ನ್ಯೂಸ್

ಬಸ್​ ನಿಲ್ದಾಣದಲ್ಲಿ‌ದ್ದ KSRTC ಬಸ್ಸನ್ನೇ ಕದ್ದ ಕಿಲಾಡಿಗಳು!

ಕಲಬುರಗಿ: ಬಸ್ ನಿಲ್ದಾಣದಲ್ಲಿ ನಿಲ್ಲಿಸಿದ್ದ ಕೆಎಸ್ಆರ್​ಟಿಸಿ ಬಸ್ಸನ್ನೆ ಈ ಖತರ್ನಾಕ್ ಕಳ್ಳರು ಎಗರಿಸಿದ್ದಾರೆ! ಈ ವಿಚಿತ್ರ ಘಟನೆ ಕಲಬುರಗಿ ಜಿಲ್ಲೆಯ ಚಿಂಚೋಳಿ ಬಸ್ ನಿಲ್ದಾಣದಲ್ಲಿ ಇಂದು ಮುಂಜಾನೆ 3:30ಕ್ಕೆ ನಡೆದಿದೆ.

ಬೀದರ್​ನ ಬಸ್ ಡಿಪೋ ನಂಬರ್ 2ಗೆ ಸೇರಿದ ಸರ್ಕಾರಿ ಬಸ್ಸನ್ನು ಕಳ್ಳರು ಕಲಬುರಗಿ ಜಿಲ್ಲೆಯ ಚಿಂಚೋಳಿ ಬಸ್ ನಿಲ್ದಾಣದಿಂದ ಕದ್ದೊಯ್ದಿದ್ದಾರೆ. ಇವರು ಕದ್ದೊಯ್ದ ಬಸ್​ನ ಸಂಖ್ಯೆ KA38 F 971 ಆಗಿದೆ.

ನಸುಕಿನ ಜಾವ 3:30 ರ ಸುಮಾರಿಗೆ ಚಾಲಕ ಹಾಗೂ ಬಸ್​ ನಿರ್ವಾಹಕ ಇಬ್ಬರೂ ವಿಶ್ರಾಂತಿ ಕೋಣೆಯಲ್ಲಿ ಮಲಗಿದ್ದಾಗ ಬಸ್ ಈ ಕಳ್ಳರು ಬಸ್​ ಕಳ್ಳತನ ಮಾಡಿದ್ದಾರೆ. ಬೆಳಗ್ಗೆ ಎದ್ದು ನೋಡಿದಾಗ ಬಸ್​ ನಾಪತ್ತೆಯಾಗಿದ್ದು ಈ ಬಗ್ಗೆ ವರದಿ ಮಾಡಿದ್ದಾರೆ. ಆ ಸಂದರ್ಭ ಅಲ್ಲಿದ್ದ ಸಿಸಿಟಿವಿ ಕ್ಯಾಮರಾದಲ್ಲಿ ಬೆಳಗಿನ ಜಾವ 3:30ರ ಸುಮಾರಿಗೆ ಬಸ್​ ನಿರ್ಗಮನ ದ್ವಾರದಿಂದ ಹೊರ ಹೋಗಿದ್ದು ಕಂಡುಬಂದಿದೆ.

ಕದ್ದ ಬಸ್ಸನ್ನು ಮಿರಿಯಾಣ ಮಾರ್ಗವಾಗಿ ತಾಂಡುರ ಮೂಲಕ ತೆಲಂಗಾಣದ ಕಡೆಗೆ ಕಳ್ಳರು ತೆಗೆದುಕೊಂಡು ಹೋಗಿದ್ದು ಬಸ್ ಹುಡುಕಾಟದ ಸಲುವಾಗಿ ತೆಲಂಗಾಣಕ್ಕೆ ಎರಡು ಪೊಲೀಸ್ ತಂಡ ತೆರಳಿವೆ. ಸ್ಥಳಕ್ಕೆ ಚಿಂಚೋಳಿ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ.