Ryuta Watanabe: ಆತನಿಗೆ ನಾಲ್ವರು ಪತ್ನಿಯರು ಮತ್ತು ಇಬ್ಬರು ಗೆಳತಿಯರಿದ್ದರೂ ಅದು ಸಾಕಾಗುತ್ತಿಲ್ಲವಂತೆ. ಆತನ ಜೀವನದ ಗುರಿಯೇ ತುಂಬಾ ವಿಚಿತ್ರವಾಗಿದೆ. ಆತನ ಆಸೆಗಳ ಬಗ್ಗೆ ನೀವೇನಾದರೂ ತಿಳಿದರೆ ಈ ಜಗತ್ತಿನಲ್ಲಿ ಇಂಥಾ ವ್ಯಕ್ತಿಗಳು ಕೂಡ ಇದಾರಾ ಎಂದು ಹುಬ್ಬೇರಿಸುತ್ತೀರಿ. ಹಾಗೇ ಈ ಕಣ್ಣಿನಲ್ಲಿ ಇನ್ನು ಏನೇನು ನೋಡಬೇಕೋ ಎಂದು ಮನಸ್ಸಿನಲ್ಲಿ ಅಂದುಕೊಳ್ಳದೇ ಇರಲಾರಿರಿ. ಅಷ್ಟಕ್ಕೂ ಆತ ಯಾರು? ಆತನ ಗುರಿಯೇನು? ಆತ ಎಲ್ಲಿಯವನು? ಎಂಬ ನಿಮ್ಮ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.
ಆ ವ್ಯಕ್ತಿ ಯಾರೆಂದರೆ ವೈರಲ್ ಸ್ಟಾರ್ ಎಂದೇ ಖ್ಯಾತಿ ಪಡೆದಿರುವ ಯುತಾ ವಟನಬೆ ( Ryuta Watanabe ). ವಯಸ್ಸು 36. ಈತ ಜಪಾನ್‌ನ ಹೊಕ್ಕೈಡೋ ನಿವಾಸಿ. ಪ್ರಸ್ತುತ ಈತನಿಗೆ ನಾಲ್ವರು ಪತ್ನಿಯರು ಮತ್ತು ಇಬ್ಬರು ಗೆಳತಿಯರಿದ್ದಾರೆ. ಅಲ್ಲದೆ, ಹತ್ತು ಮಕ್ಕಳ ತಂದೆಯೂ ಕೂಡ ಹೌದು. ಈತನ ಗುರಿ ಏನೆಂದರೆ 54 ಮಕ್ಕಳನ್ನು ಹೊಂದುವುದು. ಅಲ್ಲದೆ, ತನ್ನನ್ನು 'ವಿವಾಹಗಳ ದೇವರು' ಎಂದು ಜನರು ಕರೆಯಬೇಕೆಂದು ಬಯಸುತ್ತಾನೆ.
ಸದ್ಯ ತನ್ನ ಕನಸುಗಳನ್ನು ಈಡೇರಿಸಲು ಹೊಸ ಹೆಂಡತಿಯರನ್ನು ಹುಡುಕುತ್ತಿದ್ದಾನೆ. ಇನ್ನೊಂದು ಆಶ್ಚರ್ಯಕರ ಸಂಗತಿ ಏನೆಂದರೆ, ಕಳೆದ ಹತ್ತು ವರ್ಷಗಳಿಂದ ಈತ ಕೆಲಸಕ್ಕೆ ಹೋಗಿಲ್ಲ. ಮತ್ತೆ ಜೀವನ ಹೇಗೆ ನಡೆಯುತ್ತಿದೆ ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡಬಹುದು. ಅದು ಹೇಗೆಂದರೆ, ಹೆಂಡತಿಯರು ಮತ್ತು ಗೆಳತಿಯರ ಸಂಪಾದನೆಯಿಂದಲೇ ಈತನ ಜೀವನ ಸಾಗುತ್ತಿದೆ. ತನ್ನ ಪತ್ನಿ ಮತ್ತು ಗೆಳತಿಯರು ಕೆಲಸಕ್ಕೆ ಹೋದಾಗ, ಈತ ಮನೆಯವರನ್ನು ನೋಡಿಕೊಳ್ಳುತ್ತಾನೆ. ಅಡುಗೆ ಮಾಡುವುದು ಮತ್ತು ಮಕ್ಕಳನ್ನು ನೋಡಿಕೊಳ್ಳುವ ಕೆಲಸ ಮಾಡುತ್ತಾನೆ.
ಯುತಾ ವಟನಬೆಗೆ ಅನೇಕ ಹೆಂಡತಿಯರು ಮತ್ತು ಮಕ್ಕಳಿರುವುದರಿಂದ ಅವರದು ದುಬಾರಿ ಜೀವನವೂ ಹೌದು. ಕುಟುಂಬದ ಮಾಸಿಕ ವೆಚ್ಚ 9,14,000 ಯೆನ್ (5.13 ಲಕ್ಷ ರೂಪಾಯಿ) ಆಗುತ್ತದೆ. ಆದರೂ ಸಂಪೂರ್ಣ ಸೌಲಭ್ಯಗಳಿರುವ ಮನೆಯಲ್ಲಿ ವಾಸಿಸುತ್ತಿದ್ದಾರೆ. ಪ್ರತಿ ಸಂಗಾತಿಗೆ ಪ್ರತ್ಯೇಕ ಕೊಠಡಿಗಳಿವೆ. ತನಗೆ ಹೆಚ್ಚು ಸಂಗಾತಿಯರು ಇರುವುದರಿಂದ ಅವರೆಲ್ಲರನ್ನು ತೃಪ್ತಿಪಡಿಸಲು ವಾರಕ್ಕೆ ಕನಿಷ್ಠ 28 ಬಾರಿ ಲೈಂಗಿಕ ಕ್ರಿಯೆ ನಡೆಸಬೇಕು ಎಂದು ವಟನಬೆ ಹೇಳುತ್ತಾರೆ.
ಹೆಂಡತಿಯರು ಮತ್ತು ಗೆಳತಿಯರು ಒಂದೇ ಮನೆಯಲ್ಲಿ ವಾಸಿಸುತ್ತಿದ್ದಾರೆ. ಆದರೆ, ಎಲ್ಲರ ನಡುವೆ ಪರಸ್ಪರ ಉತ್ತಮ ಸಂಬಂಧವಿದೆ ಎಂದು ವಟನಬೆಗೆ ಹೇಳಿದ್ದಾರೆ. ಇನ್ನು 54 ಮಕ್ಕಳ ತಂದೆಯಾಗುವ ವಟನಬೆ ಆಸೆಯ ಹಿಂದೆ ಒಂದು ಕಾರಣವೂ ಇದೆ. ಅದೇನೆಂದರೆ, 1841ರಲ್ಲಿ ಅವರ ದೇಶದಲ್ಲಿ ಒಬ್ಬ ವ್ಯಕ್ತಿ 53 ಜನರ ತಂದೆಯಾಗಿದ್ದನು. ಈ ದಾಖಲೆಯನ್ನು ಮುರಿಯುವುದು ವಟನಾಬೆ ಅವರ ಗುರಿಯಾಗಿದೆ. ಅದಕ್ಕಾಗಿ ಅವರು 54 ಜನರ ತಂದೆಯಾಗಬೇಕು ಮತ್ತು ಅದು ಇತಿಹಾಸದಲ್ಲಿ ಉಳಿಯಬೇಕು ಎನ್ನುತ್ತಾರೆ ವಟನಬೆ. (ಏಜೆನ್ಸೀಸ್)