ನ್ಯೂಸ್

ಬಿಟೌನ್​​ ಎಂಟ್ರಿಗೆ ರಾಕಿಂಗ್ ಸ್ಟಾರ್ ಯಶ್ 150 ಕೋಟಿ ಡಿಮ್ಯಾಂಡ್ ಮಾಡಿದ್ರಾ? ರಾವಣನ ಪಾತ್ರಕ್ಕೆ ಯಶ್ ಫಿಕ್ಸ್…!

ಏಪ್ರಿಲ್ 2022ರಲ್ಲಿ ಬಿಡುಗಡೆಯಾದ 'ಕೆಜಿಎಫ್ 2' ಬಾಕ್ಸಾಫೀಸ್ ಚಿಂದಿ ಉಡಾಯಿಸಿದ್ದು, ಯಶ್ ನ್ಯಾಷನಲ್ ಸ್ಟಾರ್ ಆಗಿದ್ದು ಇಂದಿಗೂ ದಾಖಲೆಯೇ. ಆದರೆ, 'ಕೆಜಿಎಫ್' ನಂತರ ಯಶ್ ಏನ್ಮಾಡ್ತಾರೆ? ಯಾವ ಸಿನಿಮಾ? ಏನು ಪ್ರಾಜೆಕ್ಟ್ ? ಅನ್ನೋ ಪ್ರಶ್ನೆಗಳಿಗೆ ಈವರೆಗೂ ಉತ್ತರ ಸಿಕ್ಕಿಲ್ಲ.


ಆದರೆ ಇದೀಗ ಕೆಲ ದಿನಗಳ ಹಿಂದಿನಿಂದ ಯಶ್​​ ಬಾಲಿವುಡ್​​ಗೆ ಎಂಟ್ರಿ ಕೊಟ್ಟು ರಾವಣನ ಪಾತ್ರ ಮಾಡಲಿದ್ದಾರೆ ಎಂಬ ಚರ್ಚೆಗಳು ಶುರುವಾಗಿವೆ. ಬಾಲಿವುಡ್‌ನ ಬಿಗ್​ ಬಜೆಟ್​​​ಅ ಸಿನಿಮಾಗಳಲ್ಲಿ ರಾಮಾಯಣ ಕೂಡಾ ಒಂದು.


ಯಶ್​ ರಾವಣನ ಪಾತ್ರ ಮಾಡ್ತಾರಂತೆ ಅನ್ನೋ ಮಾತುಗಳು ಮೊದಲೆಲ್ಲಾ ಕೇವಲ ಗಾಸಿಪ್​​ ಎನ್ನಲಾಗ್ತಿತ್ತು. ಆದರೆ, ಈಗೀಗ ಇದು ನಿಜವೇ ಅನ್ನೋ ಸುದ್ದಿ ಬಾಲಿವುಡ್​​​​​​ನಲ್ಲಿ ಕೇಳಿ ಬರುತ್ತಿದೆ.


ನಿರ್ದೇಶಕ ನಿತೇಶ್ ತಿವಾರಿ, ರಾಮಾಯಣ ಚಿತ್ರವನ್ನು ನಿರ್ದೇಶಿಸಲಿದ್ದು, ನಿರ್ದೇಶಕ 'ರಾಮಾಯಣ' ಟ್ರೈಲಜಿ ಅಂದ್ರೆ ರಾಮಾಯಣದ ಕಥೆಯನ್ನು ಮೂರು ಭಾಗಗಳ ಚಿತ್ರವನ್ನಾಗಿ ಮಾಡೋಕೆ ತಯಾರಿ ನಡೆಸಿದ್ದಾರೆ ಎನ್ನಲಾಗಿದೆ.


ಈ ಬಿಗ್​​ ಬಜೆಟ್​ ಸಿನಿಮಾವನ್ನ ಮಂಟೇನಾ ನಿರ್ಮಿಸ್ತಿದ್ದಾರೆ. ಸೌತ್ ನಟಿ ಸಾಯಿ ಪಲ್ಲವಿ ಸೀತೆಯ ಪಾತ್ರ ಮಾಡಲಿದ್ದಾರೆ. ಅದೇ ರೀತಿ ರಾಕಿಂಗ್ ಸ್ಟಾರ್ ಯಶ್ ಇದ್ರಲ್ಲಿ ರಾವಣನ ಪಾತ್ರ ಮಾಡುತ್ತಾರೆ ಎನ್ನಲಾಗಿದೆ. ರಾವಣನ ಪಾತ್ರಕ್ಕೆ ದೊಡ್ಡ ಮಟ್ಟಿನ ಡಿಮ್ಯಾಂಡ್​​ ಇರೋ ಕಾರಣಭಕ್ಕೆ ಯಶ್​​ ಈ ಪಾತ್ರವನ್ನ ಒಪ್ಪಿಕೊಂಡಿದ್ದಾರೆ ಎನ್ನಲಾಗುತ್ತಿದೆ.


ರಾಮಾಯಣದಲ್ಲಿ ನಟಿಸೋಕೆ ಯಶ್ ಪಡೆಯುತ್ತಿರುವ ಸಂಭಾವನೆ ಬಗ್ಗೆ ಶಾಕಿಂಗ್​​ ವಿಚಾರವೊಂದು ಹೊರಬೀಳುತಿದೆ.


ಯಶ್ ಬರೋಬ್ಬರಿ 100 ರಿಂದ 150 ಕೋಟಿ ರೂಪಾಯಿ ಡಿಮ್ಯಾಂಡ್ ಮಾಡಿದ್ದಾರಂತೆ. ಇದ್ರಲ್ಲಿ ಕಮ್ಮಿ ಅಂದರೂ 100 ಕೋಟಿ ರೂಪಾಯಿ ಪೇಮೆಂಟ್ ಪಡೆದಿದ್ದಾರೆ ಎನ್ನಲಾಗಿದೆ. ಆದರೆ, ಇನ್ನುಳಿದ ಹಣ ಚಿತ್ರತಂಡಕ್ಕೆ ಬೇಕಾಗಿರುವ ಡೇಟ್ಸ್ ಮತ್ತು ಎಷ್ಟು ದಿನಗಳ ಶೂಟಿಂಗ್ ಎನ್ನುವುದರ ಮೇಲೆ ನಿಂತಿದೆ ಎನ್ನಲಾಗಿದೆ.