ನ್ಯೂಸ್

VIDEO: ವಿಮಾನ ತಳ್ಳಿಕೊಂಡು ಹೋಗುವುದನ್ನು ಕಂಡಿದ್ದೀರಾ? ‘ಜೋರ್‌ ಲಗಾಕೆ ಐಸ್ಸಾ...’ ಅಂತಿದ್ದಾರೆ ನೋಡಿ...

suchetana

ಕಠ್ಮಂಡು: ದ್ವಿಚಕ್ರ ವಾಹನ, ಬಸ್ಸು, ಲಾರಿ, ಕಾರು, ಆಟೋ ಇಂಥದ್ದನ್ನೆಲ್ಲಾ ತಳ್ಳಿಕೊಂಡು ಹೋಗುವುದು ದಿನಿನಿತ್ಯವೂ ಕಾಣಸಿಗುತ್ತದೆ. ಪೆಟ್ರೋಲ್‌, ಡೀಸೆಲ್‌ ಖಾಲಿಯಾದಾಗ, ಕೆಟ್ಟುನಿಂತಾಗ ತಳ್ಳಿಕೊಂಡು ಹೋಗುವುದು ಮಾಮೂಲು. ಆದರೆ ಬೃಹದಾಕಾರವಾಗಿರುವ ವಿಮಾನವನ್ನು ಜನರು ತಳ್ಳಿಕೊಂಡು ಹೋಗುತ್ತಾರೆ ಎಂದರೆ ನಂಬುವುದು ಕಷ್ಟ ಅಲ್ವಾ?

ಆದರೆ ನೇಪಾಳದಲ್ಲಿ ಇಂಥದ್ದೊಂದು ದೃಶ್ಯ ಕಂಡುಬಂದಿದೆ. ರನ್‌ವೇನಲ್ಲಿ ಕೆಟ್ಟುನಿಂತಿರುವ ವಿಮಾನವನ್ನು ಜನರು ತಳ್ಳಿಕೊಂಡು ಹೋಗುತ್ತಿರುವ ದೃಶ್ಯ ಇದಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಜನರಿಗೆ ಅಚ್ಚರಿ ಮೂಡಿಸುವಂತಿದೆ.

ನೇಪಾಳದ ತಾರಾ ಏರ್ ವಿಮಾನ ಇದಾಗಿದೆ. ಕೋಲ್ಟಿಯ ಬಾಜುರಾ ವಿಮಾನ ನಿಲ್ದಾಣದಲ್ಲಿ ಇಳಿಯುವಾಗ ವಿಮಾನದ ಹಿಂಭಾಗದ ಟೈರ್ ಸ್ಫೋಟಗೊಂಡಿತು, ಇದರಿಂದಾಗಿ ರನ್‌ವೇಯಿಂದ ಚಲಿಸಲು ಸಾಧ್ಯವಾಗಲಿಲ್ಲ. ರನ್‌ವೇನಲ್ಲಿ ಕೆಟ್ಟುನಿಂತರ ಇತರ ವಿಮಾನಗಳ ಹಾರಾಟಕ್ಕೆ ಕಷ್ಟ. ಆದ್ದರಿಂದ 20ಕ್ಕೂ ಅಧಿಕ ಮಂದಿ ಈ ವಿಮಾನವನ್ನು ತಳ್ಳಿಕೊಂಡು ಹೋಗಿದ್ದಾರೆ.

ವಿಮಾನ ತಳ್ಳುವ ದೃಶ್ಯ ಇಲ್ಲಿದೆ ನೋಡಿ...