ನ್ಯೂಸ್

ಗ್ರಾಮೀಣ ಪ್ರತಿಭೆಗಳು ರಾಜ್ಯಮಟ್ಟಕ್ಕೆ ಆಯ್ಕೆ

Davangere - Prakash Arali

ಭರಮಸಾಗರ: ಸಮೀಪದ ಚೌಲೀಹಳ್ಳಿ ಗೊಲ್ಲರಹಟ್ಟಿ ಸರ್ಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳು ಇತ್ತೀಚೆಗೆ ಚಿತ್ರದುರ್ಗದಲ್ಲಿ ನಡೆದ ವಿಜ್ಞಾನ ನಾಟಕ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ನಾಟಕದಲ್ಲಿ ಪ್ರಮುಖ ಪಾತ್ರಧಾರಿಗಳಾಗಿ ಜಿ.ತನುಜಾ, ಜಿ.ವಿ.ರಶ್ಮಿ, ಎಸ್.ಸಂಜನಾ, ಎಂ.ಚೈತ್ರಾ, ಕೆ.ವಸುಂದರಾ, ಪಿ.ಹರೀಶ್, ಓ.ಷಣ್ಮುಖ, ಎಲ್.ಮಂಜು ಉತ್ತಮವಾಗಿ ಅಭಿನಯಿಸಿದ್ದರು.
ಜತೆಗೆ ಭೂಮಿಯ ಉಗಮದಿಂದ ತಂತ್ರಜ್ಞಾನ ಬೆಳೆದು ಬಂದ ದಾರಿ ಅದರ ಬಳಕೆಯಿಂದ ಆಗುವ ಅನುಕೂಲ, ಅನಾನುಕೂಲಗಳು, ಚಂದ್ರಯಾನ 3ರ ಉಡಾವಣೆ, ಮುಂಬರುವ ದಿನಗಳಲ್ಲಿ ತಂತ್ರಜ್ಞಾನ ಬೆಳವಣಿಗೆ ಬಗ್ಗೆ ಸಾಮಾನ್ಯರಿಗೂ ಅರ್ಥವಾಗುವ ರೀತಿ ಅಭಿನಯಿಸಿದ್ದರು.
ಉತ್ತಮ ನಟಿ ಎಂಬ ಖ್ಯಾತಿಗೆ ವಿದ್ಯಾರ್ಥಿನಿ ರಶ್ಮಿ ಪಾತ್ರರಾದರು. ವಿಜ್ಞಾನ ಶಿಕ್ಷಕ ಸಿ.ಜಿ.ಹಾಲೇಶ್ ನಾಟಕದ ರಚನೆ ಹಾಗೂ ನಿರ್ದೇಶನ ಮಾಡಿ ಉತ್ತಮ ನಿರ್ದೇಶಕ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.
ನೃತ್ಯ ನಿರ್ದೇಶನವನ್ನು ಸಿ.ಯಮುನಾ, ತಾಂತ್ರಿಕ ನೆರವು ಟಿ.ಎಂ.ಮಲ್ಲಿಕಾರ್ಜುನ, ವಸ್ತ್ರಾಲಂಕಾರ ಜಿ.ವಿ.ಐಶ್ವರ್ಯ, ಎಂ.ಆರ್.ಸಹನಾ ಮಾಡಿದ್ದರು.