ನ್ಯೂಸ್

ರಾತ್ರೋರಾತ್ರಿ ಆಸ್ಪತ್ರೆಗೆ ಬಂದ ರೋಹಿತ್ ಶರ್ಮಾ! ಅಭಿಮಾನಿಗಳಲ್ಲಿ ಆತಂಕ..Rohit Sharma

Rohit Sharma :   ರೋಹಿತ್ ಶರ್ಮಾ ಸೆಪ್ಟೆಂಬರ್ 8 ರ ಸೋಮವಾರ ರಾತ್ರಿ ಮುಂಬೈನ ಕೋಕಿಲಾಬೆನ್ ಧೀರೂಭಾಯಿ ಅಂಬಾನಿ ಆಸ್ಪತ್ರೆಯಲ್ಲಿ ಕಾಣಿಸಿಕೊಂಡರು.

ರೋಹಿತ್ ಶರ್ಮಾ ಇದ್ದಕ್ಕಿದ್ದಂತೆ ಆಸ್ಪತ್ರೆಗೆ ಹೋಗುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ರೋಹಿತ್ ಆಸ್ಪತ್ರೆಗೆ ಏಕೆ ಹೋದರು ಎಂಬುದರ ಕುರಿತು ಇನ್ನೂ ಯಾವುದೇ ಮಾಹಿತಿ ಇಲ್ಲ.  ಆದರೆ ಕುರಿತಾದ ವಿಡಿಯೋ ಸೋಶಿಯಲ್​ ಮಿಡಿಯಾದಲ್ಲಿ ವೈರಲ್​​ ಆಗಿದೆ. 

ಭಾರತದ ನಾಯಕ ರೋಹಿತ್ ಶರ್ಮಾ ತಮ್ಮ ಕಾರಿನಲ್ಲಿ ಆಸ್ಪತ್ರೆಗೆ ತಲುಪಿದರು. ಆಸ್ಪತ್ರೆಯೊಳಗೆ ಹೋಗುವ ಮೊದಲು ರೋಹಿತ್ ಒಬ್ಬ ವ್ಯಕ್ತಿಯನ್ನು ಭೇಟಿಯಾದರು. ನಂತರ ಅವರು ನೇರವಾಗಿ ಆಸ್ಪತ್ರೆಗೆ ಹೋದರು.

ರೋಹಿತ್ ಶರ್ಮಾ ಈಗಾಗಲೇ ಟಿ20 ಮತ್ತು ಟೆಸ್ಟ್ ಕ್ರಿಕೆಟ್ ನಿಂದ ನಿವೃತ್ತಿ ಹೊಂದಿದ್ದಾರೆ. ಅವರು ಇನ್ನೂ ಭಾರತೀಯ ಏಕದಿನ ತಂಡದ ನಾಯಕರಾಗಿದ್ದಾರೆ. ಮುಂಬರುವ ಆಸ್ಟ್ರೇಲಿಯಾ ಪ್ರವಾಸದಲ್ಲಿ ರೋಹಿತ್ ಏಕದಿನ ಸರಣಿಯಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ.