ನ್ಯೂಸ್

ರಷ್ಯಾ ವಿಕ್ಟರಿ ಡೇ: ಯಾಕೆ ಈ ದಿನಾಚರಣೆ?

ರಷ್ಯಾದಲ್ಲಿ ಅತ್ಯಂತ ಪ್ರಾಮುಖ್ಯತೆ ಪಡೆದಿರುವ ರಾಷ್ಟ್ರೀಯ ರಜಾದಿನಗಳ ಪೈಕಿ ವಿಕ್ಟರಿ ಡೇ ಒಂದು. ಪ್ರತಿವರ್ಷ ಮೇ 9ರಂದು ವಿಕ್ಟರಿ ಡೇ ಆಚರಿಸಲಾಗುತ್ತಿದೆ. ಎರಡನೇ ವಿಶ್ವ ಮಹಾಯುದ್ಧದಲ್ಲಿ ನಾಜಿ ಜರ್ಮನಿಯ ವಿರುದ್ಧ ಸೋವಿಯತ್​ ಯೂನಿಯನ್​ಗೆ ಸಿಕ್ಕ ಗೆಲುವನ್ನು ಸಂಭ್ರಮಿಸುವ ಸಲುವಾಗಿ ಈ ಆಚರಣೆ. ಈ ವರ್ಷ ಯೂಕ್ರೇನ್​ ಮೇಲೆ ರಷ್ಯಾ ಸಮರ ನಡೆಸುತ್ತಿರುವ ಕಾರಣ ಈ ಆಚರಣೆಗೆ ಪ್ರಾಮುಖ್ಯತೆ ಹೆಚ್ಚಿದೆ.

ಅಧಿಕೃತ ಯುದ್ಧ ಸಾರಲಿದೆಯೇ?

ಯೂಕ್ರೇನ್​ ವಿರುದ್ಧ ಸಮರದಲ್ಲಿ ತಾರ್ಕಿಕ ಗೆಲುವು ದಾಖಲಿಸಿ, ಈ ವರ್ಷದ ವಿಕ್ಟರಿ ಡೇ ಆಚರಣೆಗೆ ಹೊಸ ವ್ಯಾಖ್ಯೆ ಬರೆಯಬೇಕು ಎಂಬ ನಿರೀೆಯಲ್ಲಿದೆ ರಷ್ಯಾ. ೆ.24ರಂದು ಯೂಕ್ರೇನ್​ ಮೇಲೆ ರಷ್ಯಾ ದಾಳಿ ಆರಂಭಿಸಿದೆ. ಆದರೆ, ಇನ್ನೂ ಅಧಿಕೃತವಾಗಿ "ಯುದ್ಧ' ಸಾರಿಲ್ಲ, ವಿಶೇಷ ಸೇನಾ ಕಾರ್ಯಾಚರಣೆ ಎಂದು ಘೋಷಿಸಿತ್ತಷ್ಟೆ.

ಯಾಕೆ ಈ ದಿನಾಚರಣೆ?

ಎರಡನೇ ವಿಶ್ವ ಮಹಾಯುದ್ಧದಲ್ಲಿ ಜರ್ಮನಿಯ ನಾಜಿಗಳನ್ನು ಸೋಲಿಸಿದ್ದನ್ನು ಸ್ಮರಿಸುವ ಸಲುವಾಗಿ ರಷ್ಯಾದಲ್ಲಿ ಪ್ರತಿ ವರ್ಷ ಮೇ 9ರಂದು ವಿಕ್ಟರಿ ಡೇ ಆಚರಿಸಲಾಗುತ್ತದೆ. ಯುರೋಪ್​ನ ಮಿತ್ರ ರಾಷ್ಟ್ರಗಳು ವಿಕ್ಟರಿ ಡೇ ಅಥವಾ ವಿಕ್ಟರಿ ಇನ್​ ಯುರೋಪ್​ ಡೇ ಅನ್ನು ಮೇ 7ರಂದು ಆಚರಿಸುತ್ತವೆ. ಇದೇ ದಿನ ್ರಾನ್ಸ್​ನಲ್ಲಿ ಜರ್ಮನಿಯ ನಾಜಿಗಳು ಶರಣಾಗಿದ್ದರು. ಸೋವಿಯತ್​ ಯೂನಿಯನ್​ ನಾಯಕ ಜೋಸ್​ೆ ಸ್ಟಾಲಿನ್​, ಜರ್ಮನಿಯ ಬರ್ಲಿನ್​ನಲ್ಲಿ ಮಾರನೇ ದಿನ ವಿಜಯೋತ್ಸವ ಆಚರಿಸಿದ್ದರು. ಕೊನೆಗೆ ರಷ್ಯಾದ ಮೊದಲ ಅಧ್ಯಕ್ಷ ಬೋರಿಸ್​ ಯೆಲ್ಸಿನ್​ ವಿಕ್ಟರಿ ಡೇ ಯನ್ನು ವಾರ್ಷಿಕ ಆಚರಣೆ ಎಂದು ಘೋಷಿಸಿದರು. ಲಿಯೋನಿಡ್​ ಬ್ರೆಝ್ನೆವ್​ ಮೇ 9 ಅನ್ನು ರಾಷ್ಟ್ರೀಯ ರಜಾ ದಿನ ಎಂದು ಘೋಷಿಸಿದರು. ವ್ಲಾದಿಮಿರ್​ ಪುತಿನ್​ ವಿಕ್ಟರಿ ಡೇ ಅನ್ನು ಪವಿತ್ರ ಆಚರಣೆಯನ್ನಾಗಿ ಪರಿವರ್ತಿಸಿದರು.