ನ್ಯೂಸ್

ಫ್ಯಾಮಿಲಿ ಜತೆಗೆ ಸಿಂಪಲ್​ ಆಗಿ ಹೊಸ ವರ್ಷ ಆಚರಿಸಿದ ರಾಕಿಂಗ್​ ಸ್ಟಾರ್​​ | Radhika Pandit & Yash

ಕೆಜಿಎಫ್​​ ಸಿನಿಮಾ ಮೂಲಕ ಪ್ಯಾನ್​ ಇಂಡಿಯಾ ಸ್ಟಾರ್​ ಆದ ಯಶ್​​​​​​​​​​ ಫ್ಯಾಮಿಲಿ ಮ್ಯಾನ್​​ ಎಂದರೆ ತಪ್ಪಲ್ಲ. ಅವರು ಶೂಟಿಂಗ್​ನಲ್ಲಿ ಬ್ಯುಸಿಯಿದ್ದರು ಸಮಯ ಮಾಡಿಕೊಂಡು ಅಥವಾ ಚಿತ್ರೀಕರಣ ಇಲ್ಲದ ಸಮಯವನ್ನು ತಮ್ಮ ಕುಟಂಬದೊಂದಿಗೆ ಕಳೆಯುತ್ತಾರೆ. ಇದು ರಾಧಿಕಾ ಪಂಡಿತ್​ ಅವರು ಆಗಾಗ್ಗೆ ಹಂಚಿಕೊಳ್ಳುವ ಫೋಟೋಗಳನ್ನು ನೋಡಿದ್ರೆ ತಿಳಿಯುತ್ತದೆ.(Radhika Pandit & Yash)

ಹಲವರು ಪಬ್​​ ಅಥವಾ ಪಾರ್ಟಿ ಮಾಡುತ್ತಾ ಮೂಲಕ ಹೊಸ ವರ್ಷವನ್ನು ಬರಮಾಡಿಕೊಂಡಿದ್ದಾರೆ. ಆದರೆ ಸ್ಯಾಂಡಲ್​ವುಡ್​ ಸ್ಟಾರ್​ ಕಪಲ್​​​ ರಾಧಿಕಾ ಪಂಡಿತ್​ ಮತ್ತು ಯಶ್​​​ ಕುಟುಂಬದ ಜತೆಗೆ ಹೊಸ ವರ್ಷಾಚರಣೆಯನ್ನು ಮಾಡಿದ್ದಾರೆ. ಸದ್ಯ ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

ಬೆಂಗಳೂರಿನ ಗಾಲ್ಫ್​​ಕೋರ್ಸ್​ ಬಳಿ ಇರುವ ಪ್ರೆಸ್ಟೀಜ್​ ಅಪಾರ್ಟ್​ಮೆಂಟ್​​ನಲ್ಲಿ ಯಶ್​ ಫ್ಲ್ಯಾಟ್​ ಹೊಂದಿದ್ದಾರೆ. ಈ ನಿವಾದಲ್ಲಿಯೇ ಮಕ್ಕಳು ಮತ್ತು ಪತ್ನಿ ರಾಧಿಕಾ ಅವರೊಂದಿಗೆ ಸಿಂಪಲ್​ ಆಗಿ ನ್ಯೂಇಯರ್ ಸೆಲೆಬ್ರೇಷನ್​ ಮಾಡಿದ್ದಾರೆ. ಯಶ್ ಹಾಗೂ ರಾಧಿಕಾ ಪಂಡಿತ್ ಅವರು ಪೆಂಟ್​ಹೌಸ್​ನಲ್ಲಿರುವ ಸೋಫಾ ರೀತಿಯಲ್ಲಿರುವ ವಸ್ತುವಿನ ಮೇಲೆ ಕುಳಿತಿದ್ದಾರೆ. ಆಯ್ರಾ ಯಶ್ ಕಾಲ ಮೇಲೆ ಕುಳಿತರೆ, ಯಥರ್ವ್ ಅಲ್ಲಿಯೇ ಪಕ್ಕದಲ್ಲಿ ಕುಳಿತಿದ್ದಾನೆ. ಈ ಫೋಟೋಗಳನ್ನು ನೋಡಿ ಅಭಿಮಾನಿಗಳು ಖುಷ್​ ಆಗಿದ್ದಾರೆ.

ರಾಧಿಕಾ ಪಂಡಿತ್ ಅವರು ಇತ್ತೀಚೆಗೆ ಕ್ರಿಸ್​ಮಸ್ ಸಂದರ್ಭದಲ್ಲಿ ಮಕ್ಕಳ ಜತೆ ಕೇಕ್ ಕತ್ತಿರುಸುತ್ತಿರುವ ಫೋಟೋ ವೈರಲ್ ಆಗಿತ್ತು. ಈ ಫೋಟೋಗೆ ಫ್ಯಾನ್ಸ್ ಪ್ರೀತಿಯಿಂದ ಪ್ರತಿಕ್ರಿಯಿಸಿದ್ದರು. ಈ ಮುದ್ದಾದ ಕುಟುಂಬ ನೋಡಿ ಅನೇಕರಿಗೆ ಖುಷಿ ಆಗಿದೆ.