ಸ್​ ಮಾಡಿರುವ ವಿಡಿಯೋ: