ಶನಿವಾರಸಂತೆಯ ಆಲೂರುಸಿದ್ದಾಪುರ ರೋಟರಿ ಮಲ್ಲೇಶ್ವರ ಕ್ಲಬ್ ವತಿಯಿಂದ ಶಿಕ್ಷಕರಾದ ಡಾ.ಶಂಕರೇಗೌಡ, ನಾಗರಾಜ್ ಮತ್ತು ಕಿರಣ್‌ಕುಮಾರ್ ಅವರನ್ನು ಸನ್ಮಾನಿಸಲಾಯಿತು. ಕಿರಣ್, ಎಸ್.ಎಸ್.ರಾಮಣ್ಣ, ಸಂಪತ್‌ಕುಮಾರ್ ಇದ್ದರು. 
ನ್ಯೂಸ್

ರೋಟರಿ ಕ್ಲಬ್ ವತಿಯಿಂದ ಸಾಧಕರಿಗೆ ಸನ್ಮಾನ

ಶನಿವಾರಸಂತೆ: ಶಿಕ್ಷಕರ ದಿನಾಚರಣೆ ಅಂಗವಾಗಿ ಸಮೀಪದ ಆಲೂರುಸಿದ್ದಾಪುರ ರೋಟರಿ ಮಲ್ಲೇಶ್ವರ ಕ್ಲಬ್ ವತಿಯಿಂದ ಸಾಧಕ ಶಿಕ್ಷಕರನ್ನು ಸನ್ಮಾನಿಸಿ ಗೌರವಿಸಲಾಯಿತು.

ರೋಟರಿ ಕ್ಲಬ್ ಸಭಾಂಗಣದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಶಿಕ್ಷಕರಾದ ಡಾ.ಶಂಕರೇಗೌಡ, ನಾಗರಾಜ್ ಮತ್ತು ಕಿರಣ್‌ಕುಮಾರ್ ಅವರನ್ನು ಗೌರವಿಸಲಾಯಿತು.

ಆಲೂರುಸಿದ್ದಾಪುರ ರೋಟರಿ ಮಲ್ಲೇಶ್ವರ ಕ್ಲಬ್ ಅಧ್ಯಕ್ಷ ನಾರಾಯಣಸ್ವಾಮಿ ರೋಟರಿ ಸಂಸ್ಥೆಯ ಸಮಾಜ ಸೇವೆಯ ಬಗ್ಗೆ ರೋಟರಿ ಸಂಸ್ಥೆಯ ಕಾರ್ಯಕ್ರಮಗಳ ಕುರಿತು ಮಾತನಾಡಿದರು.

ಕಾರ್ಯಕ್ರಮದಲ್ಲಿ ರೋಟರಿ ಕಾರ್ಯದರ್ಶಿ ಕಿರಣ್, ರೋಟರಿ ವಲಯ ಸೇನಾನಿ ಎಸ್.ಎಸ್.ರಾಮಣ್ಣ, ರೋಟರಿ ಸಂಸ್ಥೆಯ ಮುಂದಿನ ಅಧ್ಯಕ್ಷ ಸಂಪತ್‌ಕುಮಾರ್, ಸದಸ್ಯರು ಮತ್ತು ಕುಟುಂಬ ವರ್ಗದವರು ಹಾಜರಿದ್ದರು.