ನವದೆಹಲಿ: ತನ್ನ ಸಮಸ್ಯೆಗೆ ಸ್ತ್ರೀರೋಗ ತಜ್ಞರ ಬಳಿ ಹೋಗುವ ಬದಲು ಗಗನಸಖಿಯೊಬ್ಬರು ದಂತ ವೈದ್ಯರ ಬಳಿ ಹೋಗಿ ದಾರುಣವಾಗಿ ಮೃತಪಟ್ಟಿರುವ ಘಟನೆ ನವದೆಹಲಿಯ ಗುರುಗ್ರಾಮದಲ್ಲಿ ನಡೆದಿದೆ.
ಗುಪ್ತಾಂಗದಲ್ಲಿ ರಕ್ತಸ್ರಾವ ಆಗುತ್ತಿರುವ ಹಿನ್ನೆಲೆಯಲ್ಲಿ ನಾಗಾಲ್ಯಾಂಡ್‌ನ ಗಗನಸಖಿ ರೋಸಿ ಸಂಗ್ಮಾ ಚಿಕಿತ್ಸೆ ಪಡೆಯಬೇಕಿತ್ತು. ಆದರೆ ಅವರಿಗೆ ಯಾರೋ ಆಲ್ಫಾ ಹೆಲ್ತ್ ಕೇರ್‌ನ ವ್ಯವಸ್ಥಾಪಕ ನಿರ್ದೇಶಕ ಡಾ.ಅನುಜ್ ಬಿಸ್ನೋಯ್ ಮತ್ತು ದಂತವೈದ್ಯೆ ಅಂಜಲಿ ಆಶ್ಕ್ ಅವರ ಬಳಿ ಹೋಗುವಂತೆ ಹೇಳಿದ್ದಾರೆ. ಇವರು ಸ್ತ್ರೀರೋಗ ತಜ್ಞರು ಇರಬಹುದು ಎಂದು ಭಾವಿಸಿದ ರೋಸಿ ಸಂಗ್ಮಾ ಅವರು, ದಂಪತಿ ಬಳಿ ಚಿಕಿತ್ಸೆಗೆ ಹೋಗಿದ್ದಾರೆ. ಇದರಿಂದ 24 ವರ್ಷದ ಗಗನಸಖಿ ದುರಂತ ಅಂತ್ಯ ಕಂಡಿದ್ದಾರೆ.
ಈ ಘಟನೆಯ ತನಿಖೆಯನ್ನು ಸಿಬಿಐ ನಡೆಸುತ್ತಿದೆ. ಕೇಂದ್ರ ಗೃಹ ಸಚಿವಾಲಯದ ನಿರ್ದೇಶನದ ಮೇರೆಗೆ ಸಿಬಿಐ, ವೈದ್ಯರ ವಿರುದ್ಧ ಪ್ರಕರಣ ದಾಖಲಿಸಿದೆ. ವೈದ್ಯ ದಂಪತಿ ವಿರುದ್ಧ ಸಿಬಿಐ ಎಫ್‌ಐಆರ್ ದಾಖಲು ಮಾಡಿದ್ದು, ಭಾರತೀಯ ದಂಡ ಸಂಹಿತೆಯ ಸೆಕ್ಷನ್ 304 (ನಿರ್ಲಕ್ಷ್ಯದ ಕಾರಣ ಸಾವು) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಮೃತ ರೋಸಿ ಸಂಗ್ಮಾ ಅವರ ಸಂಬಂಧಿ ಸ್ಯಾಮ್ಯುಯೆಲ್ ಸಂಗ್ಮಾ ಅವರು ವೈದ್ಯಕೀಯ ನಿರ್ಲಕ್ಷ್ಯವನ್ನು ಶಂಕಿಸಿ ವೈದ್ಯರು ಮತ್ತು ಇತರ ಆಸ್ಪತ್ರೆ ವಿರುದ್ಧ ದೂರು ದಾಖಲಾದಾಗ ಪ್ರಕರಣ ಬೆಳಕಿಗೆ ಬಂದಿದೆ. ಆಸ್ಪತ್ರೆ ಮತ್ತು ಅದರ ವೈದ್ಯರ ಸಂಪೂರ್ಣ ನಿರ್ಲಕ್ಷ್ಯವು ಸ್ಪಷ್ಟವಾಗಿದೆ" ಎಂದು ಸಿಬಿಐ ತನ್ನ ಪ್ರಾಥಮಿಕ ವಿಚಾರಣೆಯಲ್ಲಿ ಹೇಳಿದೆ.
ರೋಸಿಯ ಗಂಭೀರ ಸ್ಥಿತಿಯ ಬಗ್ಗೆ ಬಿಸ್ನೋಯ್‌ಗೆ ತಿಳಿಸಲಾಗಿದ್ದರೂ, ಸ್ತ್ರೀರೋಗ ಸಮಸ್ಯೆಗಳನ್ನು ನಿಭಾಯಿಸಲು ಅನುಭವವಿಲ್ಲದ ದಂತವೈದ್ಯ ಅಶ್ಕ್‌ಗೆ ಪ್ರಕರಣವನ್ನು ನಿಭಾಯಿಸಲು ಅವರು ಸೂಚನೆಗಳನ್ನು ನೀಡಿದರು ಎಂದು ತನಿಖೆಯಿಂದ ತಿಳಿದುಬಂದಿದೆ. (ಏಜೆನ್ಸೀಸ್)