ನ್ಯೂಸ್

ಸಹೋದ್ಯೋಗಿಯನ್ನು ಲವ್​ ಮಾಡಿದ್ರೆ 45 ಸಾವಿರ ರೂಪಾಯಿ ಬೋನಸ್ ಘೋಷಿಸಿದ ಟೆಕ್​ ಕಂಪನಿ! Love With Colleagues ​

Love With Colleagues : ಒಂದು ಕಚೇರಿಯಲ್ಲಿ ಅಥವಾ ಕಂಪನಿಯಲ್ಲಿ ಸಹೋದ್ಯೋಗಿಗಳ ನಡುವೆ ಲವ್​ ಸ್ಟೋರಿ ಏನಾದರೂ ಇದ್ದರೆ ಕೂಡಲೇ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುತ್ತದೆ. ಇದು ಸಹಜ ಕೂಡ ಹೌದು. ಏಕೆಂದರೆ, ಕೆಲಸಕ್ಕೆ ಅಡ್ಡಿಯಾಗುತ್ತದೆ. ಆದರೆ, ಇಲ್ಲೊಂದು ಕಂಪನಿ ಇದಕ್ಕೆ ತದ್ವಿರುದ್ಧವಾಗಿ ನಡೆದುಕೊಳ್ಳುತ್ತಿದೆ. ತಮ್ಮ ಸಹೋದ್ಯೋಗಿಗಳೊಂದಿಗೆ ಡೇಟಿಂಗ್ ಮಾಡುವವರಿಗೆ ಕಂಪನಿ ಬೋನಸ್ ಘೋಷಿಸಿದೆ. ಅಚ್ಚರಿ ಎನಿಸಿದರೂ ಇದುವೇ ಸತ್ಯ.

ಸಹೋದ್ಯೋಗಿಗಳ ನಡುವೆ ಲವ್​, ಡೇಟಿಂಗ್​ ಮೂಡಿದರೆ ಬೋನಸ್​ ನೀಡುವ ಕಂಪನಿ ಪ್ರಸ್ತುತ ಸಾಮಾಜಿಕ ಜಾಲತಾಣದಲ್ಲಿ ಪ್ರಮುಖ ಚರ್ಚೆಯ ವಿಷಯವಾಗಿದೆ. ಅಷ್ಟಕ್ಕೂ ಆ ಕಂಪನಿಯ ಹೆಸರೇನು ಅಂದರೆ ಕ್ಲೂಲಿ. ಇದು ಅಮೆರಿಕ ಮೂಲದ ಟೆಕ್ ಸ್ಟಾರ್ಟ್ಅಪ್ ಕಂಪನಿ. ಸಹೋದ್ಯೋಗಿಯೊಂದಿಗೆ ಯಶಸ್ವಿಯಾಗಿ ಡೇಟಿಂಗ್ ಮಾಡುವವರಿಗೆ $500 (ರೂ.43,000) ಬೋನಸ್ ನೀಡಲಾಗುವುದು ಎಂದು ಕಂಪನಿ ಘೋಷಣೆ ಮಾಡಿದೆ.

ಈ ವಿಚಾರವನ್ನು ಕ್ಲೂಲಿಯ ಸಿಇಒ ತಮ್ಮ ಲಿಂಕ್ಡ್‌ಇನ್ ಪೋಸ್ಟ್ ಮೂಲಕ ಸ್ಪಷ್ಟಪಡಿಸಿದ್ದಾರೆ. ಯಾವಾಗ ಸಿಇಒ ಪೋಸ್ಟ್​ ಮಾಡಿದರೋ ಅದು ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ. ಪ್ರತಿಯೊಬ್ಬರೂ ಸಂತೋಷದಿಂದ ಬದುಕಬೇಕು ಮತ್ತು ಡೇಟಿಂಗ್ ನಮ್ಮ ಸಂಸ್ಕೃತಿಯ ಪ್ರಮುಖ ಭಾಗವಾಗಿದೆ ಎಂದು ಸಿಇಒ ತಮ್ಮ ಪೋಸ್ಟ್‌ನಲ್ಲಿ ಹೇಳಿದ್ದಾರೆ.

ಕ್ಲೂಲಿ ತಂಡದ ಓರ್ವ ಸದಸ್ಯ ಇತರೆ ಸದಸ್ಯರೊಂದಿಗೆ ಡೇಟಿಂಗ್ ಮಾಡಲು ಬಯಸಿದರೆ, ಅವರು ನೇರವಾಗಿ ಸಿಇಒಗೆ ತಿಳಿಸಬಹುದು. ಸಂಗಾತಿಯನ್ನು ಹುಡುಕುವವರಿಗೆ ಬೋನಸ್‌ಗಳು ಸಹ ಇವೆ. ಸೂಕ್ತ ಸಂಗಾತಿಯನ್ನು ಕಂಡುಹಿಡಿದು, ಡೇಟಿಂಗ್​ ಯಶಸ್ವಿಯಾದರೆ, ಅವರಿಗೆ ಒಂದು ಬಾರಿ $500 ಬೋನಸ್ ಸಹ ಸಿಗುತ್ತದೆ.

ಇನ್ನು ಈ ವಿಧಾನವು ಶಾಶ್ವತವಾಗಿ ಮುಂದುವರಿಯಬೇಕು ಅಂತಾನೂ ಸಿಇಒ ಹೇಳಿದ್ದಾರೆ. ಈ ನಿರ್ಧಾರವು ಉದ್ಯೋಗಿಗಳ ಸಂತೋಷ ಮತ್ತು ಮಾನಸಿಕ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ ಎಂದು ಕಂಪನಿ ಹೇಳುತ್ತದೆ. (ಏಜೆನ್ಸೀಸ್​)