ನ್ಯೂಸ್

ಅತ್ತಾಗ ಮೂಗು ಸೋರುವುದು ಏಕೆ ಗೊತ್ತಾ? ಇಲ್ಲಿದೆ ನೋಡಿ ನಿಮಗೆ ಗೊತ್ತಿರದ ಸಂಗತಿ | Runny Nose

ಮೋಹನ್​ ಶೆಟ್ಟಿ

ಬೆಂಗಳೂರು: ಸಾಮಾನ್ಯವಾಗಿ ನಾವೆಲ್ಲಾ ಹಲವು ಸಂದರ್ಭಗಳಿಗೆ ಕಣ್ಣೀರಿಡುತ್ತೇವೆ. ಯಾರಾದರೂ ಸಾವನ್ನಪ್ಪಿದಾಗ, ಆತ್ಯಾಪ್ತರಿಗೆ ನೋವಾದಾಗ, ಮನಸ್ಸಿಗೆ ಯಾವುದಾದರೂ ಘಾಸಿ ಮಾಡಿದಾಗ ಹೀಗೆ ಹಲವಾರು ವಿಷಯಗಳಿಗೆ ಕಂಬನಿ ಮಿಡಿಯುತ್ತೇವೆ. ಯಾವ ಸಮಯದಲ್ಲಿ ದುಃಖ ಉಮ್ಮಳಿಸಿ, ನಮ್ಮ ಕಣ್ಣಿನಲ್ಲಿ ನೀರು ಬರುತ್ತದಯೇ, ಅದರ ಬೆನ್ನಲ್ಲೇ ಮೂಗು ಸೋರುವಿಕೆ ಶುರುವಾಗುತ್ತದೆ. ಅಸಲಿಗೆ ಶೀತವೇನು ಆಗಿರುವುದಿಲ್ಲ! ಆದ್ರೂ ಸಹ ಮೂಗಿನ ಹೊಳ್ಳೆಯಿಂದ (Runny Nose) ನೀರು ಬರುವುದು ಹೇಗೆ ಎಂಬ ಪ್ರಶ್ನೆ ಅನೇಕರಲ್ಲಿ ಕಾಡುವುದಂತು ನಿಜವೇ ಸರಿ.

ಕಣ್ಣೀರು ಬಂದಾಗ ಕಣ್ಣನ್ನು ಒರೆಸಿಕೊಳ್ಳುವ ಜನರು, ಅಳುತ್ತ ಅಳುತ್ತ ಮೂಗನ್ನು ಸಹ ಒರೆಸಲು ಪ್ರಾರಂಭಿಸುತ್ತಾರೆ. ಅಸಲಿಗೆ ಶೀತ, ನೆಗಡಿ ಸಮಸ್ಯೆಗಳು ಉಲ್ಬಣಗೊಂಡರೆ ಮೂಗು ಸೋರುತ್ತದೆ. ಅಥವಾ ಶೀತ ವೇಗವಾಗಿ ಆವರಿಸಿಕೊಳ್ಳುವಂತ ಪದಾರ್ಥಗಳನ್ನು ಸೇವಿಸಿದರೆ ಮೂಗಿನಿಂದ ನೀರು ಇಳಿಯುವುದು ಸಾಮಾನ್ಯ. ಆದರೆ, ನಾವು ಅತ್ತಾಗಲೆಲ್ಲಾ ಮೂಗು ಸೋರುವುದಕ್ಕೆ ಕಾರಣ ‘ಲ್ಯಾಕ್ರಿಮಲ್ ಪಂಕ್ಟಮ್’ (lacrimal punctum). ಹೌದು, ನೀವು ನಿಮ್ಮ ಕಣ್ಣನ್ನು ಸೂಕ್ಷ್ಮವಾಗಿ ಗಮನಿಸಿದರೆ ಇದೇನು ಎಂಬುದು ತಿಳಿಯುತ್ತದೆ.

ನಿಮ್ಮ ಕಣ್ಣಿನ ರೆಪ್ಪೆಯ ಕೆಳಭಾಗದಲ್ಲಿ ಒಂದು ಚಿಕ್ಕ ರಂಧ್ರವಿರುತ್ತದೆ. ಬಹುಶಃ ಇದನ್ನು ಅನೇಕರು ಗಮನಿಸಿರುವುದಿಲ್ಲ. ಗಮನಿಸಿದ್ದರೂ ಏನಿದು ಎಂದು ತಿಳಿದುಕೊಳ್ಳುವ ಪ್ರಯತ್ನವನ್ನು ಮಾಡಿರುವುದಿಲ್ಲ. ಕಣ್ಣಿನ ಕೆಳಗಿರುವ ರಂಧ್ರವು, ನಿಮ್ಮ ಕಣ್ಣಿನಿಂದ ಹೊರಹೊಮ್ಮುವ ನೀರನ್ನು ಬರಿದಾಗಿಸಿ, ಅದನ್ನು ಮೂಗಿನ ನಾಳಕ್ಕೆ ಹರಿಸುತ್ತದೆ. ಇದರಿಂದಲೇ ಕಣ್ಣಲ್ಲಿ ನೀರು ಬಂದ ಕ್ಷಣವೇ, ಮೂಗಿನಿಂದಲೂ ನೀರು ಸೋರಿಕೆಯಾಗಲು ಶುರುವಾಗುತ್ತದೆ.