ನ್ಯೂಸ್

VIDEO: ಇಬ್ಬರು ನಿರೂಪಕರ ಮಧ್ಯೆ ಸಿಕ್ಕು ವೇದಿಕೆ ಮೇಲೆಯೇ ಬಿಕ್ಕಿಬಿಕ್ಕಿ ಅತ್ತ ನಟಿ ಕೃತಿ- ಅಷ್ಟಕ್ಕೂ ಆಗಿದ್ದೇನು? ವಿಡಿಯೋ ಇಲ್ಲಿದೆ...

suchetana

ಚೆನ್ನೈ​: ಕನ್ನಡತಿ ಆಗಿದ್ದರೂ ಟಾಲಿವುಡ್​ನಲ್ಲಿ ಮಿಂಚುತ್ತಿರುವ ಮುದ್ದುಮೊಗದ ತಾರೆ ಕೃತಿ ಶೆಟ್ಟಿ. ಇದೀಗ ಇವರು ನ್ಯಾಷನಲ್​ ಕ್ರಷ್​ ಆಗಿದ್ದಾರೆ. ಇಂಥ ತಾರೆ ಸಂದರ್ಶನವೊಂದರಲ್ಲಿ ಬಿಕ್ಕಿ ಬಿಕ್ಕಿ ಅತ್ತಿದ್ದು, ಅಭಿಮಾನಿಗಳಲ್ಲಿ ಭಾರಿ ಬೇಸರ ಮೂಡಿಸಿದೆ.

ಅಷ್ಟಕ್ಕೂ ಆಗಿದ್ದೇನೆಂದರೆ, ಕೃತಿ ತಮಿಳಿನ ವಾಡ ಪೋಚೆ ಕಾರ್ಯಕ್ರಮದಲ್ಲಿ ನಟಿ ಕೃತಿ ಶೆಟ್ಟಿ ಭಾಗಿಯಾಗಿದ್ದರು. ಈ ಕಾರ್ಯಕ್ರಮದಲ್ಲಿ ಇಬ್ಬರು ನಿರೂಪಕರು ಭಾಗವಹಿಸಿದ್ದು, ಅವರು ಕೃತಿಗೆ ಪ್ರಶ್ನೆ ಕೇಳುತ್ತಿದ್ದರು. ಪ್ರಶ್ನೆ ಕೇಳುವುದಕ್ಕೆ ಸಂಬಂಧಿಸಿದಂತೆ ನಿರೂಪಕರ ನಡುವೆ ಜೋರಾಗಿ ಜಗಳ ಶುರುವಾಗಿದೆ. ಇಬ್ಬರೂ ಕೈ ಕೈ ಮಿಲಾಯಿಸಿಕೊಂಡಿದ್ದಾರೆ.

ಪ್ರಶ್ನೆ ಕೇಳಲು ಮತ್ತೊಬ್ಬ ನಿರೂಪಕ ಬಿಡಲಿಲ್ಲ. ಕೃತಿ ಅವರಿಗೆ ಪ್ರಶ್ನೆ ಕೇಳುವುದನ್ನು ನಿಲ್ಲಿಸಿ ಇಬ್ಬರೂ ನಿರೂಪಕರು ಜಗಳ ಶುರುಮಾಡಿಕೊಂಡಿದ್ದರಿಂದ ಶಾಕ್​ ಆದ ಕೃತಿ ಜೋರಾಗಿ ಅತ್ತಿದ್ದಾರೆ. ಗಳಗಳನೆ ಕಣ್ಣೀರು ಸುರಿಸಿದ್ದಾರೆ.

ಕೃತಿ ಕಣ್ಣೀರು ಹಾಕುತ್ತಿದ್ದಂತೆಯೇ ನಿರೂಪಕರು ತಣ್ಣಗಾಗಿದ್ದು, ಕೊನೆಗೆ ಸತ್ಯ ಹೇಳಿದ್ದಾರೆ. ಅದೇನೆಂದರೆ ಈ ರೀತಿ ಜಗಳವನ್ನು ತಾವು ತಮಾಷೆಗಾಗಿ ಮಾಡಿದ್ದು, ನಿಮಗೆ ಶಾಕ್​ ನೀಡಲು ಮೊದಲೇ ಪ್ಲ್ಯಾನ್​ ಮಾಡಿಕೊಂಡಿದ್ದೆವು ಎಂದಿದ್ದಾರೆ. ಆದರೆ ಕೃತಿ ಮಾತ್ರ ಅಳುವುದನ್ನು ನಿಲ್ಲಿಸಲಿಲ್ಲ. "ಈ ರೀತಿ ಜೋರಾಗಿ ಜಗಳ ಆಡಿದರೆ ನನಗೆ ಸಹಿಸಿಕೊಳ್ಳಲು ಆಗುವುದಿಲ್ಲ ಎಂದು ಪುನಃ ಅಳಲು ಶುರು ಮಾಡಿದರು.

ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್​ ಆಗಿದೆ. ಅದರ ವಿಡಿಯೋ ಇಲ್ಲಿದೆ ನೋಡಿ...