ನ್ಯೂಸ್

ಮದುವೆಗೆ ಹೋದವರು ಮಸಣ ಸೇರಿದರು: ಭೀಕರ ಅಪಘಾತದಲ್ಲಿ ಐವರ ಸಾವು, ಹಲವರ ಸ್ಥಿತಿ ಚಿಂತಾಜನಕ

ಸೋನಾಪುರ (ಒಡಿಶಾ): ಮದುವೆ ಸಮಾರಂಭಕ್ಕೆ ಹೋದ ಪ್ರಯಾಣಿಕರು ಭೀಕರ ಅಪಘಾತದಲ್ಲಿ ಮೃತಪಟ್ಟಿರುವ ಘಟನೆ ಒಡಿಶಾದ ಸೋನಾಪುರ ಜಿಲ್ಲೆಯ ಮಹಾನದಿ ಸೇತುವೆಯ ಮೇಲೆ ನಡೆದಿದೆ.

ಎಸ್‌ಯುವಿ ಕಾರು ಮತ್ತು ಟ್ರಕ್ ನಡುವೆ ಈ ಅಪಘಾತ ಸಂಭವಿಸಿದ್ದು, ಐವರು ಸ್ಥಳದಲ್ಲಿಯೇ ಮೃತಪಟ್ಟಿದ್ದರೆ, ಹಲವರ ಸ್ಥಿತಿ ಗಂಭೀರವಾಗಿದೆ. ನಿನ್ನೆ ತಡರಾತ್ರಿ ಒಂದು ಗಂಟೆ ಸುಮಾರಿಗೆ ಈ ದುರ್ಘಟನೆ ಸಂಭವಿಸಿದೆ.

ಸೋನಾಪುರ ಜಿಲ್ಲೆಯ ಉಲ್ಲುಂದಾ ಬ್ಲಾಕ್‌ನ ನಿಮ್ನಾ ಗ್ರಾಮದ 10 ಜನರು ಕೌದಿಯಾಮುಂಡ ಗ್ರಾಮದಲ್ಲಿ ಮದುವೆ ಸಮಾರಂಭದಲ್ಲಿ ಭಾಗವಹಿಸಿ ಹಿಂತಿರುಗುತ್ತಿದ್ದಾಗ ಎರಡು ವಾಹನಗಳ ನಡುವೆ ಡಿಕ್ಕಿಯಾಗಿದೆ. ಗಾಯಾಳುಗಳನ್ನು ಪೊಲೀಸರು ಮತ್ತು ಇತರ ರಕ್ಷಣಾ ತಂಡದವರು ರಕ್ಷಿಸಿ ಸೋನಾಪುರ ಆಸ್ಪತ್ರೆಗೆ ದಾಖಲಿಸಿದ್ದಾರೆ.