ನ್ಯೂಸ್

RRR ಚಿತ್ರವನ್ನು ಬಾಲಿವುಡ್​ ಸಿನಿಮಾ ಎಂದು ಕರೆದ ಹಾಲಿವುಡ್​ ನಟಿಗೆ ನೆಟ್ಟಿಗರಿಂದ ಖಡಕ್​ ರಿಪ್ಲೈ!

ಬೆಂಗಳೂರು: ಹಾಲಿವುಡ್ ನಟಿ ಜೇನ್ ಫೋಂಡಾ, ನಿನ್ನೆಯಷ್ಟೇ ಎಸ್‌ಎಸ್ ರಾಜಮೌಳಿ ಅವರ ಆರ್‌ಆರ್‌ಆರ್ (RRR) ಚಿತ್ರದ ಬಗ್ಗೆ ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಹೊಗಳಿದ್ದಾರೆ. ಆದರೆ ಅದನ್ನು ತಮ್ಮ ಪೋಸ್ಟ್‌ನಲ್ಲಿ ಬಾಲಿವುಡ್ ಚಿತ್ರ ಎಂದು ಕರೆದಿದ್ದಾರೆ. ಇದನ್ನು ಗಮನಿಸಿದ ಅಭಿಮಾನಿಗಳು 'ಬಾಲಿವುಡ್ ಚಿತ್ರ ಎಂದರೆ ಹಿಂದಿ ಭಾಷೆಯ ಸಿನಿಮಾಗಳು.

ಇದು ಟಾಲಿವುಡ್​ ಸಿನಿಮಾ. ಇದು ತೆಲುಗು ಭಾಷೆಯ ಚಿತ್ರ' ಎಂದು ಖಡಕ್​ ಆಗಿ ಹೇಳಿದ್ದಾರೆ. ಆರ್‌ಆರ್‌ಆರ್ (RRR)ನ ತೆಲುಗು ಭಾಷಿಗ ಅಭಿಮಾನಿಯೊಬ್ಬ ತೆಲುಗಿನಲ್ಲೇ 'ಈಕೆಗೆ ಇದು ಬಾಲಿವುಡ್​ ಸಿನಿಮಾ ಅಲ್ಲ ಎಂದು ಯಾರಾದರೂ ಹೇಳಿ' ಎಂದು ಕಾಮೆಂಟ್​ ಮಾಡಿದ್ದಾನೆ.

ಹಾಲಿವುಡ್ ಐಕಾನ್ ಜೇನ್ ಫೋಂಡಾ 'ನಾನು ಇತ್ತೀಚೆಗೆ 'ಟು ಲೆಸ್ಲಿ' ಹೆಸರಿನ ಚಿತ್ರವನ್ನು ನೋಡಲು ಎಲ್ಲರಿಗೂ ಸಲಹೆ ನೀಡಿದ್ದೆ. ಆದರೆ ಈಗ ನಾನು RRR ಚಿತ್ರವನ್ನು ನೋಡಿದ್ದು ಇದರ ಪ್ರಕಾರವೇ ಹೊಸದಾಗಿದ್ದು ನನಗೆ ಆಶ್ಚರ್ಯ ಉಂಟುಮಾಡಿದೆ. ಇದು ಬೆಸ್ಟ್​ ಫಾರಿನ್​ ಸಿನಿಮಾ ವಿಭಾಗದಲ್ಲಿ ನಾಮಿನೇಟ್​ ಆಗಿರುವ ಸಿನಿಮಾ ಆಗಿರುವ ಕಾರಣ ಇದನ್ನು ನಾನು ನೋಡಿದ್ದು ಇದು ಇಂಡಿಯಾನ ಜೋನ್ಸ್​ ಹಾಗೂ ಇಂಪೀರಿಯಲಿಸಮ್​ ನ ಮಿಶ್ರಣ ಇರುವ ಬಾಲಿವುಡ್​ ಸಿನಿಮಾ' ಎಂದು ಕ್ಯಾಪ್ಶನ್​ ಬರೆದಿದ್ದರು.

ಈ ಬಗ್ಗೆ ಜನರು ಖಡಕ್​ ಆಗಿ 'RRR ಬಾಲಿವುಡ್​ ಸಿನಿಮಾ ಅಲ್ಲ, ಇದು ಟಾಲಿವುಡ್​ ಸಿನಿಮಾ. ಇದನ್ನು ಇಂಡಿಯನ್​ ಸಿನಿಮಾ ಎಂದರೆ ತಪ್ಪಾಗಲ್ಲ' ಹೇಳಿದ್ದು ಹಾಲಿವುಡ್​ ನಟಿಯ ತಪ್ಪನ್ನು ತಿದ್ದಿದ್ದಾರೆ.