ನ್ಯೂಸ್

ರಷ್ಯಾ ಅಧ್ಯಕ್ಷರ ಕಡು ವಿರೋಧಿ ನವಾಲ್ನಿ ಯಾವುದೇ ಕ್ಷಣದಲ್ಲಾದರೂ ಸಾಯಬಹುದು ಎಂದ ವೈದ್ಯರು

ಮಾಸ್ಕೋ: ರಷ್ಯಾದ ವಿರೋಧ ಪಕ್ಷದ ನಾಯಕ ಹಾಗೂ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಕಡು ವಿರೋಧಿ ಎಂದು ಗುರುತಿಸಿಕೊಂಡಿರುವ ಅಲೆಕ್ಸಿ ನವಾಲ್ನಿ ಅವರು ಯಾವುದೇ ಕ್ಷಣದಲ್ಲಿ ಸಾಯಬಹುದು ಎಂದು ಅವರ ವೈದ್ಯರು ತಿಳಿಸಿದ್ದಾರೆ.

ಅಲೆಕ್ಸಿ ನವಾಲ್ನಿ ಪುಟಿನ್ ವಿರೋಧಿ ಹೋರಾಟದ ಆರೋಪದ ಮೇಲೆ ಸದ್ಯ ಜೈಲಿನಲ್ಲಿದ್ದಾರೆ. ಜೈಲಿನಲ್ಲಿರುವ ಅವರು ತಮ್ಮ ವೈದ್ಯರ ಮೂಲಕವೇ ಚಿಕಿತ್ಸೆ ನೀಡಬೇಕು ಎಂದು ಉಪವಾಸ ಸತ್ಯಾಗ್ರಹವನ್ನು ಮಾಡುತ್ತಿದ್ದಾರೆ. ಕಳೆದ ಎರಡು ವಾರಗಳಿಂದ ಉಪವಾಸ ಸತ್ಯಾಗ್ರಹ ಆರಂಭಿಸಿರುವ ಅವರ ಆರೋಗ್ಯ ಸಂಪೂರ್ಣ ಬಿಗಡಾಯಿಸಿದೆ.

ರಷ್ಯಾದ ವೈದ್ಯ ಯಾರೋಸ್ಲಾವೊ ಯಾಶ್ಮಿಕಿನ್ ಅವರು ಫೇಸ್​ಬುಕ್​ನಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು, ಅಲೆಕ್ಸಿ ನವಾಲ್ನಿ ಅವರ ಆರೋಗ್ಯದ ವರದಿಗಳನ್ನು ಅವರ ಕುಟುಂಬದವರು ನನ್ನ ಜೊತೆ ಹಂಚಿಕೊಂಡಿದ್ದಾರೆ. ಅವರ ದೇಹದಲ್ಲಿ ಪೊಟಾಷಿಯಂ ಪ್ರಮಾಣ ಹೆಚ್ಚಾಗಿದೆ. ಇದರಿಂದ ಅವರಿಗೆ ಹೃದಯಾಘಾತ ಸಂಭವಿಸಬಹುದು. ಅಲ್ಲದೇ ಮೂತ್ರಪಿಂಡದ ಮೇಲೂ ಕೆಟ್ಟ ಪರಿಣಾಮವಾಗಬಹುದು. ಹೀಗಾಗಿ ಅವರು ಯಾವುದೇ ಕ್ಷಣದಲ್ಲೂ ಸಾಯಬಹುದು ಎಂದು ತಿಳಿಸಿದ್ದಾರೆ.

ಪುಟಿನ್ ಸರ್ಕಾರ ಭಷ್ಟಾಚಾರಗಳನ್ನು ಹೊರಗೆಳಿದಿರುವ ನವಾಲ್ನಿ , ಪುಟಿನ್ ಸರ್ಕಾರದ ವಿರುದ್ಧ ಬಹುದೊಡ್ಡ ಜನಾಂಧೋಲನವನ್ನು ಸಂಘಟಿಸಿದ್ದರು. ಹೀಗಾಗಿ ಕೋಪಗೊಂಡ ಪುಟಿನ್ ನವಾಲ್ನಿ ಮೇಲೆ ಕೆಲ ಪ್ರಕರಣಗಳನ್ನು ದಾಖಲಿಸಿ ಜೈಲಿಗೆ ಅಟ್ಟಿದ್ದಾರೆ. ನವಾಲ್ನಿ ಆಂಟಿ ಕರಪ್ಸನ್ ಫೌಂಡೆಶನ್​ನ ಮುಖ್ಯಸ್ಥರೂ ಆಗಿದ್ದಾರೆ. (ಏಜೇನ್ಸಿಸ್).