ನ್ಯೂಸ್

ರೂಪಾಯಿ ತುಸು ಏರಿಕೆ: 58 ಪೈಸೆ ಹೆಚ್ಚಳ

ಮುಂಬೈ: ಪ್ರಾದೇಶಿಕ ಷೇರುಪೇಟೆಯ ಧನಾತ್ಮಕ ವಹಿವಾಟು ಮತ್ತು ರಿಸ್ಕ್ ಅಪೆಟೈಟ್​ನಲ್ಲಿ ಸುಧಾರಣೆ ಕಂಡಿರುವ ಭಾರತದ ರೂಪಾಯಿ ಮೌಲ್ಯ ವೃದ್ಧಿ ಯಾಗಿದೆ. ಕರೆನ್ಸಿ ಮಾರುಕಟ್ಟೆಯಲ್ಲಿ ಶುಕ್ರವಾರದ ವಹಿವಾಟಿನಲ್ಲಿ ಅಮೆರಿಕದ ಡಾಲರ್ ವಿರುದ್ಧ ಭಾರತದ ರೂಪಾಯಿ ಮೌಲ್ಯ 58 ಪೈಸೆ ಹೆಚ್ಚಳವಾಗಿ -ರೂ;74.35 ಆಗಿದೆ. ಇಂಟರ್ ಬ್ಯಾಂಕ್ ಫಾರೆಕ್ಸ್ ಮಾರುಕಟ್ಟೆಯ ವಹಿವಾಟು ಆರಂಭವಾಗುತ್ತಿದ್ದಂತೆ ಅಮೆರಿಕದ ಡಾಲರ್ ಎದುರು -ರೂ;74.76ರಲ್ಲಿ ವಹಿವಾಟು ಶುರುವಾಗಿತ್ತು. ಇಂಟ್ರಾ ಡೇ ವಹಿವಾಟಿ ನಲ್ಲಿ -ರೂ;74.28ರ ಗರಿಷ್ಠ ಮಟ್ಟಕ್ಕೆ ಏರಿದ್ದ

ರೂಪಾಯಿ ಬಳಿಕ ದಿನದ ಕನಿಷ್ಠ ಮಟ್ಟ -ರೂ;74.76ಕ್ಕೂ ಇಳಿದಿತ್ತು. ಕೊನೆಗೆ ಹಿಂದಿನ ದಿನ ಮುಕ್ತಾಯಕ್ಕಿಂತ 58 ಪೈಸೆ ಹೆಚ್ಚಳ ದಾಖಲಿಸಿ -ರೂ;74.35ರಲ್ಲಿ ದಿನದ ವಹಿವಾಟು ಮುಗಿಸಿದೆ. ಗುರುವಾರದ ವಹಿವಾಟಿನಲ್ಲಿ ಇದು -ರೂ;74,93 ಆಗಿತ್ತು.

ಷೇರುಪೇಟೆ ವಹಿವಾಟು: ಬಿಎಸ್​ಇ ಸೆನ್ಸೆಕ್ಸ್ ಶುಕ್ರವಾರ 28.35 (0.06%) ಅಂಶ ಏರಿ 48,832.03ರಲ್ಲೂ, ಎನ್​ಎಸ್​ಇ ನಿಫ್ಟಿ 36.40 (0.25%) ಅಂಶ ಏರಿ 14,617.85ರಲ್ಲೂ ದಿನದ ವಹಿವಾಟು ಮುಗಿಸಿವೆ.

ಚಿನ್ನ, ಬೆಳ್ಳಿ ದರ: ದೆಹಲಿಯಲ್ಲಿ ಚಿನ್ನದ ದರ 10 ಗ್ರಾಮಿಗೆ -ರೂ; 9 ಏರಿಕೆಯಾಗಿದ್ದು -ರೂ;46,431 ಮತ್ತು ಬೆಳ್ಳಿದರ 1 ಕಿಲೋಗೆ -ರೂ;53 ಏರಿದ್ದು -ರೂ;67,460 ಆಗಿದೆ.