ನ್ಯೂಸ್

ಡಿವೋರ್ಸ್‌ ಪಡೆದ ಪತ್ನಿ ಜತೆ ಕಾಶ್ಮೀರಕ್ಕೆ ಹೋದ ಆಮೀರ್‌: ಕುತೂಹಲದ ಮೂಡಿಸಿದ ರಾಜ್ಯಪಾಲರ ಭೇಟಿ

ಶ್ರೀನಗರ: ತಮ್ಮ ಎರಡನೆಯ ಹಿಂದೂ ಪತ್ನಿಗೂ ವಿಚ್ಛೇದನ ನೀಡಿ ಸುದ್ದಿಯಲ್ಲಿರುವ ಬಾಲಿವುಡ್ ನಟಿ ಆಮೀರ್‌ ಖಾನ್‌, ಡಿವೋರ್ಸ್‌ ಮಾಡಿದ ಪತ್ನಿಯ ಜತೆಗೇ ಜಮ್ಮುವಿಗೆ ತೆರಳಿದ್ದಾರೆ.

ಕಿರಣ್‌ ರಾವ್‌ ಅವರ ಜತೆ ಜಮ್ಮು- ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರನ್ನು ಆಮೀರ್‌ ಖಾನ್‌ ಭೇಟಿಯಾಗಿದ್ದಾರೆ. ಇವರು ರಾಜ್ಯಪಾಲರನ್ನು ಭೇಟಿಯಾಗಿದ್ದು ಏಕೆ ಎಂಬ ಬಗ್ಗೆ ಎಲ್ಲೆಡೆ ಭಾರಿ ಕುತೂಹಲಕ್ಕೆ ಕಾರಣವಾಗಿತ್ತು.

ನಂತರ ಈ ಬಗ್ಗೆ ಸ್ಪಷ್ಟಪಡಿಸಿರುವ ಆಮೀರ್‌ ಖಾನ್‌, ಜಮ್ಮು ಕೇಂದ್ರಾಡಳಿತ ಪ್ರದೇಶವನ್ನು ನೆಚ್ಚಿನ ಸಿನಿಮಾ ತಾಣವನ್ನಾಗಿಸುವ ಸಂಬಂಧ ಮಾತುಕತೆ ನಡೆಸಲು ರಾಜ್ಯಪಾಲರನ್ನು ಭೇಟಿಯಾಗಿರುವುದಾಗಿ ಹೇಳಿದ್ದಾರೆ.

ಈ ಬಗ್ಗೆ ಮಾತುಕತೆ ನಡೆಸಲಾಗಿದೆ. ಜತೆಗೆ ಜಮ್ಮು- ಕಾಶ್ಮೀರದಲ್ಲಿ ಚಿತ್ರೀಕರಣಕ್ಕೆ ನೀಡಲಾದ ಹೊಸ ಪಾಲಿಸಿ ಬಗ್ಗೆ ಮಾತನಾಡಲಾಗಿದೆ ಎಂದು ತಿಳಿದುಬಂದಿದೆ.
ಆಮೀರ್‌ ಖಾನ್‌ ಮತ್ತು ಕಿರಣ್‌ ರಾವ್‌ ಅವರು ಭೇಟಿಯಾಗಿದ್ದರು. ಚಿತ್ರೀಕರಣದ ಕುರಿತು ಮಾತನಾಡಲಾಗಿದೆ. ಕಾಶ್ಮೀರದಲ್ಲಿ ಚಿತ್ರೀಕರಣಕ್ಕೆ ಸಂಬಂಧಿಸಿದಂತೆ ಶೀಘ್ರದಲ್ಲಿಯೇ ಹೊಸ ನಿಯಮ ಜಾರಿ ಮಾಡಲಾಗುವುದು. ಮತ್ತೆ ಜಮ್ಮಿ-ಕಾಶ್ಮೀರದ ವೈಭವವನ್ನು ಸಿನಿಮಾದಲ್ಲಿ ತೋರಿಸುವ ವ್ಯವಸ್ಥೆ ಮಾಡಲಾಗುವುದು ಎಂದು ಲೆಫ್ಟಿನೆಂಟ್‌ ಗವರ್ನರ್‌ ಮನೋಜ್‌ ಸಿನ್ಹಾ, ಟ್ವೀಟರ್‌ ಮೂಲಕ ತಿಳಿಸಿದ್ದಾರೆ.

ಸದ್ಯ ಆಮೀರ್‌ ಖಾನ್‌ ಲಾಲ್‌ಸಿಂಗ್‌ ಚಡ್ಡಾ ಸಿನಿಮಾ ಮಾಡುತ್ತಿದ್ದಾರೆ. ಇತ್ತೀಚೆಗೆ ಕಿರಣ್‌ ರಾವ್‌ ಅವರಿಗೆ ವಿಚ್ಛೇದನ ನೀಡಿದ್ದ ಅವರು ಇದು ಡಿವೋರ್ಸ್‌ ಅಷ್ಟೇ. ಆ ನಂತರವೂ ನಾವು ಸ್ನೇಹಿತರಾಗಿಯೇ ಇರುತ್ತೇವೆ ಎಂದಿದ್ದರು.