ನ್ಯೂಸ್

ಹೀಗಿದೆ ನೋಡಿ ಭಾರತ-ರಷ್ಯಾ ಸ್ನೇಹ

ಯೂಕ್ರೇನ್‌: ಭಾರತ ಮತ್ತು ರಷ್ಯಾ ನಡುವಿನ ಸ್ನೇಹ ಗಾಢವಾಗಿದೆ. ಸೇನಾ ಸಹಕಾರವನ್ನು 2031ರ ತನಕ ವಿಸ್ತರಿಸಲು ಉಭಯ ದೇಶಗಳು 2021ರಲ್ಲಿ ಒಪ್ಪಿಕೊಂಡಿವೆ. ಭಾರತೀಯ ಸೇನೆಗೆ ಎಕೆ-203 ರೈಲ್​ಗಳನ್ನು ರಷ್ಯಾದಿಂದ ಖರೀದಿಸಲಾಗುತ್ತಿದೆ. ಉತ್ತರ ಪ್ರದೇಶದ ಅಮೇಠಿಯಲ್ಲಿ 6 ಲಕ್ಷಕ್ಕೂ ಹೆಚ್ಚು ಎಕೆ-203 ಅಸಾಲ್ಟ್​ ರೈಲ್​ ಉತ್ಪಾದಿಸುವುದಕ್ಕೆ ಸಂಬಂಧಿಸಿ 5,000 ಕೋಟಿ ರೂಪಾಯಿ ಮೊತ್ತದ ಒಪ್ಪಂದವೂ ಕಳೆದ ವರ್ಷವೇ ಆಗಿದೆ. ಮುಂದಿನ ಹತ್ತು ವರ್ಷಗಳ ಅವಧಿಗೆ ರಕ್ಷಣಾ ಪಾಲುದಾರಿಕೆ ಮುಂದುವರಿಯಲಿದೆ.

ರಷ್ಯಾದಿಂದ 40,000 ಕೋಟಿ ರೂಪಾಯಿ ಮೊತ್ತದ 5 ಟ್ರಯಂ​ ಎಸ್​-400 ಯುದ್ಧವಿಮಾನ ಹಾಗೂ ಪಣಿ ದಾಳಿ ನಿರೋಧಕ ವ್ಯವಸ್ಥೆ ಖರೀದಿಯ ಒಪ್ಪಂದಕ್ಕೆ 2018ರ ಅಕ್ಟೋಬರ್​ನಲ್ಲಿ ಉಭಯ ರಾಷ್ಟ್ರಗಳು ಸಹಿ ಹಾಕಿವೆ. ಇದರಂತೆ ರಷ್ಯಾವು ಐದು ವರ್ಷದೊಳಗೆ ಎಲ್ಲ 5 ವ್ಯವಸ್ಥೆಯನ್ನು ಭಾರತಕ್ಕೆ ಹಸ್ತಾಂತರಿಸಬೇಕಿದೆ. ಅಂದರೆ, ಭಾರತದ ರಕ್ಷಣಾ ಅಗತ್ಯಗಳ ದೊಡ್ಡ ಪಾಲನ್ನು ರಷ್ಯಾ ಪೂರೈಸುತ್ತಿದೆ. ಭಾರತ-ರಷ್ಯಾ ಸ್ನೇಹದ ಬಗ್ಗೆ, ಮಿಲಿಟರಿ ಸಹಕಾರದ ಬಗ್ಗೆ ಅಮೆರಿಕ ಕೆಂಗಣ್ಣು ಬೀರಿದ್ದರೂ, ಭಾರತ ಆ ಬಗ್ಗೆ ತಲೆಕೆಡಿಸಿಕೊಂಡಿಲ್ಲ.

ವ್ಯಾಪಾರ

* ಕಳೆದ ವರ್ಷ ಭಾರತ-ರಷ್ಯಾ ವ್ಯಾಪಾರ 8 ಬಿಲಿಯನ್​ ಡಾಲರ್​ಗಳಷ್ಟಿತ್ತು.

