ನ್ಯೂಸ್

ಆರ್‌ಟಿಇಎಸ್ ಕಾಲೇಜ್‌ಗೆ ನ್ಯಾಕ್‌ನಿಂದ ಏ ಗ್ರೇಡ್ ಮಾನ್ಯತೆ

ರಾಣೆಬೆನ್ನೂರ: ಸ್ಥಳೀಯ ಆರ್.ಟಿ.ಇ.ಎಸ್ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಪದವಿ ಮಹಾವಿದ್ಯಾಲಯಕ್ಕೆ ನ್ಯಾಕ್‌ನಿಂದ ಎ ಗ್ರೇಡ್ ಮಾನ್ಯತೆ ಲಭಿಸಿದೆ.
ಸೆ. 8ರಂದು ತಮಿಳುನಾಡಿನ ಪ್ರೊ. ಬಿ. ಧರ್ಮಲಿಂಗಮ್ ಅಧ್ಯಕ್ಷತೆಯಲ್ಲಿ ಹೈದರಾಬಾದ್‌ನ ಓಸಮಾನಿಯಾ ವಿಶ್ವವಿದ್ಯಾಲಯದ ಪ್ರೊ. ವಿಠ್ಠಲ ಮುಗಾ, ಛತ್ತಿಸಗಡದ ವಿ.ವೈ.ಟಿ ಪಿ.ಜಿ. ಹಾಗೂ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಆರ್.ಎನ್. ಸಿಂಗ್ ಅವರನ್ನು ಒಳಗೊಂಡ ನ್ಯಾಕ್ ಸಮಿತಿಯ ಸದಸ್ಯರು ಮಹಾವಿದ್ಯಾಲಯಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದರು.
ಒಟ್ಟು 4 ಅಂಕಗಳಿಗೆ ಆರ್‌ಟಿಇಎಸ್ ಕಾಲೇಜ್ 3.13 ಅಂಕಗಳನ್ನು ಪಡೆದಿದೆ. ಆದ್ದರಿಂದ ಎ ಗ್ರೇಡ್ ನೀಡಲಾಗಿದೆ ಎಂದು ಕಾಲೇಜ್ ಆಡಳಿತ ಮಂಡಳಿ ಅಧ್ಯಕ್ಷ ಸುಭಾಸ ಸಾವಕಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.