ನವದೆಹಲಿ: ಅದಾನಿ ಸಮೂಹದ ಷೇರುಗಳು ಮಂಗಳವಾರ ಗಮನ ಸೆಳೆದವು. ಅದಾನಿ ಎಂಟರ್‌ಪ್ರೈಸಸ್, ಅದಾನಿ ಟೋಟಲ್ ಗ್ಯಾಸ್ ಮತ್ತು ಅದಾನಿ ಪವರ್ ಷೇರುಗಳ ಬೆಲೆ 5 ಪ್ರತಿಶತಕ್ಕಿಂತ ಹೆಚ್ಚು ಏರಿಕೆ ಕಂಡವು.
ಬಿಲಿಯನೇರ್ ಗೌತಮ್ ಅದಾನಿ ನೇತೃತ್ವದ ಸಮೂಹದ ಪ್ರಮುಖ ಸಂಸ್ಥೆಯಾದ ಅದಾನಿ ಎಂಟರ್‌ಪ್ರೈಸಸ್‌ನ ಷೇರುಗಳ ಬೆಲೆ ಶೇಕಡಾ 5.43 ರಷ್ಟು ಏರಿಕೆಯಾಯಿತು. ಅದಾನಿ ಟೋಟಲ್ ಗ್ಯಾಸ್ ಸ್ಟಾಕ್ ಬೆಲೆ ಶೇ. 5.50, ಅದಾನಿ ಪವರ್ ಷೇರು ಬೆಲೆ ಶೇ. 5.49, ಅದಾನಿ ಗ್ರೀನ್ ಎನರ್ಜಿ ಷೇರು ಬೆಲೆ ಶೇ. 4.34 ಮತ್ತು ಎಸಿಸಿ ಸ್ಟಾಕ್ ಬೆಲೆ ಶೇ. 4.17ರಷ್ಟು ಏರಿಕೆ ಕಂಡವು.
ಅಂಬುಜಾ ಸಿಮೆಂಟ್ಸ್ ಷೇರುಗಳ ಬೆಲೆ ಶೇ. 3.90, ಅದಾನಿ ಎನರ್ಜಿ ಸಲ್ಯೂಷನ್ಸ್ ಸ್ಟಾಕ್ಗಳ ಬೆಲೆ ಶೇ. 3.07, ಅದಾನಿ ವಿಲ್ಮಾರ್ (ಶೇ. 2.20), ಅದಾನಿ ಪೋರ್ಟ್ಸ್ (ಶೇ.1.89) ಮತ್ತು ಎನ್‌ಡಿಟಿವಿ (ಶೇ.1.87) ಸ್ಟಾಕ್ಗಳ ಬೆಲೆ ಕೂಡ ಹೆಚ್ಚಳವಾದವು.
ಅದಾನಿ ಸಮೂಹದ ಎಲ್ಲ 10 ಪಟ್ಟಿ ಮಾಡಲಾದ ಸಂಸ್ಥೆಗಳ ಸಂಯೋಜಿತ ಮಾರುಕಟ್ಟೆ ಮೌಲ್ಯವು 15,86,018.55 ಕೋಟಿ ರೂ. ಆಗಿದೆ.
ಇಂಧನದಿಂದ ವಿಮಾನ ನಿಲ್ದಾಣಗಳು ಮತ್ತು ಡೇಟಾ ಸೆಂಟರ್‌ಗಳವರೆಗೆ ಆಸಕ್ತಿ ಹೊಂದಿರುವ ಅದಾನಿ ಎಂಟರ್‌ಪ್ರೈಸಸ್ ಲಿಮಿಟೆಡ್ (AEL) ಪ್ರಸಕ್ತ ಹಣಕಾಸು ವರ್ಷದಲ್ಲಿ ವಿವಿಧ ವ್ಯವಹಾರಗಳಲ್ಲಿ 80,000 ಕೋಟಿ ರೂಪಾಯಿಗಳನ್ನು ಖರ್ಚು ಮಾಡಲು ಯೋಜಿಸಿದೆ ಎಂದು ಕಂಪನಿಯ ಹಿರಿಯ ಕಾರ್ಯನಿರ್ವಾಹಕರೊಬ್ಬರು ತಿಳಿಸಿದ್ದಾರೆ. 2024-25 (ಏಪ್ರಿಲ್ 2024 ರಿಂದ ಮಾರ್ಚ್ 2025) ಹಣಕಾಸಿನ ವೆಚ್ಚದ ಬಹುಪಾಲು ಬಂಡವಾಳ ವೆಚ್ಚವು ಹೊಸ ಇಂಧನ ವ್ಯವಹಾರಗಳು ಮತ್ತು ವಿಮಾನ ನಿಲ್ದಾಣಗಳ ಮೇಲೆ ಇರುತ್ತದೆ ಎಂದು AEL ಉಪ ಮುಖ್ಯ ಹಣಕಾಸು ಅಧಿಕಾರಿ ಸೌರಭ್ ಶಾ ಅವರು ತಿಳಿಸಿದ್ದಾರೆ.
"ನಾವು FY25 ರಲ್ಲಿ ಅಂದಾಜು 80,000 ಕೋಟಿ ರೂ.ಗಳ ಬಂಡವಾಳ ವೆಚ್ಚ ನೋಡುತ್ತಿದ್ದೇವೆ. ಇದರಲ್ಲಿ ಪ್ರಮುಖ ಭಾಗವು ANIL ಮತ್ತು ವಿಮಾನ ನಿಲ್ದಾಣಗಳ ವ್ಯವಹಾರಕ್ಕೆ ಹೋಗುತ್ತದೆ, ಇದು ಅಂದಾಜು 50,000 ಕೋಟಿ ರೂ. ಬಂಡವಾಳ ವೆಚ್ಚವನ್ನು ತೆಗೆದುಕೊಳ್ಳುತ್ತದೆ" ಎಂದು ಅವರು ಹೇಳಿದರು.
ANIL ಎಂದರೆ ಅದಾನಿ ನ್ಯೂ ಇಂಡಸ್ಟ್ರೀಸ್ ಲಿಮಿಟೆಡ್ ಆಗಿದ್ದು, ಇದು ಸೂರ್ಯನ ಬೆಳಕನ್ನು ವಿದ್ಯುತ್ ಮತ್ತು ಹಸಿರು ಹೈಡ್ರೋಜನ್ ಆಗಿ ಪರಿವರ್ತಿಸುವ ಸೌರ ಮಾಡ್ಯೂಲ್‌ಗಳನ್ನು ತಯಾರಿಸುತ್ತದೆ.