Yash | ಕನ್ನಡದ ಖ್ಯಾತ ನಟ ಯಶ್ ರಾಮಾಯಣ ಚಿತ್ರದಲ್ಲಿ ರಾವಣ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇನ್ನೂ ಚಿತ್ರೀಕರಣ ಆರಂಭಿಸುವ ಮುನ್ನ ರಾಕಿಬಾಯ್, ಉಜ್ಜಯಿನಿಯ ಮಹಾಕಾಳೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ.
ಯಶ್ ಉಜ್ಜಯಿನಿಯ ಮಹಾಕಾಳೇಶ್ವರ ದೇವಾಲಯಕ್ಕೆ ಭೇಟಿ ನೀಡಿರುವ ಫೋಟೊ, ವೀಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಇನ್ನೂ ದೇವರ ದರ್ಶನ ಮಾಡಿದ ಬಳಿಕ ಯಸ್ ಮಾತನಾಡಿದ್ದು, ನಾನು ಚಿಕ್ಕಂದಿನಿಂದಲೇ ಶಿವನ ಭಕ್ತ, ದೇವಸ್ಥಾನಕ್ಕೆ ಭೇಟಿ ನೀಡಿ ಖುಷಿಯಾಯಿತು. ಎಲ್ಲರಿಗೂ ಒಳ್ಳೆಯದಾಗಲಿ ಎಂದು ಪ್ರಾರ್ಥಿಸಿದೆ ಎಂದು ಹೇಳಿದ್ದಾರೆ.
ನಿತೇಶ್ ತಿವಾರಿ ನಿರ್ದೇಶನ ಮಾಡುತ್ತಿರುವ ಮಹಾಕಾವ್ಯ ರಾಮಾಯಣ ಚಿತ್ರದಲ್ಲಿ ಯಶ್ ರಾವಣನಾಗಿ ಕಾಣಿಸಿಕೊಳ್ಳಲಿದ್ದಾರೆ.
ಶೀಘ್ರದಲ್ಲೇ ನಿತೇಶ್ ತಿವಾರಿ ನಿರ್ದೇಶನದ ರಾಮಾಯಣ ಸಿನಿಮಾ ಚಿತ್ರೀಕರಣದಲ್ಲಿ ರಾಕಿಂಗ್ ಸ್ಟಾರ್ ಭಾಗಿ ಆಗಲಿದ್ದಾರೆ. ಈ ವಾರ ಯಶ್ ಅವರು ಮುಂಬೈನಲ್ಲಿ ಶೂಟ್ ಆರಂಭಿಸಲಿದ್ದಾರೆ. ಕೆಲವು ಸೋಲೋ ದೃಶ್ಯಗಳ ಚಿತ್ರೀಕರಣ ನಡೆಯಲಿದೆ. ಇನ್ನೂ ರಾಕಿಂಗ್ ಸ್ಟಾರ್ ಯಶ್ ಅವರು ರಾವಣನಾಗಿ ಮಿಂಚಲು ರೆಡಿ ಆಗಿದ್ದಾರೆ. ಅವರು ಈ ಚಿತ್ರದಲ್ಲಿ ಕೇವಲ ಹೀರೋ ಮಾತ್ರವಲ್ಲ. ಬದಲಿಗೆ ನಿರ್ಮಾಪಕ ಕೂಡ ಹೌದು. ಯಶ್ ಅವರು ಕೇವಲ ನಟನಾಗಿ ಸೆಟ್ಗೆ ಬರುತ್ತಿಲ್ಲ. ನಟಿಸುವುದರ ಜೊತೆಗೆ ಯಶ್ ಸಹ ನಿರ್ಮಾಪಕರು ಆಗಿದ್ದಾರೆ. ಚಿತ್ರದಲ್ಲಿ ಶ್ರೀರಾಮನಾಗಿ ರಣ್‌ಬೀರ್ ಕಪೂರ್, ಸೀತೆಯಾಗಿ ಸಾಯಿ ಪಲ್ಲವಿ ಕಾಣಿಸಿಕೊಳ್ಳಲಿದ್ದಾರೆ.
ಇದನ್ನೂ ಓದಿ: ಇದೆಲ್ಲ ನಮ್ಮೊಂದಿಗೆ ಬೇಡ... ಕೊಹ್ಲಿ-ಶ್ರೇಯಸ್ ನಡುವೆ ನಡೆದ ವಾಗ್ವಾದವೇನು? RCB ಅಬ್ಬರಕ್ಕೆ ಪಂಜಾಬ್ ಸೈಲೆಂಟ್! Virat Kohli
(ಏಜೆನ್ಸೀಸ್)
ರಾವಣನಾಗಿ ರಾಕಿಂಗ್ ಸ್ಟಾರ್ ಅಬ್ಬರಿಸುವುದನ್ನು ನೋಡಲು ಸಿನಿರಸಿಕರು ಕಾಯುತ್ತಿದ್ದಾರೆ. 600 ಕೋಟಿ ರೂ. ಬಜೆಟ್‌ನಲ್ಲಿ ಸಿನಿಮಾ ನಿರ್ಮಾಣವಾಗುತ್ತಿದೆ.
ಎರಡು ಭಾಗದಲ್ಲಿ ‘ರಾಮಾಯಣ’ ಸಿನಿಮಾ ತೆರೆಗೆ ಬರಲಿದೆ. 2026ರ ದೀಪಾವಳಿಗೆ ಮೊದಲ ಭಾಗ ರಿಲೀಸ್ ಆದರೆ, 2027ರಲ್ಲಿ ಎರಡನೇ ಭಾಗದ ಶೂಟ್ ನಡೆಯಲಿದೆ. ರಣಬೀರ್ ಕಪೂರ್ ರಾಮನ ಪಾತ್ರ ಮಾಡಿದರೆ, ಸನ್ನಿ ಡಿಯೋಲ್ ಹನುಮಂತನಾಗಿ ಕಾಣಿಸಿಕೊಳ್ಳಲಿದ್ದಾರೆ. ಸಾಯಿ ಪಲ್ಲವಿ ಸೀತೆಯ ಪಾತ್ರದಲ್ಲಿ ಅಭಿನಯಿಸಲಿದ್ದಾರೆ. ಶೀಘ್ರವೇ ಚಿತ್ರ ತಂಡ ಎರಡನೇ ಪಾರ್ಟ್ಗೆ ಶೂಟ್ ಆರಂಭಿಸಲಿದೆ ಎನ್ನಲಾಗಿದೆ.