ನ್ಯೂಸ್

ಕುಖ್ಯಾತ ಪಾತಕಿ ಕೊರಂಗು ಕೃಷ್ಣ ವಿಧಿವಶ

arunakunigal

ಬೆಂಗಳೂರು: ಕುಖ್ಯಾತ ರೌಡಿಶೀಟರ್ ಕೃಷ್ಣಮೂರ್ತಿ ಅಲಿಯಾಸ್​ ಕೊರಂಗು ಕೃಷ್ಣ ಇಂದು(ಶುಕ್ರವಾರ) ಬೆಳಗ್ಗೆ ಮೃತಪಟ್ಟಿದ್ದಾನೆ.

1990ರಲ್ಲಿ ಆಕ್ಟೀವ್ ಆಗಿದ್ದ ಕೊರಂಗು ಕೃಷ್ಣ ಚಿತ್ತೂರಿನಲ್ಲೇ ಬಿಸಿನೆಸ್ ಮಾಡಿಕೊಂಡಿದ್ದ. ದಶಕದ ಹಿಂದೆ ಹೆಬ್ಬಟ್ಟು ಮಂಜ ಆ್ಯಂಡ್ ಟೀಂ ಕೊರಂಗು ಮೇಲೆ ಆಟ್ಯಾಕ್ ಮಾಡಿತ್ತು. ಹಿರಿಯೂರು ಡಾಬಾದಲ್ಲಿ ನಡೆದ ದಾಳಿಯಲ್ಲಿ ಕೊರಂಗು ಕೈ ಕಟ್ ಆಗಿ ಬದುಕುಳಿದ್ದಿದ್ದ. ಇದಾದ ನಂತರ ಈತನನ್ನು ರಾಜ್ಯದಿಂದ ಗಡಿಪಾರು ಮಾಡಲಾಗಿತ್ತು.

ಹಲವು ಸಮಯದಿಂದ ಹೊರರಾಜ್ಯದಲ್ಲಿ ಇದ್ದ ಕೊರಂಗು ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದ. ಚಿತ್ತೂರಿನಲ್ಲೇ ಚಿಕಿತ್ಸೆ ಪಡೆಯುತ್ತಿದ್ದ ಈತ, ಇಂದು ಬೆಳಗ್ಗೆ ಅಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. 'ಓಂ‌' ಸಿನಿಮಾದಲ್ಲೂ ಕೊರಂಗು ನಟಿಸಿದ್ದ.