ನ್ಯೂಸ್

ಆರ್‌ಎಸ್‌ಎಸ್ ಮಾತೇ ಬೇರೆ, ಕೃತಿಯೇ ಬೇರೆ; ಸಿದ್ದರಾಮಯ್ಯ

ಶ್ರೀಕಾಂತ್ ಶೇಷಾದ್ರಿ

ಬೆಂಗಳೂರು: ಕಾಂಗ್ರೆಸ್ ಅಸಮಾನತೆಯ ವಿರುದ್ದ ಕೆಲಸ ಮಾಡುತ್ತದೆ. ಅದಕ್ಕೆ ಬಿಜೆಪಿಯವರು ನಮ್ಮನ್ನು ನೋಡಿದರೆ ಸಹಿಸುತ್ತಿಲ್ಲ. ನಾನು ಅಸಮಾನತೆ ವಿರುದ್ದ ಕೆಲಸ ಮಾಡುತ್ತಿರುವ ಕಾರಣಕ್ಕೆ ನನ್ನ ಸಹಿಸಲು ಆಗುತ್ತಿಲ್ಲ. ನನ್ನ ಮೇಲೆ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ನಡೆದ ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿ ಹಾಗೂ ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಜನ್ಮದಿನಾಚರಣೆಯಲ್ಲಿ ಮಾತನಾಡಿದ ಅವರು ಸಮಾಜದಲ್ಲಿ ಸಮಾನತೆ ಬರದೆ ಈ ದೇಶದ ಅಭಿವೃದ್ದಿ ಸಾಧ್ಯವಿಲ್ಲ. ಬಿಜೆಪಿಯವರು ಬಡವರು, ಅಲ್ಪಸಂಖ್ಯಾತರ ಪರವಾಗಿ ಇರಲು ಸಾಧ್ಯವೇಇಲ್ಲ. ಆರ್‌ಎಸ್‌ಎಸ್‌ನವರದ್ದು ಪ್ರಾರಂಭ ಆದ ದಿನದಿಂದಲೂ ಸಮಾನತೆಯ ವಿರುದ್ಧದ ಆಶಯ. ಅವರ ಮಾತೇ ಬೇರೆ, ಕೃತಿನೇ ಬೇರೆ ಎಂದು ಟೀಕಿಸಿದರು.

ದೀರ್ಘಕಾಲ ಕರ್ನಾಟಕದ ಮುಖ್ಯಮಂತ್ರಿಗಳಾಗಿ ಸೇವೆ ಸಲ್ಲಿಸಿದರವರು ದೇವರಾಜ ಅರಸು ಅವರು. ಸಾಮಾಜಿಕ ನ್ಯಾಯದ ಹರಿಕಾರ. ಹಾವನೂರು ಆಯೋಗ ರಚನೆ ಮಾಡಿ ಇಲ್ಲದವರಿಗೆ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಮೀಸಲಾತಿ ನೀಡಿದರು.

ಅರಸು ಅವರು ಹಿಂದುಳಿದವರು, ದಲಿತರು, ಅಲ್ಪಸಂಖ್ಯಾತರನ್ನು ಹಾಗೂ ಸಮಾಜದ ಕಟ್ಟಕಡೆಯ ಸಮುದಾಯಗಳನ್ನು ಗುರುತಿಸಿ ಚುನಾವಣೆಯಲ್ಲಿ ನಿಲ್ಲಲು ಅವಕಾಶ ನೀಡಿದವರು. ವಿಧಾನಸೌಧ ಮೆಟ್ಟಿಲು ಹತ್ತಲು ಸಾಧ್ಯವೇ ಇಲ್ಲದರಿಗೆ ಅವಕಾಶ ನೀಡಿದವರು.

ಅರಸು ಅವರು ಸಿಎಂ ಆಗಿದ್ದಾಗ ನಾನು ಸೋಷಿಯಲಿಸ್ಟ್ ಪಕ್ಷದಲ್ಲಿದ್ದೆ. ಆನಂತರ ಜನತಾ ಪಕ್ಷಕ್ಕೆ ಬಂದೆ. ಕೆಪಿಸಿಸಿ ಅಧ್ಯಕ್ಷರಾಗಿದ್ದಾಗ ಜಾಫರ್ ಶರಿಫ್ ಅವರಿಗೆ ಟಿಕೆಟ್ ನೀಡಿದ್ದರು. ಆಗ ನಾಗರತ್ನಮ್ಮ ಅವರು ಅರಸು ಅವರೇ ಜಟಕಾ ಓಡಿಸುವ ಸಾಬರಿಗೆ ಟಿಕೆಟ್ ನೀಡಿದ್ದೀರಾ ಎಂದಾಗ.

ನೋಡಮ್ಮ ಇನ್ನು ಮುಂದೆ ಜಟಕಾ ಗಾಡಿ ಓಡಿಸುವವರಿಗೆ. ಕ್ಷೌರ ಮಾಡುವವರಿಗೆ ಟಿಕೆಟ್ ನೀಡುತ್ತೇವೆ ಹೊರತು ಲಿಪ್ ಸ್ಟಿಕ್ ಹಾಕುವವರಿಗಲ್ಲ ಎಂದು ಅರಸು ಹೇಳಿದ್ದರು ಎಂದು ನೆನಪಿಸಿಕೊಂಡರು.