Murder: ಮಾವಿನ ಚಟ್ನಿ ವಿಚಾರಕ್ಕೆ ಗಂಡ-ಹೆಂಡತಿ ಸಣ್ಣ ಗಲಾಟೆ ಮಾಡಿಕೊಂಡಿದ್ದು, ಇದೀಗ ತನ್ನ ಪತ್ನಿಯನ್ನು ಕತ್ತು ಹಿಸುಕಿ ಕೊಂದಿರುವ ಘಟನೆ ತೆಲಂಗಾಣದ ಪೆದ್ದಪಲ್ಲಿ ಮಂಡಲದಲ್ಲಿ ಇತ್ತೀಚಿಗೆ ನಡೆದಿದೆ.
ಇದನ್ನೂ ಓದಿ: ಪಾಕಿಸ್ತಾನದಲ್ಲಿ ಡ್ರೋನ್ ದಾಳಿಗೆ 4 ಮಕ್ಕಳು ಬಲಿ, ಐವರಿಗೆ ಗಾಯ: ನ್ಯಾಯಕ್ಕಾಗಿ ಪೋಷಕರ ಪ್ರತಿಭಟನೆ | Protest
ಪಂಡೆಲ್ಲಾ ಗ್ರಾಮದ ನಿವಾಸಿ ಸುರ ಅಂಜಲಿ ಮೃತೆ ಎಂದು ಗುರುತಿಸಲಾಗಿದೆ. ಆರೋಪಿ ಸುರ ರಾಜ್ಕುಮಾರ್ ಅನ್ನು ಬಂಧಿಸಲಾಗಿದೆ. ದಂಪತಿಗಳಿಬ್ಬರಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಭಾನುವಾರ ಸಂಜೆ ಸುರ ಅಂಜಲಿ ಮಾವಿನ ಚಟ್ನಿ ಮಾಡಲು ತಯಾರಿ ಮಾಡುತ್ತಿದ್ದಾಳೆ. ಇದಕ್ಕೆ ಬೇಕಾದ ಸಾಮಾಗ್ರಿಗಳನ್ನು ದಿನಸಿ ಅಂಗಡಿಯಿಂದ ತರಿಸಿಕೊಂಡಿದ್ದಾಳೆ. ಆದರೆ, ಬೊಳ್ಳಳ್ಳಿ ತರೊಸೋದು ಮರೆತ್ತಿದ್ದಾಳೆ. ಈ ವಿಚಾರವನ್ನು ಗಂಡ ಸುರ ರಾಜ್ಕುಮಾರ್ ಬಳಿ ಪ್ರಸ್ತಾಪಿಸಿದ್ದಾಳೆ. ನಾನು ಪದೇಪದೆ ದಿನಸಿ ಅಂಗಡಿಗೆ ಹೋಗಲ್ಲ ಎಂದಿದ್ದಾನೆ. ಇಬ್ಬರ ನಡುವೆ ಸಣ್ಣದಾಗಿ ಗಲಾಟೆಯಾಗಿದೆ. ಇದರಿಂದ ಕೋಪಗೊಂಡ ರಾಜ್ಕುಮಾರ್ ಪತ್ನಿಯನ್ನು ಕತ್ತು ಹಿಸುಕಿ ಕೊಂದಿದ್ದಾನೆ ಎಂದು ಎಫ್ಐಆರ್ನಲ್ಲಿ ಉಲ್ಲೇಖಿಸಲಾಗಿದೆ.(ಏಜೆನ್ಸೀಸ್)