ಬೆಂಗಳೂರು:
ಯೂನಿವರ್ಸಿಟಿ ಆಪ್ ಅಪ್ರೈಡ್ ಸೈನ್ಸಸ್ (ಆರ್‌ಯುಎಎಸ್) ಆತಿಥ್ಯ ವಹಿಸಿರುವಂಥ ಸ್‌ಟಾ ವೇರ್ ಆವೃತ್ತಿಯ ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್ (ಎಸ್‌ಐಎಚ್) 2024 ಫಿನಾಲೆ ಯಶಸ್ಸು ಕಂಡಿದೆ. ಆರ್‌ಯುಎಎಸ್ ಆತಿಥ್ಯ ವಹಿಸಿದ್ದ ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್ ವಿಜೇತರಿಗೆ ತಲಾ 1 ಲಕ್ಷ ರೂ. ಬಹುಮಾನ ನೀಡಲಾಯಿತು.
ಉತ್ತರಪ್ರದೇಶ, ಪಶ್ಚಿಮ ಬಂಗಾಲ, ರಾಜಸ್ಥಾನ, ತಮಿಳುನಾಡು, ತೆಲಂಗಾಣ, ಮಧ್ಯಪ್ರದೇಶ, ಮಹಾರಾಷ್ಟ್ರ, ಹರಿಯಾಣ, ಜಾರ್ಖಂಡ್, ಕರ್ನಾಟಕ, ದೆಹಲಿ, ಗುಜರಾತ್, ಆಂಧ್ರಪ್ರದೇಶ ಹಾಗೂ ಬಿಹಾರ ಹೀಗೆ ಹದಿನಾಲ್ಕು ರಾಜ್ಯಗಳಿಂದ ಹದಿನೇಳು ಪ್ರತಿಷ್ಠಿತ ವಿಶ್ವವಿದ್ಯಾಲಯಗಳು ಮತ್ತು ಶಿಕ್ಷಣ ಸಂಸ್ಥೆಗಳಿಂದ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಶಿಕ್ಷಣ ಸಚಿವಾಲಯದ ನಾವೀನ್ಯತಾ ಸೆಲ್ (ಎಂಐಸಿ) ಅಡಿಯಲ್ಲಿ ನಡೆದ ಈ ಕಾರ್ಯಕ್ರಮವು ಆರ್‌ಯುಎಎಸ್ ಪಾಲಿಗೆ ಹೆಮ್ಮೆ- ಗೌರವ ತರುವಂಥದ್ದಾಗಿದೆ. ಈ ಸ್ಪರ್ಧೆಗೆ ಸಂಬಂಧಿಸಿದಂತೆ ಪರಿಹಾರ ಕಂಡುಕೊಳ್ಳಬೇಕಾದ ಸಮಸ್ಯೆಗಳನ್ನು ಜಲ ಶಕ್ತಿ ಸಚಿವಾಲಯವು ನೀಡಿತ್ತು. ಇದಕ್ಕೆ ವಿದ್ಯಾರ್ಥಿಗಳ ತಂಡವು ಒದಗಿಸಿದ ಪರಿಹಾರಗಳ ಮೌಲ್ಯಮಾಪನವನ್ನು ತಜ್ಞರ ಗುಂಪು ಮಾಡಿತ್ತು. ತಂತ್ರಜ್ಞಾನವನ್ನು ಬಳಸಿಕೊಂಡು ಸವಾಲುಗಳು ಹಾಗೂ ಸಮಸ್ಯೆಗಳನ್ನು ಹೇಗೆ ಪರಿಹರಿಸಿಕೊಳ್ಳಬಹುದು ಎಂಬುದನ್ನು ನವೀನ ಮಾದರಿಯಲ್ಲಿ ಪ್ರಸ್ತುತ ಪಡಿಸುವುದು ವಿದ್ಯಾರ್ಥಿಗಳ ತಂಡಕ್ಕಿದ್ದ ಸ್ಪರ್ಧೆಯಾಗಿತ್ತು.
