ನ್ಯೂಸ್

ಧರಿಸಿರುವ ಒಳ ಉಡುಪು ಮಾರಿ ಸಂಪಾದಿಸುತ್ತಿದ್ದಾಳೆ ಈ ಬೆಡಗಿ! ತುದಿಗಾಲಲ್ಲಿ ನಿಂತಿರೋ 20 ಸಾವಿರ ಗ್ರಾಹಕರು

ನ್ಯೂಕ್ಯಾಸ್ಟ್ಲೆ (ಲಂಡನ್​): ಬದುಕುವ, ದುಡಿಯುವ ಮನಸ್ಸಿದ್ದರೆ ಹಲವು ದಾರಿಗಳು ಎನ್ನುತ್ತಾರೆ. ಆದರೆ ಲಂಡನ್​ನ ನ್ಯೂಕ್ಯಾಸ್ಟ್ಲೆ ವಿಶ್ವವಿದ್ಯಾಲಯದಲ್ಲಿ ಫಿಸಿಕ್ಸ್​ ವಿದ್ಯಾರ್ಥಿನಿಯಾಗಿರುವ ಈ ಬೆಡಗಿ ಮಾತ್ರ ವಿಚಿತ್ರ ಅಷ್ಟೇ ಅಸಹ್ಯ ಎನಿಸುವಂಥ ದಾರಿ ಹಿಡಿದಿದ್ದಾಳೆ.

ಅದೇನೆಂದರೆ, ತಾನು ಧರಿಸಿರುವ ಒಳಉಡುಪುಗಳನ್ನು ಆನ್​ಲೈನ್​ನಲ್ಲಿ ಮಾರುತ್ತಿದ್ದಾಳೆ! ಛೇ ಛೇ... ಇದನ್ನು ಯಾರಾದರೂ ಖರೀದಿಸುತ್ತಾರಾ ಎಂದು ಅಸಹ್ಯಪಟ್ಟುಕೊಳ್ಳಬೇಡಿ... ಇವಳು ಯಾವಾಗ ತನ್ನ ಒಳಉಡುಪನ್ನು ಆನ್​ಲೈನ್​ನಲ್ಲಿ ಹಾಕುತ್ತಾಳೆ ಎಂದು ದಿನನಿತ್ಯವೂ ಕಾಯುವವರ ಸಂಖ್ಯೆ 20 ಸಾವಿರಕ್ಕೂ ಅಧಿಕವಿದೆಯಂತೆ. ಅರ್ಥಾತ್​, ಸದ್ಯ ಈಕೆಗೆ ಪ್ರಪಂಚದಾದ್ಯಂತ 20 ಸಾವಿರ ಮಂದಿ ಕಾಯಂ ಗಿರಾಕಿಗಳು ಇದ್ದಾರೆ.

ತಾನು ಹೀಗೆ ಮಾಡುತ್ತಿರಲು ಈಕೆ ಇದಕ್ಕೆ ಕೊಟ್ಟಿರುವ ಕಾರಣ, ತನ್ನ ಅಧ್ಯಯನಕ್ಕೆ ಹಣ ಸಾಕಾಗುತ್ತಿಲ್ಲ, ಆದ್ದರಿಂದ ನಾನು ಈ ರೀತಿ ಮಾಡಿದ್ದೇನೆ ಎಂದು ಹೇಳಿಕೊಂಡಿದ್ದಾಳೆ ಈ 30 ವರ್ಷದ ಬೆಡಗಿ ಮೆಲ್​ ಬ್ರೌನ್​. ಸದ್ಯ 20 ಸಾವಿರ ಮಂದಿ ಇದ್ದು, ನಾನು ಇನ್ನೂ ಹೆಚ್ಚಿನ ಪ್ರಚಾರ ಮಾಡಿದರೆ ಜನರು ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ ಎಂದಿದ್ದಾಳೆ.

