ಬಾಲಿವುಡ್ ತಾರೆಯರಾದ ಆದಿತ್ಯ ರಾಯ್ ಕಪೂರ್ ಮತ್ತು ಅನನ್ಯಾ ಪಾಂಡೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿಗಳು ಕೆಲ ದಿನಗಳಿಂದಲೂ ಕೇಳಿ ಬರುತ್ತಿವೆ. ಇನ್ನು ಇವರಿಬ್ಬರೂ ಕೆಲ ಕಾರ್ಕಕ್ರಮಗಳಿಗೆ ಜತೆಯಲ್ಲೇ ಆಗಮಿಸಿ ಇಬ್ಬರೂ ಕಪಲ್ಸ್ ಎಂದು ಗುರುತಿಸಿಕೊಂಡಿದ್ದಾರೆ. ಆದರೆ ಈ ವಿಚಾರ ಅದೆಷ್ಟು ಸುಳ್ಳು ಅಥವಾ ಸತ್ಯ ಅನ್ನೋದಕ್ಕೆ ಇಬ್ಬರೂ ಈವರೆಗೂ ಸ್ಪಷ್ಟನೆ ಕೊಟ್ಟಿಲ್ಲ.
ಸದ್ಯ ಈ ಜೋಡಿ ಒಂದೇ ಬಣ್ಣ ಅಂದ್ರೆ ಬ್ಲಾಕ್ ಡ್ರೆಸ್ ಧರಿಸಿ ಒಟ್ಟಿಗೇ ಕಾಣಿಸಿಕೊಂಡಿದ್ದಾರೆ. ಸಾರ್ವಜನಿಕ ಕಾರ್ಯಕ್ರಮಗಳಿಗೆ ಬಂದಾಗಲೆಲ್ಲಾ ಯಾವಾಗಲೂ ಇವರಿಬ್ಬರೂ ಡೇಟಿಂಗ್ ಮಾಡಿತ್ತಿದ್ದಾರೆ ಅನ್ನೋ ಕಾಮೆಂಟ್ಗಳು ಹೆಚ್ಚು ವೈರಲ್ ಆಗುತ್ತಲೇ ಇರುತ್ತೆ.
ಇದೀಗ ಮತ್ತೆ ಇವರಿಬ್ಬರು ಒಟ್ಟಿಗೇ ಒಂದೇ ಬಣ್ಣದ ಡ್ರೆಸ್ನಲ್ಲಿ ಕಾಣಿಸಿಕೊಂಡಿರೋದು ಇದಕ್ಕೆ ಮತ್ತಷ್ಟು ಪುಷ್ಠಿ ನೀಡಿರೋದು ಮಾತ್ರವಲ್ಲದೆ ಸದ್ಯ ಇವರಿಬ್ಬರ ಫೋಟೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ನಿನ್ನೆಯಷ್ಟೆ ಇವರಿಬ್ಬರು ಕ್ಯಾಮರಾ ಕಣ್ಣಿಗೆ ಒಂದೇ ಬಣ್ಣದ ಡ್ರೆಸ್ನಲ್ಲಿ ಕ್ಯಾಮೆರಾ ಕಣ್ಣಿಗೆ ಕಾಣಿಸಿಕೊಂಡಿದ್ದು, ಇಬ್ಬರೂ ಡಿನ್ನರ್ ಡೇಟ್‌ಗೆ ಬಂದಿದ್ದರು ಎಂದು ಹೇಳಲಾಗುತ್ತಿದೆ.
ಇನ್ಸ್ಟಾಗ್ರಾಂನಲ್ಲಿ ವೈರಲ್ ಆದ ವಿಡಿಯೋದಲ್ಲಿ ದಿತ್ಯ ರಾಯ್ ಕಪೂರ್ ಮತ್ತು ಅನನ್ಯ ಪಾಂಡೆ ರೆಸ್ಟೋರೆಂಟ್‌ಗೆ ಪ್ರವೇಶಿಸುವ ಮೊದಲು ಪಾಪರಾಜಿಗಳಿಗೆ ಪೋಸ್ ನೀಡಿದ್ದಾರೆ.
ಇಬ್ಬರೂ ಬ್ಲಾಕ್ ಡ್ರೆಸ್ನಲ್ಲಿ ಟ್ವಿನ್ನಿಂಗ್ ಆಗಿದ್ದು, ಕಪಲ್ಸ್ ವೀಕೆಂಡನ್ನ ರೊಮ್ಯಾಂಟಿಕ್ ಡಿನ್ನರ್ ಜತೆಗೆ ಪ್ರಾರಂಭಿಸಿದ್ದಾರೆ ಎನ್ನಲಾಗುತ್ತಿದೆ. ಡಿನ್ನರ್ ಡೇಟ್‌ಗೆ ಅನನ್ಯಾ ಕಪ್ಪು ಬಣ್ಣದ ಮಿನಿ ಡ್ರೆಸ್ ಮತ್ತು ಫ್ರಿ ಹೇರ್ ಬಿಟ್ಟಿದ್ದರು.
ಮತ್ತೊಂದೆಡೆ, ಆದಿತ್ಯ ಅವರು ಕಪ್ಪು ಟೀ ಶರ್ಟ್ ಮತ್ತು ಜೀನ್ಸ್ ಧರಿಸಿದ್ದರಿಂದ ಅನನ್ಯಾ ಪಾಂಡೆಯೊಂದಿಗೆ ಟ್ವಿನ್ನಿಂಗ್ ಆಗಿದ್ದಾರೆ.
ಇಬ್ಬರೂ ಕ್ಯಾಮರಾಗಳಿಗೆ ಸ್ಮೈಲ್ ಕೊಟ್ಟು ರೆಸ್ಟೋರೆಂಟ್ ಪ್ರವೇಶಿಸಿದ್ದಾರೆ.