ಆರ್‌ಯುಎಎಸ್ ಕುಲಪತಿ ಡಾ. ಎಂ.ಆರ್. ಜಯರಾಮ್, ಎಐಸಿಟಿಇ ಸಲಹೆಗಾರ ಡಾ.ಎನ್.ಎಚ್.ಸಿದ್ದಲಿಂಗ ಸ್ವಾಮಿ, ’ಜಿ’, ಯು.ಆರ್.ರಾವ್ ಉಪಗ್ರಹ ಕೇಂದ್ರದ ವಿಜ್ಞಾನಿ, ಎಂಜಿನಿಯರ್ ಜೀವನ್ ಕುಮಾರ್ ಪಂಡಿತ್, ರಾಮಯ್ಯ ಯೂನಿವರ್ಸಿಟಿ ಆ್ ಅಪ್ರೈಡ್ ಸೈನ್ಸಸ್ ಉಪಕುಲಪತಿ ಡಾ ಕುಲದೀಪ ರೈನಾ ಮಾತನಾಡಿದರು.
ಗೋಕುಲ ಎಜುಕೇಷನ್ ಫೌಂಡೇಷನ್‌ನ ಮುಖ್ಯಾಧಿಕಾರಿ ಎಂ.ಆರ್.ಶ್ರೀನಿವಾಸ ಮೂರ್ತಿ ಅವರು ಉಪಕುಲಪತಿಗಳ ಜೊತೆಗೆ ಬಹುಮಾನ ವಿತರಣೆಯನ್ನು ಮಾಡಿದರು.
ಎರಡು ದಿನಗಳ ನಡೆದಂಥ ರಾಷ್ಟ್ರ ಮಟ್ಟದ ಈ ಪ್ರತಿಷ್ಠಿತ ಅಂತಿಮ ಸ್ಪರ್ಧೆಯಲ್ಲಿ ನೂರಾರು ಸಂಖ್ಯೆಯಲ್ಲಿ ಯುವ ಜನರು ಭಾಗವಹಿಸಿದ್ದರು. ಅವರ ನವೀನ ರೀತಿಯ ಆಲೋಚನೆಗಳು, ಪರಿಹಾರಗಳು ಹಾಗೂ ಸಮಾಜದ ಒಳಿತಿನ ಬಗ್ಗೆ ಚಿಂತನೆಗಳು ಸ್ಫೂರ್ತಿ ನೀಡುವಂತಿದ್ದವು. ಇನ್ನು ಉದ್ಯಮ ತಜ್ಞರು ಮತ್ತು ಶಿಕ್ಷಣ ತಜ್ಞರು ಸಹ ಭಾಗವಹಿಸಿದ್ದರು.
ಅಂತಿಮ ಸುತ್ತಿನ ಸ್ಪರ್ಧೆಯಲ್ಲಿ ಟೀಮ್ ಟೆಕ್ ವೇವ್, ಟೀಮ್ ಡ್ರಾಪ್ ಸ್ಕ್ಯಾಡ್, ಟೀಮ್ ಅಓಅಖಖಿಓಐ_ಅಖಿ ವಿಜೇತರಾದರು. ಎಐಸಿಟಿಇ ಪ್ರಾಯೋಜಕತ್ವದಲ್ಲಿ ಈ ಮೂರು ತಂಡಗಳಿಗೆ ತಲಾ ಒಂದು ಲಕ್ಷ ರೂಪಾಯಿ ಬಹುಮಾನವನ್ನು ವಿತರಿಸಲಾಯಿತು.
*ದೇಶವನ್ನು ರೂಪಿಸುವುದಕ್ಕೆ ನವನಾವಿನ್ಯತೆ ಮತ್ತು ಸೃಜನಾತ್ಮಕತೆ ಬಹಳ ಮುಖ್ಯ. ಈ ನಿಟ್ಟಿನಲ್ಲಿ ಸಂಸ್ಥೆ ಸದಾ ಪ್ರೋತ್ಸಾಹ ನೀಡುತ್ತಾ ಬಂದಿದೆ. ಇದನ್ನು ವಿದ್ಯಾರ್ಥಿಗಳು ಬಳಸಿಕೊಂಡು ಸ್ಪರ್ಧಾತ್ಮಕವಾಗಿ ಮುಂದೆ ಬರಬೇಕು.
- ಡಾ. ಎಂ.ಆರ್. ಜಯರಾಮ್, ಕುಲಪತಿ, ಆರ್‌ಯುಎಎಸ್.