ಅಷ್ಟಕ್ಕೂ ಈಕೆಯ ಗ್ರಾಹಕರು ಶುಗರ್​ಡ್ಯಾಡಿಗಳಂತೆ. ಅರ್ಥಾತ್​ ಅತ್ಯಂತ ಶ್ರೀಮಂತ ವಯಸ್ಸಾದ ಪುರುಷರು ತಮ್ಮ ಲೈಂಗಿಕ ತೃಷೆಯನ್ನು ಬೇರೆ ಬೇರೆ ರೀತಿಯಲ್ಲಿ ತೀರಿಸಿಕೊಳ್ಳಲು ಚಿಕ್ಕ ಚಿಕ್ಕ ಹೆಣ್ಣುಮಕ್ಕಳನ್ನು ಈ ರೀತಿ ಹುಡುಕುತ್ತಿರುತ್ತಾರೆ. ಅಂಥವರನ್ನೇ ಹುಡುಕಿ ಹೆಕ್ಕಿ ತನ್ನ ಗ್ರಾಹಕರನ್ನಾಗಿ ಮಾಡಿಕೊಂಡಿದ್ದಾಳೆ ಮೆಲ್​.

ಅಂದಹಾಗೆ, ಈಕೆ ಸದ್ಯ ತಿಂಗಳಿಗೆ 600 ಡಾಲರ್​ಗೂ ಹೆಚ್ಚು ಹಣ ಗಳಿಸುತ್ತಿದ್ದಾಳಂತೆ. ಭಾರತೀಯ ರೂಪಾಯಿ ಲೆಕ್ಕಾಚಾರದಲ್ಲಿ ಹೇಳುವುದಾದರೆ ಸುಮಾರು 45 ಸಾವಿರ ರೂಪಾಯಿಗಳು.

ಮೊದಲು ನಾನು ಮಾಸ್ಕ್​ ಮಾರುತ್ತಿದ್ದೆ. ಇದಕ್ಕೆ ಅಷ್ಟೊಂದು ಬೇಡಿಕೆ ಬಂದಿರಲಿಲ್ಲ. ಅನೇಕ ಶುಗರ್​ಡ್ಯಾಡಿಗಳು ನನ್ನ ಒಳಉಡುಪಿನ ಬೇಡಿಕೆ ಇಟ್ಟರು. ಅದನ್ನೇ ಏಕೆ ಮಾರಾಟ ಮಾಡಬಾರದು ಎನ್ನಿಸಿ ಹೀಗೆ ಮಾಡುತ್ತಿದ್ದೇನೆ. ಇದರಿಂದ ನನ್ನ ಅಧ್ಯಯನಕ್ಕೂ ತುಂಬಾ ಪ್ರಯೋಜನ ಆಗುತ್ತಿದೆ ಎಂದಿದ್ದಾಳೆ ಈ ಸುಂದರಿ!

ನಾನು ಉತ್ತಮ ಗುಣಮಟ್ಟದ ಒಳ ಉಡುಪಿ ಖರೀದಿಸಿ ಹೆಚ್ಚೆಂದರೆ ಎರಡು ದಿನಗಳವರೆಗೆ ಅವುಗಳನ್ನು ಧರಿಸುತ್ತೇನೆ. ಅವುಗಳನ್ನು ಧರಿಸಿರುವ ಫೋಟೋ ಅಪ್​ಲೋಡ್​ ಮಾಡುತ್ತೇನೆ. ಯಾವುದು ಬೇಕು ಎಂದು ಗ್ರಾಹಕರು ನನಗೆ ಕೇಳುತ್ತಾರೆ. ಅದನ್ನು ಅವರಿಗೆ ಕೊಡುತ್ತೇನೆ. ಕೆಲವೊಮ್ಮೆ ಬೇರೆ ಬೇರೆ ಭಂಗಿಯ ಚಿತ್ರಗಳನ್ನು ಅಪ್​ಲೋಡ್​ ಮಾಡುವಂತೆ ಅವರೇ ನನಗೆ ಕೇಳುತ್ತಾರೆ. ಅದರಂತೆ ನಾನು ಮಾಡುತ್ತೇನೆ ಎಂದಿದ್ದಾಳೆ.‘