ಕಾಬುಲ್: ತಾಲಿಬಾನ್ ಉಗ್ರರು ಅಫ್ಘಾನಿಸ್ತಾನವನ್ನು ಸಂಪೂರ್ಣವಾಗಿ ವಶಪಡಿಸಿಕೊಂಡ ಬೆನ್ನಲ್ಲೇ ಇಲ್ಲಿಯ ಜನರ ಸ್ಥಿತಿ ಕರುಣಾಜನಕವಾಗಿದೆ. ಕಾಬುಲ್ ಅನ್ನು ಸಂಪೂರ್ಣವಾಗಿ ಸ್ವಾಧೀನಕ್ಕೆ ತೆಗೆದುಕೊಂಡಿದ್ದ ತಾಲಿಬಾನಿಗಳು ಈ ಮೂಲಕ ಸಂಪೂರ್ಣ ರಾಷ್ಟ್ರದ ಮೇಲೆ ಜಯ ಸಾಧಿಸಿದ್ದಾರೆ.
ಈ ಉಗ್ರರಿಂದ ತಪ್ಪಿಸಿಕೊಂಡು ಮಾನ, ಪ್ರಾಣವನ್ನು ಉಳಿಸಿಕೊಳ್ಳಲು ಜನರು ದೇಶಬಿಟ್ಟು ಹೊರಡುತ್ತಿದ್ದಾರೆ. ಆದರೆ ಬೇರೆ ದೇಶಗಳಿಗೆ ಹೋಗಲು ಸಾರಿಗೆ ಸೌಕರ್ಯಗಳೇ ಇಲ್ಲದೇ ಅಕ್ಷರಶಃ ನಲುಗಿ ಹೋಗಿದ್ದಾರೆ.
ಈ ನಡುವೆಯೇ ಕಾಬುಲ್ ವಿಮಾನ ನಿಲ್ದಾಣದಲ್ಲಿ ನಿಂತಿದ್ದ ಒಂದೇ ಒಂದು ವಿಮಾನವನ್ನು ಹತ್ತಲು ಅಫ್ಘಾನ್ ಪ್ರಜೆಗಳು ಮುಗಿಬಿದ್ದಿದ್ದು, ನೂಕು ನುಗ್ಗಲು ಉಂಟಾದ ದೃಶ್ಯವೀಗ ವೈರಲ್ ಆಗಿದೆ.
ವಿಮಾನ ಹತ್ತಲು ಹತ್ತು ಹಲವು ನಿಯಮಗಳು ಇರುತ್ತದೆ. ದಾಖಲೆಗಳನ್ನು ಪರಿಶೀಲಿಸಿದ ಬಳಿಕ ವಿಮಾನ ಹತ್ತಲು ಅನುಮತಿ ನೀಡಲಾಗುತ್ತದೆ. ಆದರೆ ಇದ್ಯಾವುದನ್ನೂ ಲೆಕ್ಕಿಸದೇ ವಿಮಾನ ನಿಲ್ದಾಣಕ್ಕೆ ನುಗ್ಗಿರುವ ಪ್ರಜೆಗಳು, ಪ್ರಾಣವನ್ನು ಉಳಿಸಿಕೊಂಡರೆ ಸಾಕು ಎನ್ನುವಂತೆ ಏಣಿ ಮೂಲಕ ವಿಮಾನ ಹತ್ತಲು ನೂಕು ನುಗ್ಗಲು ಮಾಡಿರುವ ದೃಶ್ಯವನ್ನು ಕಾಣಬಹುದಾಗಿದೆ.
ಮನಕಲಕುವ ವಿಡಿಯೋ ಇಲ್ಲಿದೆ ನೋಡಿ: