ನವದೆಹಲಿ: ಅಮೆರಿಕ ನಿರ್ಮಿತ MQ-9 ರೀಪರ್ ಡ್ರೋನ್ ಅನ್ನು ಮಂಗಳವಾರ ಬ್ಲ್ಯಾಕ್ ಸೀ ಮೇಲೆ ಹೊಡೆದುರುಳಿಸಲಾಗಿದೆ ಎಂದು ಅಮೆರಿಕದ ಯುರೋಪಿಯನ್ ಕಮಾಂಡರ್ ಹೇಳಿರುವ ಬಗ್ಗೆ AFP ವರದಿ ಮಾಡಿದೆ. ಈ ಘಟನೆಯನ್ನು "ಅಸುರಕ್ಷಿತ" ಎಂದು ಅಮೆರಿಕ ಮಿಲಿಟರಿ ಖಂಡಿಸಿದೆ.
USAF ಜನರಲ್ ಜೇಮ್ಸ್ ಹೆಕರ್ ಅವರು "ನಮ್ಮ MQ-9 ವಿಮಾನವು ಅಂತರಾಷ್ಟ್ರೀಯ ವಾಯುಪ್ರದೇಶದಲ್ಲಿ ಮಾಮೂಲಿಯಂತೆ ಪಹರೆ ಕಾರ್ಯಾಚರಣೆಗಳನ್ನು ನಡೆಸುತ್ತಿದ್ದಾಗ ಅದನ್ನು ರಷ್ಯಾದ ವಿಮಾನವು ಹೊಡೆದಿದ್ದು, MQ-9 ಡ್ರೋನ್ನ ಅಪಘಾತಕ್ಕೆ ಕಾರಣವಾಯಿತು' ಎಂದು ಹೇಳಿದರು. (ಏಜೆನ್ಸೀಸ್)