ನ್ಯೂಸ್

VIDEO: 144 ಮಹಡಿಗಳ ಕಟ್ಟಡ 10 ಸೆಕೆಂಡ್​ನಲ್ಲೇ ನೆಲಸಮ- ಮಾಡಿತು ವಿಶ್ವದಾಖಲೆ

suchetana

ಅಬುಧಾಬಿ: ಅಬುಧಾಬಿಯ ಮಿನಾ ಪ್ಲಾಜಾ ಗೋಪುರಗಳ 144 ಮಹಡಿಗಳನ್ನು ಕೇವಲ ಹತ್ತೇ ಸೆಕೆಂಡ್​ನಲ್ಲಿ ನೆಲಸಮ ಮಾಡಲಾಗಿದ್ದು, ಇದೀಗ ಗಿನ್ನೆಸ್​ ವಿಶ್ವ ದಾಖಲೆಯ ಪುಟಗಳಲ್ಲಿ ದಾಖಲಾಗಿದೆ.

165 ಮೀಟರ್​ ಎತ್ತರದ ನಾಲ್ಕು ಗೋಪುರಗಳು ಇಲ್ಲಿದ್ದವು. ಮೋಡಾನ್​ ಪ್ರಾಪರ್ಟೀಸ್​, ಮಾಸ್ಟರ್​ ಡೆವಲಪರ್​ ಸಂಸ್ಥೆಗಳ ಆಶ್ರಯದಲ್ಲಿ ಈ ಕಟ್ಟಡವನ್ನು ನೆಲಸಮ ಮಾಡಲಾಗಿದೆ. ಸ್ಫೋಟಕಗಳನ್ನು ಬಳಸಿ ಅಕ್ಕಪಕ್ಕ ಹಾನಿಯಾಗದಂತೆ ಕೇವಲ 10 ಸೆಕೆಂಡ್​ಗಳಲ್ಲಿ ನೆಲಸಮಗೊಳಿಸಿದ ಅತಿ ಎತ್ತರದ ಕಟ್ಟಡ ಇದು ಎನ್ನುವ ಕಾರಣಕ್ಕೆ ದಾಖಲೆಯ ಪುಟಕ್ಕೆ ಸೇರಿದೆ.

6 ಸಾವಿರ ಕೆ.ಜಿ ಸ್ಫೋಟಕಗಳಿಂದ ನಾಲ್ಕು ಗೋಪುರಗಳನ್ನು ನೆಲಸಮ ಮಾಡಲಾಗಿದೆ. ಮೂರು ದಶಲಕ್ಷ ಚದರ ಮೀಟರ್ ಬಂದರು ಪ್ರದೇಶದ ಅಭಿವೃದ್ಧಿಯನ್ನು ಮಾಡಿ ಇಲ್ಲಿ ಪ್ರವಾಸಿ ತಾಣ ಮಾಡಲು ಉದ್ದೇಶಿಸಿದ್ದ ಹಿನ್ನೆಲೆಯಲ್ಲಿ ಈ ಕಟ್ಟಡವನ್ನು ನೆಲಸಮ ಮಾಡಲಾಗಿದೆ.

ಅತ್ಯುತ್ತಮ ಸುರಕ್ಷತಾ ಸಾಧನಗಳ ಜತೆಗೆ ಯಾವುದೇ ಹಾನಿಯಿಲ್ಲದಂತೆ ಸ್ಫೋಟಕ ಬಳಸಿ ನೆಲಸಮ ಮಾಡಲಾಗಿದೆ ಎಂದು ಇಲ್ಲಿಯ ಸರ್ಕಾರ ಹೇಳಿದೆ. ಕಟ್ಟಡ ನೆಲಸಮದ ಹಿನ್ನೆಲೆಯಲ್ಲಿ ಬಂದರು ಪ್ರದೇಶದ ಅಂಗಡಿಗಳು ಮತ್ತು ಮಾರುಕಟ್ಟೆಗಳು ತಾತ್ಕಾಲಿಕವಾಗಿ ಮುಚ್ಚಲಾಗಿತ್ತು.