ನ್ಯೂಸ್

ಸಿದ್ಧಾಂತ್‌ ಜತೆಗಿನ ಆ ಕಿಸ್ಸಿಂಗ್‌ ಸೀನ್‌- ಅಬ್ಬಬ್ಬಾ ಸುಸ್ತಾದೆ, ಎಂದಿಗೂ ಹೀಗಾಗಿರಲಿಲ್ಲ ಎಂದು ಅನುಭವ ಬಿಚ್ಚಿಟ್ಟ ನಟಿ ದೀಪಿಕಾ

ಮುಂಬೈ: ಹಾಟ್‌ ತಾರೆ, ಸೆಕ್ಸಿ ನಟಿ ಎನಿಸಿಕೊಂಡಿರುವ ಬಾಲಿವುಡ್‌ ಬೆಡಗಿಯರ ಪೈಕಿ ದೀಪಿಕಾ ಪಡುಕೋಣೆ ಕೂಡ ಒಬ್ಬರು. ಯಾವುದೇ ಸೀನ್‌ ಆದರೂ ಅಧಿಕ ರೀ ಟೇಕ್‌ ತೆಗೆದುಕೊಳ್ಳದೇ ದೃಶ್ಯವನ್ನು ಮಾಡಿಮುಗಿಸುವ ನಟಿ ಕೂಡ ಎಂಬ ಈಕೆ ಖ್ಯಾತಿ ಪಡೆದಿದ್ದಾರೆ. ಆದರೆ ನಟ ಸಿದ್ಧಾಂತ್‌ ಜತೆಗಿನ ರೊಮಾನ್ಸ್‌ ದೃಶ್ಯವೊಂದರ ಬಗ್ಗೆ ತಮಗಾಗಿರುವ ಅನುಭವವನ್ನು ನಟಿ ಈಗ ಬಿಚ್ಚಿಟ್ಟಾರೆ.

‘ಗೆಹ್ರಿಯಾನ್​’ ಚಿತ್ರದಲ್ಲಿ ದೀಪಿಕಾ ಸಿದ್ಧಾಂತ್‌ ಜತೆಗೆ ನಾಯಕಿಯಾಗಿ ನಟಿಸಿದ್ದಾರೆ. ಈ ಸಿನಿಮಾದ ‍ಪ್ರಚಾರದ ವೇಳೆ ಕಿಸ್ಸಿಂಗ್‌ ಸೀನ್‌ ಕುರಿತಾಗಿ ಅವರು ಅನುಭವ ಹಂಚಿಕೊಂಡಿದ್‌ದು ಹೀಗೆ: ‘ಸಾಧಾರಣವಾಗಿ ನಾನು ಯಾವುದೇ ಸೀನ್‌ಗಳಿಗೆ ಅತ್ಯಧಿಕ ರೀಟೇಕ್‌ ತೆಗೆದುಕೊಳ್ಳುವುದಿಲ್ಲ. ಆದರೆ ಸಿದ್ಧಾಂತ್‌ ಜತೆಗಿನ ಕಿಸ್ಸಿಂಗ್‌ ಸೀನ್‌ ಮಾತ್ರ ನನಗೆ ಬಹಳ ತೊಂದರೆಯನ್ನೇ ಕೊಟ್ಟುಬಿಟ್ಟಿತು. ಈ ರೊಮಾನ್ಸ್‌ ಸೀನ್‌ಗೆ ನಾನು 48 ಬಾರಿ ರೀಟೇಕ್‌ ತೆಗೆದುಕೊಳ್ಳಬೇಕಾಯಿತು ಎಂದು ದೀಪಿಕಾ ಹೇಳಿದ್ದಾರೆ.

ಸಿದ್ಧಾಂತ್​ ಜತೆ ಈ ದೃಶ್ಯ ಮಾಡುವುದು ನನಗೆ ಭಾರಿ ಸವಾಲಿನದ್ದಾಗಿತ್ತು. ಅವರ ಜತೆ ಈ ದೃಶ್ಯ ಮಾಡಲು ನನಗೆ ಸಿಕ್ಕಾಪಟ್ಟೆ ಮುಜುಗರವೂ ಉಂಟಾಗಿತ್ತು. ಆದ್ದರಿಂದ ಎಷ್ಟೇ ಸಲ ರೊಮಾನ್ಸ್‌ ಸೀನಿನ ಟೇಕ್‌ ಆದರೂ ಅದು ಸರಿ ಬರುತ್ತಿರಲಿಲ್ಲ. 48ನೇ ಬಾರಿ ಸರಿಯಾಯಿತು ಎಂದಿದ್ದಾರೆ.

ಅಂದಹಾಗೆ ಗೆಹ್ರಿಯಾನ್​ ಚಿತ್ರವು ಬರುವ ಫೆಬ್ರವರಿ 11 ರಂದು ಒಟಿಟಿ ಅಮೆಜಾನ್​ ಪ್ರೈಮ್​ನಲ್ಲಿ ಬಿಡುಗಡೆಯಾಗಲಿದೆ. ಅಲ್ಲದೇ, ಸಿನಿಮಾದ ಟ್ರೈಲರ್​ ಬಿಡುಗಡೆಯಾಗಿದೆ. ಇದರಲ್ಲಿ ದೀಪಿಕಾ ಹೆಚ್ಚಿನ ದೃಶ್ಯಗಳಲ್ಲಿ ತುಂಡುಡುಗೆಯಲ್ಲೇ ಕಾಣಿಸಿಕೊಂಡಿದ್ದಾರೆ.