ನ್ಯೂಸ್

ರಾತ್ರೋರಾತ್ರಿ ಪಶ್ವಿಮ ಯುಕ್ರೇನ್​ ಮೇಲೆ 500 ಡ್ರೋನ್​ ಉಡಾಯಿಸಿದ ರಷ್ಯಾ| Russia Attack

Russia Attack: ಯುಕ್ರೇನ್ ಮೇಲೆ ರಷ್ಯಾವು 500 ಕ್ಕೂ ಹೆಚ್ಚು ಡ್ರೋನ್‌ಗಳು ಮತ್ತು ಕ್ಷಿಪಣಿಗಳನ್ನು ಉಡಾಯಿಸಿದೆ. ಯುಕ್ರೇನ್​ನ ಪಶ್ಚಿಮವನ್ನು ಗುರಿಯಾಗಿಸಿಕೊಂಡು ದೊಡ್ಡ ಪ್ರಮಾಣದ ದಾಳಿ ನಡೆಸಿದೆ ಕೈವ್​ಎಂದು ಬುಧವಾರ (ಸೆಪ್ಟೆಂಬರ್,3) ತಿಳಿಸಿದೆ.‘

ರಷ್ಯಾ ದಾಳಿಗೆ 502 ಮಾನವ ರಹಿತ ವೈಮಾನಿಕ ವಾಹನಗಳು ಮತ್ತು 24 ಕ್ಷಿಪಣಿಗಳನ್ನು ನಿಯೋಜಿಸಿದೆ ಎಂದು ಯುಕ್ರೇನಿಯನ್ ಮಿಲಿಟರಿ ಅಧಿಕಾರಿಗಳು ವರದಿ ಮಾಡಿದ್ದಾರೆ. ಈ ದಾಳಿಯಲ್ಲಿ ಪಶ್ಚಿಮ ಪ್ರದೇಶಗಳ ಅಧಿಕಾರಿಗಳು ಹಲವಾರು ನಾಗರಿಕರು ಗಾಯಗೊಂಡಿದ್ದಾರೆ. ಅಲ್ಲದೆ, ಭಾರಿ ಪ್ರಮಾಣದ ಆಸ್ತಿಗಳು ಮತ್ತು ಸಾರ್ವಜನಿಕ ಮೂಲಸೌಕರ್ಯಗಳಿಗೆ ಹಾನಿಯಾಗಿದೆ ಎಂದು ಅಧಿಕಾರಿಗಳು ದೃಢಪಡಿಸಿದರು.

ಮೂರು ಕ್ಷಿಪಣಿಗಳು ಮತ್ತು 69 ಸ್ಟ್ರೈಕ್ ಡ್ರೋನ್‌ಗಳು 14 ಸ್ಥಳಗಳಲ್ಲಿ ದಾಳಿ ಮಾಡಿವೆ. ದಾಳಿಯಲ್ಲಿ 14 ಸ್ಥಳಗಳ ಮೇಲೆ ಬಿದ್ದಿವೆ ಎಂದು ವಾಯುಪಡೆ ತಿಳಿಸಿದೆ.

ರಷ್ಯಾವು ರಾತ್ರೋರಾತ್ರಿ ನಡೆಸಿದ ವಾಯುದಾಳಿಯಲ್ಲಿ ಕನಿಷ್ಠ 4 ರೈಲ್ವೆ ಕಾರ್ಮಿಕರು ಗಾಯಗೊಂಡಿದ್ದಾರೆ. ದಾಳಿಯ ನಂತರ ಯುಕ್ರೇನ್‌ನ ಮಧ್ಯ ಪ್ರದೇಶವಾದ ಕಿರೊವೊಹ್ರಾಡ್‌ನಲ್ಲಿರುವ ನಾಲ್ವರು ಕಾರ್ಮಿಕರು ಆಸ್ಪತ್ರೆಯಲ್ಲಿದ್ದಾರೆ ಎಂದು ಯುಕ್ರೇನ್‌ನ ಸರ್ಕಾರಿ ಸ್ವಾಮ್ಯದ ರೈಲ್ವೆ ಟೆಲಿಗ್ರಾಮ್ ತಿಳಿಸಿದೆ.ಅಲ್ಲದೆ, ರೈಲು ಸೌಲಭ್ಯಗಳಿಗೆ ಹಾನಿಯಾಗಿದ್ದು, ಹಲವಾರು ಸೇವೆಗಳು ವಿಳಂಬವಾಗುವ ಬಗ್ಗೆ ಎಚ್ಚರಿಕೆ ನೀಡಿದೆ.

ಈ ಬಗ್ಗೆ ಎಕ್ಸ್​ನಲ್ಲಿ ಪೋಸ್ಟ್ ಮಾಡಿರುವ ಯುಕ್ರೇನ್​ ಕಾರ್ಯಾಚರಣಾ ಕಮಾಂಡ್, ರಷ್ಯಾವು ಮತ್ತೊಮ್ಮೆ ಯುಕ್ರೇನ್ ಮೇಲೆ ದಾಳಿ ನಡೆಸುತ್ತಿದೆ. ಅಲ್ಲದೆ, ಈ ದಾಳಿಗೂ ಮುನ್ನ ಯುಕ್ರೇನ್‌ನಾದ್ಯಂತ ಗಂಟೆಗಳ ಕಾಲ ವಾಯುದಾಳಿ ಎಚ್ಚರಿಕೆಗಳನ್ನು ನೀಡಲಾಗಿತ್ತು.

ಕೈವ್​ನ ಪಶ್ಚಿಮದಲ್ಲಿರುವ ಎಲ್ವಿವ್ ಮತ್ತು ವೊಲಿನ್‌ವರೆಗೆ ವ್ಯಾಪಿಸಿರುವ ಅದರ 24 ಪ್ರದೇಶಗಳಲ್ಲಿ ಒಂಬತ್ತು ಪ್ರದೇಶಗಳಲ್ಲಿ ಸ್ಫೋಟಗಳ ಶಬ್ದ ಕೇಳಿಬಂದಿದೆ ಎಂದು ಯುಕ್ರೇನಿಯನ್ ಅಧಿಕಾರಿಗಳು ತಿಳಿಸಿದ್ದಾರೆ. ಉಕ್ರೇನ್‌ನ ಪಶ್ಚಿಮ ನೆರೆಯ ಮತ್ತು ನ್ಯಾಟೋ ಸದಸ್ಯ ಪೋಲೆಂಡ್ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ತನ್ನದೇ ಆದ ವಿಮಾನಗಳನ್ನು ಸಕ್ರಿಯಗೊಳಿಸಿದೆ ಎಂದು ಅದರ ಸಶಸ್ತ್ರ ಪಡೆಗಳ ಕಮಾಂಡ್ ಹೇಳಿದೆ. (ಏಜೆನ್ಸೀಸ್)