ನ್ಯೂಸ್

ಆಸ್ತಿ ಬೇಡ, ಕ್ರಿಕೆಟ್ ಆಡುವ ಭಾರತದ ಹುಡುಗ ಬೇಕು! ರಷ್ಯನ್ ಸುಂದರಿ ..beauty demands

ಬೆಂಗಳೂರು:  ( beauty demands ) 6 ಅಡಿ ಎತ್ತರದ, ಕ್ರಿಕೆಟ್ ಆಸಕ್ತಿಯುಳ್ಳ ಭಾರತೀಯ ಹುಡುಗ ಬೇಕು ಎಂದು ರಷ್ಯಾದ ಯುವತಿಯೊಬ್ಬಳು  ಸಾಮಾಜಿಕ ಜಾಲತಾಣದಲ್ಲಿ ಹುಡುಕಾಟ ನಡೆಸುತ್ತಿದ್ದಾಳೆ.

ಇನ್‌ಸ್ಟಾಗ್ರಾಮ್ ಮೂಲಕ ರಷ್ಯನ್ ಯುವತಿಯೊಬ್ಬಳು, ತನಗೆ ಭಾರತದ ಹುಡುಗ ಬೇಕು. ಅದು ಕೂಡ ಭಾರತದ ಹುಡುಗ 6 ಅಡಿ ಎತ್ತರವಿರಬೇಕು, ಕ್ರಿಕೆಟ್‌ನಲ್ಲಿ ಆಸಕ್ತಿ ಹೊಂದಿರಬೇಕು. ಜೊತೆಗೆ ಟ್ರಾವೆಲಿಂಗ್‌ನಲ್ಲಿಯೂ ಆಸಕ್ತಿ ಇರಬೇಕು. ಹುಡುಗನಿಗೆ ಯಾವುದೇ ಆಸ್ತಿ, ಅಂತಸ್ತು ಇರಬೇಕು ಎಂದು ಇಲ್ಲ. ದೆಹಲಿ, ಮುಂಬೈ, ದುಬೈ ಎಲ್ಲಿದ್ದರೂ ಸರಿ. ನಾನೇ ಅಂತಹ ಹುಡುಗ ಸಿಕ್ಕಿದರೆ ನನ್ನ ಲ್ಯಾಂಬೋರ್ಗಿನಿ ಕಾರಿನಲ್ಲಿ ಕರೆದುಕೊಂಡು ಹೋಗಿ ತನ್ನ ರೆಸ್ಟೋರೆಂಟ್‌ನಲ್ಲಿ ಡೇಟ್ ಮಾಡುವುದಾಗಿ ತಿಳಿಸಿದ್ದಾಳೆ.

ರಷ್ಯನ್ ಸುಂದರಿ ಭಾರತದ ಹುಡುಗ ಬೇಕು ಎಂಬ ಬೇಡಿಕೆಯ ವಿಡಿಯೋ ಭಾರೀ ವೈರಲ್ ಆಗಿದೆ. ಕೇರಳ, ಚೆನ್ನೈ, ಮಧುರೈ, ಬೆಂಗಳೂರು, ಪಂಜಾಬಿ, ಮುಂಬೈ, ಮಲೆಯಾಳಿ, ಹೈದರಾಬಾದ್ ಇತ್ಯಾದಿ ಯುವಕರು ಹೀಗೆ ತಮ್ಮ ಸ್ಥಳಗಳನ್ನು ಹಾಕಿ ಕಾಮೆಂಟ್ ಮಾಡಿದ್ದಾರೆ.

ಇನ್‌ಸ್ಟಾಗ್ರಾಮ್‌ನ girl_white_indian ಎಂಬ ಖಾತೆಯಿಂದ ರಷ್ಯನ್ ಮೂಲದ ನೆಲ್ಲಿ ಎಂಬ ಯುವತಿ ಹೀಗೆ ತನ್ನ ಬೇಡಿಕೆ ಇಟ್ಟಿರುವ ಹುಡುಗಿಯಾಗಿದ್ದಾಳೆ. ದುಬೈನಲ್ಲಿ ವಾಸವಾಗಿದ್ದು, ಭಾರತೀಯ ಸಂಸ್ಕೃತಿಯನ್ನು ತುಂಬಾ ಇಷ್ಟ. ಈಕೆಯ ಇನ್‌ಸ್ಟಾಗ್ರಾಮ್ ಖಾತೆಗೆ 4,86,906 ಫಾಲೋವರ್ಸ್‌ಗಳಿದ್ದಾರೆ. ಇದೀಗ ದುಬೈನಲ್ಲಿ ನಡೆಯುತ್ತಿರುವ ಭಾರತದ ಎಲ್ಲ ಕ್ರಿಕೆಟ್ ಪಂದ್ಯಗಳನ್ನು ನೋಡಲು ಹೋಗಿ, ಭಾರತ ತಂಡದ ಪರವಾಗಿ ಪ್ರೋತ್ಸಾಹ ನೀಡುತ್ತಿದ್ದಾರೆ. ಭಾರತದ ಸಂಸ್ಕೃತಿಯಂತೆ ಸೀರೆ, ಲೆಹೆಂಗಾ, ಚೂಡಿದಾರ್ ಸೇರಿದಂತೆ ಹಲವು ಉಡುಪುಗಳನ್ನು ದರಿಸಿಕೊಂಡಿದ್ದು, ಈ ಬಗ್ಗೆ ಫೋಟೋ ಶೂಟ್ ಹಾಗೂ ವಿಡಿಯೋ ಶೂಟ್ ಮಾಡಿಸಿ ಸಾಮಾಜಿಕ ಜಾಲತಾಣಕ್ಕೆ ಹಂಚಿಕೊಂಡಿದ್ದಾರೆ.