ನ್ಯೂಸ್

50 ವರ್ಷ ಇವರೇ ಪ್ರಧಾನಿ! ಸುದೀರ್ಘ ಆಳ್ವಿಕೆಯ ದಾಖಲೆ ನಿರ್ಮಿಸಿದ್ದ ಖಲೀಫಾ ನಿಧನ

suchetana

ಬಹ್ರೇನ್​: ಸುದೀರ್ಘ ಕಾಲ ಬಹ್ರೇನ್ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದ ಖಲೀಫಾ ಬಿನ್​ ಸಲ್ಮಾನ್​ ಅಲ್​ ಖಲೀಫಾ ಇಂದು ನಿಧರನಾಗಿದ್ದಾರೆ. ಅವರಿಗೆ 84 ವರ್ಷ ವಯಸ್ಸಾಗಿತ್ತು.

ಶೇಖ್ ಖಲೀಫಾ ಇಂದು ಬೆಳಗ್ಗೆ ಅಮೆರಿಕದ ಮೇಯೋ ಕ್ಲಿನಿಕ್ ಆಸ್ಪತ್ರೆಯಲ್ಲಿ ನಿಧನರಾಗಿರುವುದಾಗಿ ಹೇಳಲಾಗಿದೆ. ದೇಶದಲ್ಲಿ ಒಂದು ವಾರ ಶೋಕಾಚರಣೆ ಘೋಷಿಸಲಾಗಿದೆ.

1935ರ ನವೆಂಬರ್ 24ರಂದು ಜನಿಸಿದ್ದ ಖಲೀಫಾ ಅವರು 1971ರ ಆಗಸ್ಟ್ 15ರಿಂದ ಬಹ್ರೇನ್​ ಪ್ರಧಾನಮಂತ್ರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಹ್ರೇನ್ ಸ್ವಾತಂತ್ರ್ಯಗೊಂಡಾಗಿನಿಂದ ಅಲ್ಲಿನ ಪ್ರಧಾನಿಯಾಗಿದ್ದರು. ಈ ಮೂಲಕ ವಿಶ್ವದಲ್ಲಿಯೇ ಪ್ರಧಾನಿಯಾಗಿ ಸುದೀರ್ಘ ಸೇವೆ ಸಲ್ಲಿಸಿರುವ ಪ್ರಧಾನ ಮಂತ್ರಿ ಎನಿಸಿದ್ದಾರೆ.

ಕರೊನಾ ಹಿನ್ನೆಲೆಯಲ್ಲಿ ಅತ್ಯಂತ ಆಪ್ತವಲಯದವರ ಸಮ್ಮುಖದಲ್ಲಷ್ಟೇ ಅಂತ್ಯಕ್ರಿಯೆ ನಡೆಯಲಿದೆ. ಖಲೀಫಾ ನಿಧನಕ್ಕೆ ಇಸ್ರೇಲ್​ ಪ್ರಧಾನಿ ಸೇರಿದಂತೆ ವಿಶ್ವದ ನಾನಾ ಗಣ್ಯರು ಶೋಕ ವ್ಯಕ್ತಪಡಿಸಿದ್ದಾರೆ.