ನ್ಯೂಸ್

ಪವಿತ್ರ ಸ್ಥಳದಲ್ಲಿ ಅಶ್ಲೀಲ ವಿಡಿಯೋ ಶೂಟ್ ಮಾಡಿದ ಜೋಡಿ! ಬೆನ್ನ ಹಿಂದೆ ಬಿದ್ದ ಪೊಲೀಸರು

ಜಕಾರ್ತಾ: ರಷ್ಯಾ ಮೂಲದ ನೀಲಿ ತಾರೆಯೊಬ್ಬರು​ ಸ್ಟಾರ್​ ಒಬ್ಬರು ತಮ್ಮ ಪಾರ್ಟ್ನರ್​ ಜತೆ ಇಂಡೋನೇಷಿಯಾದ ಪವಿತ್ರ ಸ್ಥಳವೊಂದರಲ್ಲಿ ಅಶ್ಲೀಲ ವಿಡಿಯೋ ಶೂಟ್​ ಮಾಡಿದ್ದಾರೆ. ಈ ವಿಡಿಯೋವನ್ನು ಹರಿಬಿಡುತ್ತಿದ್ದಂತೆಯೇ ಅಲ್ಲಿನ ಪೊಲೀಸರು ಎಚ್ಚೆತ್ತುಕೊಂಡಿದ್ದು, ಇದೀಗ ಆ ಜೋಡಿಯ ಹಿಂದೆ ಬಿದ್ದಿದ್ದಾರೆ.


ರಷ್ಯಾದ ವೆರೋನಿಕಾ ಟ್ರೋಶಿನಾ ಮತ್ತು ಅವಳ ಬಾಯ್​ಫ್ರೆಂಡ್ ಮಿಖಾಯಿಲ್ ಮೊರೊಜೊವ್ ಈ ಕೆಲಸ ಮಾಡಿದವರು. ಅವರು ಕೆಲ ತಿಂಗಳ ಹಿಂದೆ ಇಂಡೋನೇಷಿಯಾದ ಬಾಲಿಯಲ್ಲಿರುವ ಮೌಂಟ್ ಬತೂರ್​ ಎಂಬಲ್ಲಿ ವಿಡಿಯೋ ಶೂಟ್​ ಮಾಡಿದ್ದಾರೆ. ಅವರು ಶೂಟ್​ ಮಾಡಿದ್ದ ಆ ಸ್ಥಳವನ್ನು ಹೋಲಿ ಹಿಲ್​ ಎಂದೂ ಕರೆಯಲಾಗುತ್ತದೆ. ಅಲ್ಲಿನ ಸ್ಥಳೀಯರು ಆ ಸ್ಥಳವನ್ನು ಒಂದು ಧಾರ್ಮಿಕ ಸ್ಥಳವಾಗಿ ಪೂಜಿಸುತ್ತಾರೆ. ಆದರೆ ಅಂಥ ಸ್ಥಳದಲ್ಲಿ ಈ ಜೋಡಿ ಅಶ್ಲೀಲ ವಿಡಿಯೋ ಚಿತ್ರೀಕರಣ ಮಾಡಿದೆ.


ಇತ್ತಿಚೆಗೆ ಈ ವಿಡಿಯೋವನ್ನು ವೆರೋನಿಕಾ ಟ್ರೋಶಿನಾ ಪೋರ್ನ್​ ವೆಬ್​ಸೈಟ್​ ಒಂದರಲ್ಲಿ ಹರಿಬಿಟ್ಟಿದ್ದಾರೆ. ಅದಾದ ನಂತರ ಅಲ್ಲಿನ ಜನರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಜನರೆಲ್ಲ ವೆರೋನಿಕಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾರಂಭಿಸಿದ್ದಾರೆ. ಆ ಹಿನ್ನೆಲೆಯಲ್ಲಿ ಇಂಡೋನೇಷಿಯಾ ಪೊಲೀಸರು ಈ ಜೋಡಿಯ ಹುಡುಕಾಟ ಮಾಡಲಾರಂಭಿಸಿದೆ. ಈ ಜೋಡಿ ಇನ್ನೂ ಬಾಲಿಯಲ್ಲೇ ಇದೆಯೇ ಅಥವಾ ರಷ್ಯಾಕ್ಕೆ ವಾಪಾಸಾಗಿದೆಯೇ ಎನ್ನುವ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ ಎನ್ನಲಾಗಿದೆ. (ಏಜೆನ್ಸೀಸ್)