ಭಾರತ-ಯೂಕ್ರೇನ್​ ಸಂಬಂಧ

ಕಳೆದ ವರ್ಷ ಭಾರತ-ಯೂಕ್ರೇನ್​ ನಡುವಿನ ವಹಿವಾಟು 2.7 ಬಿಲಿಯನ್​ ಡಾಲರ್​ಗಳಷ್ಟಿತ್ತು. ಕಳೆದವರ್ಷ ಯೂಕ್ರೇನ್​ನಿಂದ ಭಾರತ 1.7 ಮಿಲಿಯನ್​ ಟನ್​ ಸೂರ್ಯಕಾಂತಿ ಎಣ್ಣೆಯನ್ನು ಆಮದು ಮಾಡಿಕೊಂಡಿದೆ. ಯೂಕ್ರೇನ್​ನಿಂದ ಟೈಲ್ಸ್​ಗಳು ಗುಜರಾತ್​ ಮತ್ತು ರಾಜಸ್ಥಾನಕ್ಕೆ ರ್ತಾಗುತ್ತಿವೆ.

ರಷ್ಯಾ ಮೇಲೆ ಯಾವೆಲ್ಲ ನಿರ್ಬಂಧ?

* ತಂತ್ರಜ್ಞಾನ ಹಂಚಿಕೆ

* ಯುರೋಪ್​ ಮತ್ತು ಅಮೆರಿಕದ ಬ್ಯಾಂಕುಗಳು ರಷ್ಯಾದೊಂದಿಗಿನ ಒಪ್ಪಂದಗಳನ್ನು ಮುರಿದುಕೊಂಡಿವೆ.

* ಯುರೋಪ್​ ಬ್ಯಾಂಕುಗಳಲ್ಲಿನ ರಷ್ಯಾ ಸ್ವತ್ತು ಮುಟ್ಟುಗೋಲು

* ಪ್ರಮುಖ ಅಂತಾರಾಷ್ಟ್ರೀಯ ಮಾರುಕಟ್ಟೆಗಳಿಗೆ ರಷ್ಯಾ ಉತ್ಪನ್ನ ನಿಷೇಧ

* ಜಾಗತಿಕ ಇಂಟರ್​ಬ್ಯಾಂಕ್​ ಪಾವತಿ ವ್ಯವಸ್ಥೆ (ಸ್ವ್ಟಿ್​)ಯಿಂದ ರಷ್ಯಾ ಹೊರಕ್ಕೆ

* ಅಮೆರಿಕ ಮತ್ತು ಯುರೋಪ್​ಗೆ ರಷ್ಯಾದ ರಾಜಕೀಯ ಮುಖಂಡರು ಭೇಟಿ ನೀಡುವಂತಿಲ್ಲ.

ಹೀಗಿದೆ ಯೂಕ್ರೇನ್​

ವ್ಯಾಪಾರದಲ್ಲಿ ಯೂಕ್ರೇನ್​ ಗರಿಷ್ಠ ವ್ಯಾಪಾರ ಸಂಬಂಧ ಹೊಂದಿರುವುದೇ ರಷ್ಯಾದೊಂದಿಗೆ. ಶೇಕಡ 25.7 ರ್ತು ಮತ್ತು ಶೇ.32.4 ಆಮದನ್ನು ಹೊಂದಿದೆ. ಇದಲ್ಲದೆ, ಯುರೋಪಿಯನ್​ ಒಕ್ಕೂಟದ ರಾಷ್ಟ್ರಗಳೊಂದಿಗೆ ಅದು ವ್ಯಾಪಾರ ಸಂಬಂಧ ಹೊಂದಿದೆ. ಆಹಾರ ಮತ್ತು ಕೃಷಿ ಉತ್ಪನ್ನಗಳು, ಟೈಲ್ಸ್​ಗಳನ್ನು ಯೂಕ್ರೇನ್​ ರ್ತು ಮಾಡುತ್ತದೆ.

ಕೈಗಾರಿಕೆಗಳು

ಉದ್ಯಮ ವಲಯದ 20ಕ್ಕೂ ಹೆಚ್ಚು ಪ್ರಮುಖ ಕಂಪನಿಗಳು ಯೂಕ್ರೇನ್​ನಲ್ಲಿವೆ. ಇಂಧನ, ವಿದ್ಯುತ್​ ತಯಾರಿಕೆ, ನೈಸಗಿರ್ಕ ಅನಿಲ, ಯಂತ್ರ ತಯಾರಿಕೆ, ಕಟ್ಟಡ ಸಾಮಗ್ರಿ ಹಾಗೂ ಹಡಗು ತಯಾರಿಕೆಯ ಕೈಗಾರಿಕೆಗಳು ಕಾರ್ಯನಿರತವಾಗಿವೆ.