ನ್ಯೂಸ್

ನಿಯಮ ಉಲ್ಲಂಘಿಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ

Haveri - Kariyappa Aralikatti

ರಾಣೆಬೆನ್ನೂರ: ನಿಯಮ ಉಲ್ಲಂಘಿಸಿ ವಿದ್ಯಾಥಿರ್ಗಳಿಗೆ ಹಾಸ್ಟೆಲ್​ ಸೌಲಭ್ಯ ನಿರಾಕರಿಸಿದ ತಪ್ಪಿತಸ್ಥ ಅಧಿಕಾರಿಗಳ ಮೇಲೆ ಶಿಸ್ತು ಕ್ರಮಕ್ಕೆ ಆಗ್ರಹಿಸಿ ಎಸ್​ಎಫ್​ಐ ನೇತೃತ್ವದಲ್ಲಿ ವಿದ್ಯಾಥಿರ್ಗಳು ಮಂಗಳವಾರ ನಗರದ ಬಸ್​ ನಿಲ್ದಾಣದ ಎದುರು ಪ್ರತಿಭಟನೆ ನಡೆಸಿದರು.

ಸಂಘಟನೆಯ ಜಿಲ್ಲಾಧ್ಯಕ್ಷ ಬಸವರಾಜ ಎಸ್​. ಮಾತನಾಡಿ, ರಾಜ್ಯ ಸರ್ಕಾರದ ಆದೇಶದ ಪ್ರಕಾರ ಹಾಸ್ಟೆಲ್​ ಬಯಸಿ ಅಜಿರ್ ಹಾಕಿದ ಪ್ರತಿಯೊಬ್ಬ ವಿದ್ಯಾಥಿರ್ಗಳಿಗೂ ಸಮಾಜ ಕಲ್ಯಾಣ ಇಲಾಖೆ ವಸತಿ ನಿಲಯಗಳಲ್ಲಿ ಹಾಸ್ಟೆಲ್​ ಸೌಲಭ್ಯ ಕಲ್ಪಿಸಬೇಕು. ಆದರೆ, ತಾಲೂಕಿನಲ್ಲಿ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ$್ಯದಿಂದ ನಿಯಮ ಉಲ್ಲಂಘನೆಯಾಗಿದೆ. ನೂರಾರು ವಿದ್ಯಾಥಿರ್ಗಳು ಸೌಲಭ್ಯಗಳಿಂದ ವಂಚಿತರಾಗಿದ್ದಾರೆ.

ಕೂಡಲೇ ಶಾಸಕರು ಮಧ್ಯೆ ಪ್ರವೇಶ ಮಾಡಿ ತಪ್ಪಿತಸ್ಥ ಅಧಿಕಾರಿಗಳ ಮೇಲೆ ಕಾನೂನು ಕ್ರಮ ತೆಗೆದುಕೊಂಡು ಸ್ಥಳಿಯ, ಹೊರ ಜಿಲ್ಲೆ, ತಾಲೂಕು ಸೇರಿದಂತೆ ಎಲ್ಲ ವಿದ್ಯಾಥಿರ್ಗಳಿಗೂ ಪ್ರವೇಶಾತಿ ನೀಡಬೇಕು. ವಿದ್ಯಾಥಿರ್ಗಳ ಸಂಖ್ಯೆಗೆ ಅನುಗುಣವಾಗಿ ನಗರಕ್ಕೆ ಹೆಚ್ಚುವರಿಯಾಗಿ ಬಾಲಕರ, ಬಾಲಕಿಯರ ತಲಾ ಒಂದೊಂದು ಹಾಸ್ಟೆಲ್​ ಮಂಜೂರು ಮಾಡಿಸಬೇಕು. ಇಲ್ಲವೇ ಬಾಡಿಗೆ ಕಟ್ಟಡದಲ್ಲಿ ನಡೆಸಬೇಕು ಎಂದು ಆಗ್ರಹಿಸಿದರು. ಸ್ಥಳಕ್ಕೆ ಬಂದ ತಹಸೀಲ್ದಾರ್​ ಆರ್​.ಎಚ್​. ಭಾಗವಾನ್​ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಸಂಘಟನೆಯ ಸಹ ಕಾರ್ಯದಶಿರ್ ಕೃಷ್ಣ ನಾಯ್ಕ, ಅರುಣ ನಾಗಾವತ್​, ಮಹೇಶ ಮರೋಳ, ಸುನೀಲಕುಮಾರ ಎಲ್​., ಅರುಣ ಲಮಾಣಿ, ಬೀರೇಶ ಕಂಬಳಿ, ಚಂದ್ರು ಎಚ್​., ನಿಖಿಲ ಎಚ್​., ನಿಂಗರಾಜ ಹೊಸಮನಿ, ಯಶವಂತ ಲಮಾಣಿ, ಸಂದೇಶ ಆರ್​.ಎಚ್​., ಮಹಾಂತೇಶ ಲಮಾಣಿ ಮತ್ತಿತರರು ಪಾಲ್ಗೊಂಡಿದ್ದರು.